ಲಡಾಖ್ ಗಡಿ ಘರ್ಷಣೆಯಲ್ಲಿ ಚೀನಾದ 40 ಯೋಧರು ಸಾವು
ಮೈಸೂರು

ಲಡಾಖ್ ಗಡಿ ಘರ್ಷಣೆಯಲ್ಲಿ ಚೀನಾದ 40 ಯೋಧರು ಸಾವು

June 22, 2020

ನವದೆಹಲಿ: ಪೂರ್ವ ಲಡಾಖ್ ಗಡಿ ಯಲ್ಲಿನ ಗಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಚೀನಾ ಹಾಗೂ ಭಾರ ತೀಯ ಸೇನಾ ಪಡೆಗಳ ನಡುವಣ ನಡೆದ ಮುಖಾಮುಖಿ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಮಾಜಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಮೊದಲ ಬಾರಿಗೆ ಚೀನಾ ದೇಶದ ಸಾವು -ನೋವುಗಳ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ ಚೀನಾ ದೇಶದವ ರಿಗೆ ಇದಕ್ಕಿಂತಲೂ ದುಪ್ಪಟು ಪ್ರಮಾಣದ ಸೈನಿಕರು ಸಂಘರ್ಷದಲ್ಲಿ ಮೃತ ಪಟ್ಟಿದ್ದಾರೆ ಎಂದು ಹಾಲಿ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವರೂ ಆಗಿರುವ ಜನರಲ್ ವಿ.ಕೆ.ಸಿಂಗ್ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಪಿಎಲ್‍ಎ ಸೈನಿಕರ ಸಾವಿನ ಬಗ್ಗೆ ಗೊಂದಲವಿದೆ. ಚೀನಾ ಸತ್ತವರ ಸಂಖ್ಯೆಯನ್ನು ಮುಚ್ಚಿಡುತ್ತಿದೆ. 1962ರ ಯುದ್ಧದ ಸಂದರ್ಭದಲ್ಲೂ ಇದೇ ರೀತಿ ಮಾಡಿತ್ತು. ಸಾವು ನೋವುಗಳನ್ನು ಅದು ಸ್ವೀಕರಿಸುವುದಿಲ್ಲ ಎಂದು ಜನರಲ್ ಸಿಂಗ್ ತಿಳಿಸಿದ್ದಾರೆ. ವಾಸ್ತವ ಗಡಿ ನಿಯಂತ್ರಣ ರೇಖೆ ಹಾಗೂ ದೇಶದ ಗಡಿಯೊಳಗೆ ಚೀನಾ ಸೈನಿಕ ಪ್ರವೇಶದ ಬಗ್ಗೆ ಊಹಾಪೆÇೀಹಗಳು ಎದ್ದಿರುವಂತೆ, ಚೀನಾ ಸೇನಾ ನಮ್ಮ ಗಡಿಯೊಳಗೆ ಪ್ರವೇಶಿಸಿಲ್ಲ ಎಂದು ವಿ.ಕೆ. ಸಿಂಗ್ ಸ್ಪಷ್ಪಪಡಿಸಿದ್ದಾರೆ.

Translate »