ಜಿಲ್ಲೆಯಲ್ಲಿ ಸೊರಗಿದ ಸೋಂಕು
ಮಂಗಳವಾರ 125 ಮಂದಿಗೆ ಕೋವಿಡ್
203 ಮಂದಿ ಗುಣಮುಖ-ಡಿಸ್ಚಾರ್ಜ್
ರಾಜ್ಯದಲ್ಲಿ 2756 ಮಂದಿಗೆ ಸೋಂಕು, 7,140 ಗುಣಮುಖ, 26 ಸಾವು
ಮೈಸೂರು, ನ.3(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮಂಗಳ ವಾರ ಕೊರೊನಾ ಸೋಂಕಿನಿಂದ ಒಂದೂ ಸಾವು ವರದಿಯಾಗಿಲ್ಲ.
ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 125 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 48,056ಕ್ಕೆ ಏರಿಕೆಯಾಗಿದೆ.
ಮಂಗಳವಾರ 203 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಈವರೆಗೆ ಒಟ್ಟು 45,658 ಮಂದಿ ಗುಣಮುಖರಾದಂತಾಗಿದೆ. ಇಂದು ಒಂದೂ ಸಾವಿನ ವರದಿಯಾಗಿಲ್ಲ. ಆರಂಭದಿಂದ ಈವರೆಗೆ 961 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ಇನ್ನೂ 1,437 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ರಾಜ್ಯದ ವಿವರ: ರಾಜ್ಯದಲ್ಲಿ ಮಂಗಳವಾರ 2,756 ಮಂದಿಗೆ ಸೋಂಕು ತಗುಲಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,32,396ಕ್ಕೆ ಏರಿದೆ. ಇದೇ ವೇಳೆ 7,140 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 7,80,735 ಮಂದಿ ಸೋಂಕು ಮುಕ್ತರಾಗಿದ್ದಾರೆ. ಮಂಗಳವಾರ ರಾಜ್ಯದಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 11,247 ಮಂದಿ ಮೃತಪಟ್ಟಿದ್ದಾರೆ. ಇನ್ನೂ 40,395 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು: ಬಾಗಲಕೋಟೆ 22, ಬಳ್ಳಾರಿ 43, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 1,479, ಬೀದರ್ 6, ಚಾಮರಾಜನಗರ 25, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 55, ಚಿತ್ರದುರ್ಗ 35, ದಕ್ಷಿಣ ಕನ್ನಡ 123, ದಾವಣಗೆರೆ 39, ಧಾರವಾಡ 24, ಗದಗ 5, ಹಾಸನ 115, ಹಾವೇರಿ 9, ಕಲ ಬುರಗಿ 22, ಕೊಡಗು 9, ಕೋಲಾರ 85, ಕೊಪ್ಪಳ 15, ಮಂಡ್ಯ 89, ಮೈಸೂರು 125, ರಾಯಚೂರು 14, ರಾಮನಗರ 19, ಶಿವಮೊಗ್ಗ 94, ತುಮಕೂರು 108, ಉಡುಪಿ 20, ಉತ್ತರಕನ್ನಡ 46, ವಿಜಯಪುರ 50, ಯಾದಗಿರಿ 7 ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿವೆ.