ಸೋಮವಾರ ಮೈಸೂರಲ್ಲಿ 36 ಮಂದಿಗೆ ಸೋಂಕು
ಮೈಸೂರು

ಸೋಮವಾರ ಮೈಸೂರಲ್ಲಿ 36 ಮಂದಿಗೆ ಸೋಂಕು

January 12, 2021

38 ಜನ ಗುಣಮುಖ ಸೋಂಕಿನಿಂದ ಓರ್ವ ಸಾವು
ಮೈಸೂರು, ಜ.11(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 36 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 52,828ಕ್ಕೆ ಏರಿಕೆಯಾದರೆ, 51,519 ಮಂದಿ ಗುಣಮುಖರಾಗಿದ್ದಾರೆ. ಇಂದು ಮೃತಪಟ್ಟಿರುವ ಒಬ್ಬರು ಸೇರಿ ಇಲ್ಲಿಯವರೆಗೆ 1,020 ಮಂದಿ ಸಾವನ್ನಪ್ಪಿದ್ದು, 289 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಇಂದು 496 ಮಂದಿಗೆ ಸೋಂಕು ತಗುಲಿದ್ದು, 797 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,28,055ಕ್ಕೆ ಏರಿಕೆಯಾಗಿದ್ದು, 9,06,548 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು 4 ಮಂದಿ ಸಾವನ್ನಪ್ಪಿದ್ದು, ಈವರೆಗೆ 12,144 ಮಂದಿ ಮೃತಪಟ್ಟಿದ್ದಾರೆ. 9,344 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 282, ಬೀದರ್ 5, ಚಾಮರಾಜನಗರ 2, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 5, ಚಿತ್ರದುರ್ಗ 14, ದಕ್ಷಿಣಕನ್ನಡ 10, ದಾವಣಗೆರೆ 4, ಧಾರವಾಡ 19, ಗದಗ 3, ಹಾಸನ 16, ಹಾವೇರಿ 2, ಕಲಬುರಗಿ 14, ಕೊಡಗು 12, ಕೋಲಾರ 4, ಕೊಪ್ಪಳ 4, ಮಂಡ್ಯ 4, ರಾಯಚೂರು 5, ಶಿವಮೊಗ್ಗ 4, ತುಮಕೂರು 12, ಉಡುಪಿ 1, ಉತ್ತರಕನ್ನಡ 7, ವಿಜಯಪುರ 5, ಯಾದಗಿರಿ 2 ಪ್ರಕರಣಗಳು ವರದಿಯಾಗಿವೆ.

Translate »