- ಲಾಕ್ ಡೌನ್ ವಿಸ್ತರಣೆಗೆ ಜಿಲ್ಲೆಯ ಶಾಸಕರ ಒತ್ತಾಯ
- ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಲು ಸೂಚನೆ
ಮಂಡ್ಯ, ಏ.8(ನಾಗಯ್ಯ)-ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನನ್ನು ವಿಸ್ತರಿಸುವ ಕುರಿತಂತೆ ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದೆಂದು ಕಂದಾಯ ಸಚಿವರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದರು.
ಜಿಲ್ಲಾಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿಂದು ಕೋವಿಡ್-19 ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಒಂದು ವರ್ಗ, ಧರ್ಮ ಜನಾಂಗವನ್ನು ಗುರಿಯಾಗಿಸಬಾ ರದು. ಇದು ಯಾವುದೆ ಜನಾಂಗಕ್ಕೆ ಸಿಮೀತ ವಾದ ಸೋಂಕಲ್ಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಈಗ ಪತ್ತೆಯಾಗಿ ರುವ ಸೋಂಕಿತರು ಸಹ ತಾವಾಗಿಯೆ ಬಂದು ಚಿಕಿತ್ಸೆ ಪಡೆದಿಲ್ಲ. ನಮ್ಮ ಅಧಿಕಾರಿಗಳು ತನಿಖೆ ನಡೆಸಿದ ಪರಿಣಾಮ ಸಿಕ್ಕಿಬಿದ್ದವರಾ ಗಿದ್ದಾರೆ. ಆಯಾ ಕ್ಷೇತ್ರಗಳ ಶಾಸಕರು ಜನರ ಮನವೊಲಿಸಿ ಶಂಕಿತರನ್ನು ಚಿಕಿತ್ಸೆಗೆ ಕರೆತರಬೇಕಿದೆ. ಜಿಲ್ಲೆಯಲ್ಲಿ ರೈತರಿಂದ ತರಕಾರಿ, ಹಣ್ಣು, ಮಾರಾಟಕ್ಕೆ ಯಾವುದೆ ನಿಬರ್ಂಧ ವಿಧಿಸಬಾರದು. ಯಾವುದೇ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ದುಡಿಯುತ್ತಿರುವ ಯಾವುದೆ ನೌಕರರನ್ನು ಕೆಲಸದಿಂದ ಕೈ ಬಿಡುವಂತಿಲ್ಲ. ಈ ಕುರಿತು ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಲು ಸೂಚನೆ: ಕಂದಾಯ ಇಲಾಖೆ ಯು ವಿಧವಾ ವೇತನ, ಅಂಗವಿಕಲರ ವೇತನ ಮುಂತಾದ ವೇತನಗಳನ್ನು ಎರಡು ತಿಂಗಳು ಒಟ್ಟಿಗೆ ನೀಡಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಎರಡು ತಿಂಗಳ ಪಡಿತರ ನೀಡಲು ವ್ಯವಸ್ಥೆ ಮಾಡಲಾಗಿದ್ದು ಪಡಿತರ ನೀಡುವಾಗ ಬಯೋಮೆಟ್ರಿಕ್ ಸಮಸ್ಯೆಯಾದಲ್ಲಿ ಸಹಿ ತೆಗೆದುಕೊಂಡು ಪಡಿತರ ನೀಡಲು ಸೂಚಿಸ ಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಿರಾಶ್ರಿತರಾಗಿರುವಂತ ಕೂಲಿ ಕಾರ್ಮಿಕರು ಹಾಗೂ ಇತರೆ ಜನಾಂಗದವರಿಗೆ ಜಿಲ್ಲೆಯಲ್ಲಿರುವಂತಹ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ನೀಡಿ ಏನು ತೊಂದರೆಯಾಗದಂತೆ ಮೆಡಿಕಲ್ ಚೆಕಪ್ ಹಾಗೂ ಊಟದ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಲಾಕ್‍ಡೌನ್ ಮಾಡಿರುವಂತಹ ಪ್ರದೇಶ ಗಳಿಗೆ 15 ದಿನಗಳಿಗಾಗುವಷ್ಟು ಆಹಾರ, ಹಣ್ಣು ತರಕಾರಿಗಳನ್ನು ಉಚಿತವಾಗಿ ನೀಡಿ ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿಪತ್ತು ನಿರ್ವಹಣೆ 2005ರ ಕಾಯ್ದೆ ಯಡಿ ಯಾವುದೇ ಮದುವೆ, ಪ್ರಾರ್ಥನೆ, ಬೀಗರಕೂಟ ಹಾಗೂ ಇತರೆ ಸಮಾರಂಭ ಗಳಿಗೆ ಅನುಮತಿ ನೀಡುವಂತಿಲ್ಲ. ಯಾರಾ ದರೂ ನಿಧನರಾದರೆ ಅಂತಿಮ ಕಾರ್ಯಕ್ಕೆ 20 ಜನಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪಿ.ಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 2000 ರೂ.ಗಳನ್ನು, ಪಿ.ಎಂ ಗರೀಬ್ ಕಲ್ಯಾಣ ಯೋಜನೆಯಡಿ 500 ರೂ. ಗಳನ್ನು ಹಾಗೂ ಜನಧನ್ ಯೋಜನೆಯಡಿ ಸರ್ಕಾರವು ಜನರಿಗೆ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಿದೆ. ಒಂದು ಕಡೆ ಇದ್ದ ಮಾರುಕಟ್ಟೆಯನ್ನು ಇತರೆ 4 ಸ್ಥಳಗಳಿಗೆ ಸ್ಥಳಾಂತರ ಮಾಡು ವಂತೆ ಹೇಳಿದರು.
ದೆಹಲಿ ಜಮಾಯತ್ ಸಭೆಯಲ್ಲಿ ಭಾಗ ವಹಿಸಿದ್ದ ಪ್ರತಿಯೊಬ್ಬರನ್ನು ಯಾವುದೇ ಭಯ ಆತಂಕಗಳಿಲ್ಲದೆ ಚುನಾಯಿತ ಪ್ರತಿ ನಿಧಿಗಳು ಮತ್ತು ಅಧಿಕಾರಿ ವರ್ಗದವರು ಅವರ ಮನವೊಲಿಸಿ ಚಿಕಿತ್ಸೆಗೆ ಒಳಪಡಿಸ ಬೇಕು. ಅವರಲ್ಲಿ ಜ್ವರ ಹಾಗೂ ಇತರ ಲಕ್ಷಣಗಳು ಕಂಡು ಬಂದರೆ ಹೆಚ್ಚಿನ ಚಿಕಿತ್ಸೆಗೆ ಮುಂದಾಗಬೇಕು ಎಂದು ಹೇಳಿದರು.
ಅತ್ಯಾವಶ್ಯಕ ಸೇವೆಯ ಮೇರೆಗೆ ವೈದ್ಯರು, ಅಧಿಕಾರಿಗಳು, ಮತ್ತು ಮಾಧ್ಯಮದವರನ್ನು ಎಲ್ಲೂ ತಡೆಯಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಾಕ್ ಡೌನ್ ವಿಸ್ತರಣೆಗೆ ಜಿಲ್ಲೆಯ ಶಾಸಕರ ಒಲವು; ದೇಶಾದ್ಯಂತ ವಿಧಿಸಿರುವ ಲಾಕ್ ಡೌನ್‍ನನ್ನು ಏ.14ರ ನಂತರವೂ ಮುಂದು ವರಿಸುವಂತೆ ಜಿಲ್ಲೆಯ ಬಹುತೇಕ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ. ಕೆ.ಟಿ.ಶ್ರೀಕಂಠೇಗೌಡ. ಏಪ್ರಿಲ್ ಅಂತ್ಯದವರೆಗೆ ರಾಜ್ಯದಲ್ಲಿ ಲಾಕ್ ಡೌನ್ ನನ್ನು ವಿಸ್ತರಿಸುವುದು ಅನಿವಾರ್ಯವಿದೆ. ಜನರಿಗೆ ಅಗತ್ಯವಿರುವ ಮಾಸ್ಕ್ ಕೊರತೆ ಯಾಗಿದೆ. ಜೈಲಿನಲ್ಲಿರುವ ಖೈದಿಗಳು ಬಿಡು ವಾಗಿದ್ದು ಅವರ ಮೂಲಕ ಮಾಸ್ಕ್‍ಗಳನ್ನು ಹೊಲಿಸಿ ವಿತರಿಸುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್ ಆಶೋಕ್, ವಿಶ್ವ ಆರೋಗ್ಯ ಸಂಸ್ಥೆಯ ನಿಯಮದ ಪ್ರಕಾರ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯವಿಲ್ಲ.ಬದಲಿಗೆ ಸೋಂಕಿತರು. ಆರೈಕೆ ಮಾಡುವವರು ಧರಿಸುವುದು ಅವ ಶ್ಯಕ ಎಂದರು. ಶಾಸಕರಾದ ಅನ್ನದಾನಿ, ಸುರೇಶ್ ಗೌಡ ಸಹ ಲಾಕ್‍ಡೌನ್‍ನನ್ನು ವಿಸ್ತರಿಸುವುದು ಅನಿವಾರ್ಯವೆಂದರು.
ಸಭೆಯಲ್ಲಿ ಸಚಿವ ಕೆ.ಸಿ.ನಾರಾಯಣ ಗೌಡ, ಶಾಸಕರಾದ ಸಿ.ಎಸ್.ಪುಟ್ಟರಾಜು, ಕೆ.ಅನ್ನದಾನಿ, ಸುರೇಶ್‍ಗೌಡ, ಎಂ.ಶ್ರೀನಿ ವಾಸ್,ಅಪ್ಪಾಜಿಗೌಡ, ಮತ್ತು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾ ಯತ್ ಸಿಇಓ ಯಾಲಕ್ಕಿಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.