ಮೈಸೂರು, ಮೇ 13(ಆರ್‍ಕೆಬಿ)- ಮೈಸೂರಿನ ಖಾಸಗಿ ಕಂಪ ನಿಯ ನಿವೃತ್ತ ನೌಕರ ಸುರೇಶ್ ಸುಬ್ಬರಾವ್ ಮತ್ತು ನ್ಯೂರಾಲ ಜಿಸ್ಟ್ ಡಾ.ರತ್ನವಲ್ಲಿ ದಂಪತಿ ಮೈಸೂರಿನ ಬನ್ನಿಮಂಟಪದ ಯಲ್ಲಮ್ಮ ಕಾಲೋನಿಯಲ್ಲಿ 62 ಕೊರವಂಜಿ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ. `ಕೊರವಂಜಿಗಳ ಬದುಕು ಕಿತ್ತುಕೊಂಡ ಕೊರೊನಾ’- `ಕಣಿ ಹೇಳುತ್ತಾ ಬೀದಿ ಸುತ್ತುವ ಕೊರವಂಜಿಗಳು ಲಾಕ್‍ಡೌನ್‍ನಲ್ಲಿ ಮನೆಯಲ್ಲಿಯೇ ಲಾಕ್’ `ಮೈಸೂರು ಮಿತ್ರ’ನ ವರದಿ ಓದಿ ಮನ ಕರಗಿತು. ಹೀಗಾಗಿ ಅವರಿಗೆ ನೆರವಾಗಬೇಕೆಂದು ನಿರ್ಧರಿಸಿದ್ದಾಗಿ ಸುರೇಶ್ ಸುಬ್ಬರಾವ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಬುಧವಾರ ಯಲ್ಲಮ್ಮ ಕಾಲೋನಿಗೆ ತೆರಳಿ 60ಕ್ಕೂ ಹೆಚ್ಚು ಕೊರವಂಜಿ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, 5 ಕೆ.ಜಿ. ರಾಗಿ ಹಿಟ್ಟು, ಅಡುಗೆ ಎಣ್ಣೆ, ಸಕ್ಕರೆ, ತೊಗರಿಬೇಳೆ, 2 ಕೆ.ಜಿ. ಈರುಳ್ಳಿ, ಮೈ ಸೋಪು, ಬಟ್ಟೆ ಸೋಪು, ಬಿಸ್ಕತ್‍ಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಯಲ್ಲಮ್ಮ ಕಾಲೋನಿಯ ಮುಖಂಡ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.