ಸಣ್ಣ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಶುಲ್ಕ ವಿನಾಯಿತಿ ಅರ್ಜಿ ಸಲ್ಲಿಸಲು ಎಂಎಸ್‍ಎಂಇ ಕೌನ್ಸಿಲ್ ಮನವಿ
ಮೈಸೂರು

ಸಣ್ಣ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಶುಲ್ಕ ವಿನಾಯಿತಿ ಅರ್ಜಿ ಸಲ್ಲಿಸಲು ಎಂಎಸ್‍ಎಂಇ ಕೌನ್ಸಿಲ್ ಮನವಿ

June 11, 2020

ಮೈಸೂರು, ಜೂ.10-ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‍ಎಂಇ)ಗಳ ಎರಡು ತಿಂಗಳ ವಿದ್ಯುತ್ ಶುಲ್ಕ ಪಾವತಿಗೆ ವಿದ್ಯುತ್ ಸರಬರಾಜು ಕಂಪೆನಿಗಳು ವಿನಾಯಿತಿ ನೀಡಿವೆ ಎಂದು ಎಂಎಸ್‍ಎಂಇ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

ಈ ಸೌಲಭ್ಯ ಪಡೆಯಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳು, ಪ್ರಿಂಟಿಂಗ್ ಪ್ರೆಸ್, ದೋಬಿ ಶಾಪ್, ಟೈಲರಿಂಗ್ ಉದ್ಯಮ ನಡೆಸುವವರು ಸಂಬಂಧಪಟ್ಟ ವಿದ್ಯುತ್ ಉಪವಿಭಾಗದ ಸಹಾಯಕ ಅಭಿಯಂತರರಿಗೆ ಅರ್ಜಿ ಸಲ್ಲಿಸ ಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಯಮಿಗಳು 2020ರ ಮೇ 8ರೊಳಗೆ ಪಡೆದಿರುವ ಉದ್ಯೋಗ್ ಆಧಾರ್ ಮತ್ತು ವಿದ್ಯುತ್ ಬಿಲ್‍ನ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಈ ಸಂಬಂಧ ಎಂಎಸ್‍ಎಂಇ ಕೌನ್ಸಿಲ್ ತನ್ನ ಸದಸ್ಯರಿಗೆ ಉದ್ಯೋಗ್ ಆಧಾರ್ ಮೆಮೋರಂಡಮ್, ಎಂಎಸ್‍ಎಂಇ ಡೇಟಾ ಬ್ಯಾಂಕ್ ಸಹಿತ, ವಿದ್ಯುತ್ ಕಡ್ಡಾಯ ಶುಲ್ಕ ವಿನಾಯಿತಿ ಅರ್ಜಿಯನ್ನು ಸಿದ್ಧಪಡಿಸಿಕೊಡುತ್ತಿದ್ದು, ಉದ್ಯಮಿ ಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

Translate »