ಮೈಸೂರಲ್ಲಿ ನೀರಿನ ಮೀಟರ್ ಇಲ್ಲದ ಮನೆಗೆ ಏಪ್ರಿಲ್‌ನಿಂದ ಭಾರೀ ದಂಡ
ಮೈಸೂರು

ಮೈಸೂರಲ್ಲಿ ನೀರಿನ ಮೀಟರ್ ಇಲ್ಲದ ಮನೆಗೆ ಏಪ್ರಿಲ್‌ನಿಂದ ಭಾರೀ ದಂಡ

October 27, 2021

ಮೈಸೂರು, ಅ.೨೬(ಎಸ್‌ಬಿಡಿ)- ಮೈಸೂರು ನಗರ ಪಾಲಿಕೆಯ ವಾಣ ವಿಲಾಸ ನೀರು ಸರಬರಾಜು ಮಂಡಳಿಯಿAದÀ ಕುಡಿಯುವ ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ಮೀಟರ್ ಅಳವಡಿಸಿ ಕೊಳ್ಳದಿದ್ದರೆ ಮುಂಬರುವ ಏಪ್ರಿಲ್‌ನಿಂದ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಗ್ರಾಹಕರೇ ಮೀಟರ್ ಅಳವಡಿಸಿಕೊಳ್ಳ ಬೇಕಿರುವುದರಿಂದ ಹಲವರು ಇದರ ಗೋಜಿಗೆ ಹೋಗಿಲ್ಲ. ಅಳವಡಿಸಿಕೊಂಡಿದ್ದರೂ ತಾಂತ್ರಿಕ ಕಾರಣಗಳಿಂದ ಮೀಟರ್ ಸ್ಥಗಿತಗೊಂಡಿ ದ್ದರೆ ದುರಸ್ತಿ ಮಾಡಿಸಿ ರುವುದಿಲ್ಲ, ಕೆಲವೆಡೆ ಕಳ್ಳತನವಾಗಿರುವ ಉದಾಹರಣೆಯೂ ಇದೆ. ಮತ್ತೆ ಕೆಲ ಗ್ರಾಹಕರು ಹೆಚ್ಚಿನ ಶುಲ್ಕ ಬರುತ್ತದೆ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಮೀಟರ್ ತೆಗೆದಿಟ್ಟಿರುತ್ತಾರೆ ಅಥವಾ ಅದಕ್ಕೆ ಹಾನಿ ಮಾಡಿರುತ್ತಾರೆ. ಹೀಗೆ ಹಲವು ಕಾರಣಗಳಿಂದ ಗ್ರಾಹಕರು ಬಳಸುವ ನೀರಿನ ಪ್ರಮಾಣದ ಲೆಕ್ಕವೇ ಸಿಗುತ್ತಿಲ್ಲ. ಹಲವು ಬಾರಿ ಸೂಚನೆ
ನೀಡಿದ್ದರೂ ನಿರ್ಲಕ್ಷಿಸಿದ್ದಾರೆ. ಇಂತಹ ಪ್ರಕರಣಗಳಿದ್ದಲ್ಲಿ ನಿಗಧಿತ ಕನಿಷ್ಠ ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ ೨೦೨೨ರ ಏಪ್ರಿಲ್‌ನಿಂದ ಭಾರೀ ದಂಡ ವಿಧಿಸಲು ಮೇಯರ್ ಸುನಂದ ಪಾಲನೇತ್ರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹ ಬಳಕೆ ನೀರಿನ ಸಂಪರ್ಕಕ್ಕೆ ನಿಗಧಿತ ಶುಲ್ಕದ ಶೇ.೫೦ರಷ್ಟು ಹಾಗೂ ವಾಣ ಜ್ಯ ಇನ್ನಿತರ ಸಂಪರ್ಕಗಳಿಗೆ ಶೇ.೨೦೦ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.

೧೧೦ ಎಂಎಲ್‌ಡಿ ಲೆಕ್ಕವೇ ಇಲ್ಲ: ಪಾಲಿಕೆ ವ್ಯಾಪ್ತಿ ಹಾಗೂ ಹೊರವಲಯ ಸೇರಿದಂತೆ ಸುಮಾರು ೧,೮೦,೧೦೧(ಜುಲೈ-೨೦೨೧) ನೀರಿನ ಸಂಪರ್ಕಗಳ ಮೂಲಕ ಕಾವೇರಿ ಹಾಗೂ ಕಬಿನಿ ಮೂಲದಿಂದ ನಿತ್ಯ ೨೭೦ ಎಂಎಲ್‌ಡಿ ನೀರು ಸರಬರಾಜು ಮಾಡಲಾಗು ತ್ತಿದೆ. ಆದರೆ ಇದರಲ್ಲಿ ೫೦ ಸಾವಿರ ಸಂಪರ್ಕಗಳಲ್ಲಿ ಮೀಟರ್ ಚಾಲನೆ ಸ್ಥಿತಿಯಲ್ಲಿಲ್ಲ. ಅದರಲ್ಲೂ ೩೦ ಸಾವಿರ ಸಂಪರ್ಕಗಳ ಮಾಪನ ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಿಲ್ಲ. ಹಲವು ಬಾರಿ ಸೂಚನಾ ಪತ್ರ ನೀಡಿದ್ದರ ಪರಿಣಾಮವಾಗಿ ೨೦೧೯-೨೦ನೇ ಸಾಲಿನಲ್ಲಿ ೯೮೯ ಹಾಗೂ ೨೦೨೧-೨೨ನೇ ಸಾಲಿನಲ್ಲಿ ೨ ಸಾವಿರ ಗ್ರಾಹಕರು ಮಾತ್ರ ನೀರಿನ ಮಾಪಕ ಅಳವಡಿಸಿಕೊಂಡಿದ್ದಾರೆ. ಬಳಕೆದಾರರು ನೀರು ಪೋಲು ಮಾಡುವುದನ್ನು ನಿಯಂತ್ರಿಸಲು ಸಾಧ್ಯವಾಗದ ಪರಿಣಾಮ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಹೆಚ್ಚಾಗಿದೆ. ನಿತ್ಯ ೨೭೦ ಎಂಎಲ್‌ಡಿ ನೀರು ಪೂರೈಸುತ್ತಿದ್ದರೂ ಲೆಕ್ಕಕ್ಕೆ ಸಿಗುತ್ತಿರುವುದು ೧೬೦ ಎಂಎಲ್‌ಡಿ ಮಾತ್ರ. ಇನ್ನುಳಿದ ೧೧೦ ಎಂಎಲ್‌ಡಿ ಲೆಕ್ಕವೇ ಇಲ್ಲ. ಇದರಿಂದ ನಗರ ಪಾಲಿಕೆ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಕೌನ್ಸಿಲ್ ಗಮನಕ್ಕೆ ತಂದರು.
ಸದಸ್ಯರ ಸಲಹೆ: ಈ ವಿಷಯವಾಗಿ ಕೌನ್ಸಿಲ್‌ನಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಸ್ತಾವನೆಯನ್ನು ಒಪ್ಪಿದರಾದರೂ ಹೆಚ್ಚುವರಿ ಶುಲ್ಕ ವಿಧಿಸುವ ಕ್ರಮದಿಂದ ಗ್ರಾಹಕರಿಗೆ

