ಅಂಗನವಾಡಿಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಒತ್ತಾಯಿಸಿ
ಹಾಸನ

ಅಂಗನವಾಡಿಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಒತ್ತಾಯಿಸಿ

May 29, 2019

ನಾಳೆ ವಿಧಾನಸೌಧ ಚಲೋ: ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್
ಹಾಸನ: ಪೂರ್ವ ಪ್ರಾಥ ಮಿಕ ತರಗತಿಗಳಾದ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲೇ ಪ್ರಾರಂಭಿಸು ವಂತೆ ಒತ್ತಾಯಿಸಿ ಮೇ 30ರಂದು ಅಂಗನ ವಾಡಿ ನೌಕರರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ 2019ರಿಂದ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿದ್ದು, ಸರ್ಕಾರದ ಈ ಆದೇಶ ಒಂದು ಸರ್ಕಾರದ ಸಂಸ್ಥೆ ಯನ್ನು ಸಬಲಗೊಳಿಸಲು ಇನ್ನೊಂದು ಸಂಸ್ಥೆಯನ್ನು ಬಲಹೀನಗೊಳಿಸುವ ಕ್ರಮವಾಗಿದೆ.
ಇದೊಂದು ತಾರತಮ್ಯದ ಕ್ರಮವಾಗಿದ್ದು, ಸರ್ಕಾರದ ಈ ಆದೇಶ ವಿರೋಧಿಸಿ ಪೂರ್ವ ಪ್ರಾಥಮಿಕ ತರಗತಿ ಗಳನ್ನು ಅಂಗನವಾಡಿಗಳಲ್ಲೇ ಆರಂಭಿಸು ವುದು ನಮ್ಮ ಆಗ್ರಹವಾಗಿದೆ ಎಂದರು. ಸರ್ಕಾರ ಆದೇಶವನ್ನು ಈ ಕೆಳಕಂಡ ಕಾರಣಗಳಿಗೆ ಪುನರ್ ಪರಿಶೀಲಿಸಿ ಅಗತ್ಯ ಮಾರ್ಪಾಡು ಮಾಡಬೇಕೆಂದೂ ಅವರು ಒತ್ತಾಯಿಸಿದರು.

ಈ ಆದೇಶ ತರುವ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೊಟ್ಟಿಗೆ ಮತ್ತು ಮಕ್ಕಳ, ಶಿಕ್ಷಣ ತಜÐರೊಂ ದಿಗೆ, ಸಂಘಟನೆಗಳೊಂದಿಗೆ ಸಂವಾದ ನಡೆಸದೇ ಏಕಮುಖವಾಗಿ ಸುತ್ತೋಲೆ ತರಲಾಗಿದೆ. 1975ರಲ್ಲಿ ಬಂದ ಐಸಿಡಿ ಎಸ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳು ಸ್ಥಾಪನೆಯಾಗಿದ್ದು 3ರಿಂದ 6 ವರ್ಷದ ಮಕ್ಕಳಲ್ಲಿ ಈಗಾಗಲೇ ರಾಜ್ಯಾ ದ್ಯಂತ 16,40,170 ಮಕ್ಕಳು ಅಂಗನ ವಾಡಿಗಳಲ್ಲಿ ದಾಖಲಾಗಿದ್ದಾರೆ. ಇದೇ ಮಕ್ಕಳೇ ಈಗ ಸರ್ಕಾರಿ ಶಾಲೆಗಳಲ್ಲಿ ಹೊಸ ದಾಗಿ ಪಾರಂಭವಾಗುವ ಪಬ್ಲಿಕ್ ಶಾಲೆ ಗಳಿಗೆ ದಾಖಲಾಗಬೇಕಾಗುತ್ತದೆ ಎಂದರು.

ಮಕ್ಕಳು ಅಲ್ಲಿಗೆ ಹೋದರೆ ಅಂಗನ ವಾಡಿ ಕೇಂದ್ರದ ಅಗತ್ಯವೇ ಬರುವುದಿಲ್ಲ ಏಕೆಂದರೆ 3 ವರ್ಷದೊಳಗಿನ ಮಕ್ಕಳಿಗೆ ಮನೆಗೆ ಆಹಾರ ಕೊಡಲಾಗುತ್ತದೆ. ಮಾನವ ಸಂಪನ್ಮೂಲ ಬೆಳವಣಿಗೆಗೆ ಇರುವ ಏಕೈಕ ಯೋಜನೆ 1975ರಿಂದ ಪ್ರಾರಂಭವಾಗಿ ಇಂದು ದೇಶದಲ್ಲಿ ಅತ್ಯಂತ ಬೃಹತ್ ಯೋಜನೆಯಾಗಿ ಕಾರ್ಯ ನಿರ್ವ ಹಿಸುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿ 40ರಷ್ಟು ದೈಹಿಕ ಮತ್ತು 80ರಷ್ಟು ಮಾನ ಸಿಕ ಬೆಳವಣಿಗೆ ಆಗುತ್ತದೆ. ಈ ಸಂದರ್ಭ ಅಗತ್ಯ ಪೌಷ್ಠಿಕ ಆಹಾರ ಪ್ರಾಥಮಿಕ ಆರೋಗ್ಯ ಸವಲತ್ತುಗಳು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಜೊತೆಯಲ್ಲಿರಬೇಕು ಎಂಬ ಕಾರಣಕ್ಕೆ 4200 ಕೋಟಿಯನ್ನು ಈಗಾಗಲೇ ಖರ್ಚು ಮಾಡಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳನ್ನು ನಡೆಸಿ ಕೊಳ್ಳುವ ವಿಧಾನದಲ್ಲಿ ವಿಶೇಷ ತರಬೇತಿ ಅಂಗನವಾಡಿ ನೌಕರರಲ್ಲಿದೆ. ಅದು ಶಾಲಾ ಶಿಕ್ಷಕರಲ್ಲಿ ಇರುವುದಿಲ್ಲ ಎಂದು ದೂರಿದರು.

