ಮೈಸೂರು, ಡಿ.10(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಗುರುವಾರ 53 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 27 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ ಇಂದು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 51,268ಕ್ಕೆ ಏರಿಕೆಯಾದರೆ, ಇದೂವರೆಗೆ 49,910 ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,003 ಮಂದಿ ಮೃತಪಟ್ಟಿದ್ದು, 355 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.
ರಾಜ್ಯದ ವಿವರ: ರಾಜ್ಯದಲ್ಲಿ ಗುರುವಾರ 1238 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,97,801ಕ್ಕೆ ಏರಿಕೆಯಾಗಿದೆ. ಇಂದು ಬಿಡು ಗಡೆಯಾದ 5076 ಮಂದಿ ಸೇರಿದಂತೆ ಈವರೆಗೆ 8,66,664 ಮಂದಿ ಬಿಡು ಗಡೆಯಾಗಿದ್ದಾರೆ. ಇನ್ನೂ 19,206 ಸಕ್ರಿಯ ಪ್ರಕರಣಗಳಿವೆ. ಇಂದು 12 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 11,912 ಮಂದಿ ಮೃತಪಟ್ಟಂತಾಗಿದೆ.
ಬಾಗಲಕೋಟೆ 07, ಬಳ್ಳಾರಿ 27, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 701, ಬೀದರ್ 02, ಚಾಮರಾಜನಗರ 22, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು 09, ಚಿತ್ರದುರ್ಗ 22, ದಕ್ಷಿಣಕನ್ನಡ 30, ದಾವಣಗೆರೆ 15, ಧಾರವಾಡ 09, ಗದಗ 03, ಹಾಸನ 42, ಹಾವೇರಿ 10, ಕಲಬುರಗಿ 26, ಕೊಡಗು 13, ಕೋಲಾರ 13, ಕೊಪ್ಪಳ 04, ಮಂಡ್ಯ 46, ರಾಯಚೂರು 10, ರಾಮನಗರ 13, ಶಿವಮೊಗ್ಗ 05, ತುಮಕೂರು 36, ಉಡುಪಿ 15, ಉತ್ತರಕನ್ನಡ 12, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ.