ರಾಜ್ಯದಲ್ಲಿ ಭಾನುವಾರ 55 ಕೊರೊನಾ ಪ್ರಕರಣ: 1147ಕ್ಕೇರಿದ ಸೋಂಕು
ಮೈಸೂರು

ರಾಜ್ಯದಲ್ಲಿ ಭಾನುವಾರ 55 ಕೊರೊನಾ ಪ್ರಕರಣ: 1147ಕ್ಕೇರಿದ ಸೋಂಕು

May 18, 2020

ಬೆಂಗಳೂರು, ಮೇ 17- ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 55 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿ ತರ ಸಂಖ್ಯೆ 1147ಕ್ಕೇರಿದ್ದು, ಮೃತಪಟ್ಟ ವರ ಸಂಖ್ಯೆ 37ಕ್ಕೇರಿಕೆಯಾಗಿದೆ. 509 ಜನರು ಗುಣಮುಖರಾಗಿದ್ದಾರೆ. ಭಾನು ವಾರ ಮಂಡ್ಯದಲ್ಲಿ 22, ಕಲಬುರ್ಗಿ 10, ಹಾಸನ 6, ಯಾದಗಿರಿ 3, ಕೋಲಾರ 3, ದಕ್ಷಿಣ ಕನ್ನಡ 2, ಧಾರ ವಾಡ 4, ಶಿವಮೊಗ್ಗ 2, ವಿಜಯ ಪುರದಲ್ಲಿ 1 ಪ್ರಕರಣ ವರದಿಯಾಗಿದೆ. ಇನ್ನು ಭಾನುವಾರ ರಾಜ್ಯದಲ್ಲಿ ಒಟ್ಟಾರೆ 13 ಮಂದಿ ಕೊರೊನಾದಿಂದ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಇದೀಗ ರಾಜ್ಯದಲ್ಲಿ ಸದ್ಯ 600 ಸಕ್ರಿಯ ಕೊರೊನಾ ಪ್ರಕರಣ ಗಳು ಇವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

 

 

 

 

Translate »