ಐಸಿಡಿಎಸ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಇರುವ ವ್ಯವಸ್ಥೆ ಬಲಿಷ್ಠಗೊಳಿಸುವ ಬದಲಿಗೆ, ಇದೇ ತರಹದ ಮತ್ತೊಂದು ವ್ಯವಸ್ಥೆ ತರುವುದು ರಾಜ್ಯದ ಬೊಕ್ಕಸಕ್ಕೆ ನಷ್ಟ ವಾಗುತ್ತದೆ. ನಷ್ಟದ ಜೊತೆಗೆ ಯೋಜನಾ ಆಯೋಗದ 9 ಮತ್ತು 10ನೇ ಪಂಚ ವಾರ್ಷಿಕ ಯೋಜನೆಗಳು 2011ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಗಳ ಆಶಯಗಳು ಸಂಪೂರ್ಣ ಮಣ್ಣು ಗೊಡುತ್ತವೆ ಎಂದು ಆತಂಕ ವ್ಯಕ್ತ ಪಡಿಸಿದರು. ಈ ಎಲ್ಲಾ ಕಾರಣಗಳಿಗಾಗಿ ಸರ್ಕಾರ ಈ ಆದೇಶ ರದ್ದು ಮಾಡ ಬೇಕೆಂದು ತಮ್ಮ ನಿರ್ಧಾರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಇಂದಿರಮ್ಮ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಉಪಾಧ್ಯಕ್ಷ ಶಾರದ, ಸುಮಿತ್ರ ಇತರರು ಉಪಸ್ಥಿತರಿದ್ದರು.

ವಿಧಾನಸೌಧ ಚಲೋ ಹೋರಾಟದ ಬೇಡಿಕೆಗಳು

  • ಈಗಿರುವ ಸಹಾಯಕಿಯರು ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳನ್ನಷ್ಟೇ ಮಾಡಲು ಸಾಧ್ಯ. ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಮಾತೃಪೂರ್ಣ ಕೆಲಸಕ್ಕೆ ಒಬ್ಬ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು.
  • 1995ರಿಂದ ಆಯ್ಕೆಯಾಗಿರುವ ಕಾರ್ಯಕರ್ತೆಯರು ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗಾಗಿ ಅವರಿಗೇ ಎಲ್‍ಕೆಜಿ-ಯುಕೆಜಿ ಶಿಕ್ಷಕ ತರಬೇತಿ ನೀಡಿದರೆ, ಅನುಭವದೊಂದಿಗೆ ಅಂಗನವಾಡಿ ಕೆಂದ್ರಗಳಲ್ಲಿಯೇ ಪಾಲನೆ ಮತ್ತು ಕಲಿಕೆ ನಡೆಯುತ್ತದೆ.
  • ಅಂಗನವಾಡಿಗಳಲ್ಲಿ ಪೂರ್ವ ಪ್ರಾರ್ಥಮಿಕ ಶಿಕ್ಷಣ ಪೂರೈಸಿದ ಮಕ್ಕಳಿಗೆ ವರ್ಗಾವಣೆ ಪತ್ರದೊಂದಿಗೆ(ಟಿಸಿ) ಶಾಲೆಗೆ 1ನೇ ತರಗತಿಗೆ ಸೇರಿಸುವ ವ್ಯವಸ್ಥೆ ಜಾರಿಗೆ ತರಬೇಕು.
  • ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರ್ಕಾರಿ ಸೌಲಭ್ಯಗಳೆಂದೂ ಘೋಷಿಸಬೇಕು.
  • ಖಾಸಗಿ ಕಾನ್ವೆಂಟ್ ಮತ್ತು ಶಾಲೆಗಳಿಗೆ ಕೊಡುವ ಅನುಮತಿಯನ್ನು ರದ್ದು ಮಾಡಬೇಕು.
  • ಶಿಕ್ಷಣ ಇಲಾಖೆಯಲ್ಲಿ ಖರ್ಚು ಮಾಡುವ ಸ್ವಲ್ಪ ಹಣದಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ 30ರಂದು ವಿಧಾನಸೌಧ ಚಲೋ ನಡೆಸುತ್ತಿರುವುದಾಗಿ ತಮ್ಮ ಉದ್ದೇಶವನ್ನು ಹೇಳಿದರು.

Translate »