ಹೊರೆಯಾಗುತ್ತದೆ, ಅಲ್ಲದೆ ಇದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುವುದಿಲ್ಲ ಎಂದು ಅಭಿಪ್ರಾಯಿಸಿದರು. ಇದರ ಬದಲಾಗಿ ವಿದ್ಯುತ್ ಮೀಟರ್ ನಿರ್ವಹಣೆ ಮಾದರಿಯನ್ನು ಅನುಸರಿಸುವುದು ಉತ್ತಮ. ನೀರಿನ ಮೀಟರ್‌ಗಳನ್ನು ನಗರ ಪಾಲಿಕೆ ವತಿಯಿಂದಲೇ ಅಳವಡಿಸಿ, ಅದರ ಮೊತ್ತವನ್ನು ಪ್ರತಿ ತಿಂಗಳು ನೀರಿನ ಶುಲ್ಕದೊಂದಿಗೆ ಕಂತಿನ ರೂಪದಲ್ಲಿ ಸಂಗ್ರಹಿಸಬೇಕು. ಅಲ್ಲದೆ ಮೀಟರ್ ಕೆಟ್ಟರೆ ಅಥವಾ ಬದಲಾಯಿಸುವ ಸಂದರ್ಭ ಬಂದರೆ ಪಾಲಿಕೆಯಿಂದಲೇ ತಕ್ಷಣ ಕ್ರಮ ವಹಿಸಬೇಕು. ಅಳವಡಿಸಲಾಗುವ ಮೀಟರ್ ಅನ್ನು ನಗರ ಪಾಲಿಕೆ ಆಸ್ತಿ ಎಂದು ಘೋಷಿಸಿ, ಉದ್ದೇಶಪೂರ್ವಕವಾಗಿ ಅದನ್ನು ಹಾಳು ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಹೆಚ್ಚುವರಿ ಶುಲ್ಕ ಸಂಗ್ರಹಿಸುವ ಕ್ರಮವನ್ನು ಕೈಬಿಟ್ಟು, ವಿದ್ಯುತ್ ಮೀಟರ್ ಮಾದರಿ ನಿರ್ವಹಣೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದರು.
ಪರಿಶೀಲಿಸಿ ಕ್ರಮ: ವಿದ್ಯುತ್ ಮೀಟರ್ ಮಾದರಿ ವ್ಯವಸ್ಥೆಯನ್ನು ತಕ್ಷಣಕ್ಕೆ ಜಾರಿಗೊಳಿಸಲು ಕಷ್ಟಸಾಧ್ಯ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆವರೆಗೆ ಗ್ರಾಹಕರಿಗೆ ನೋಟೀಸ್ ಜಾರಿ ಮಾಡಿ, ಮೀಟರ್ ಅಳವಡಿಸಿಕೊಳ್ಳಲು ೫ ತಿಂಗಳ ಕಾಲಾವಕಾಶ ನೀಡಿ, ಏಪ್ರಿಲ್‌ನಿಂದ ಹೆಚ್ಚುವರಿ ಶುಲ್ಕ ಸಂಗ್ರಹಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕೆಂದು ನಗರ ಪಾಲಿಕೆ ಆಯುಕ್ತ ಲಕ್ಷಿö್ಮಕಾಂತ ರೆಡ್ಡಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸದಸ್ಯರು ಕಾರ್ಯಸೂಚಿಗೆ ಸಮ್ಮತಿ ಸೂಚಿಸಿದ್ದರಿಂದ ಮೇಯರ್ ನಿರ್ಣಯ ಪ್ರಕಟಿಸಿದರು.

 

ಬೋರ್‌ವೆಲ್ ಬಳಕೆದಾರರಿಗೂ ವಿಶೇಷ ಶುಲ್ಕ
ವಾಣ ವಿಲಾಸ ನೀರು ಸರಬರಾಜು ವಿಭಾಗದ ವತಿಯಿಂದ ನೀರು ಸರಬರಾಜು ಸಂಪರ್ಕ ಹೊಂದುವುದರ ಜೊತೆಗೆ ಖಾಸಗಿ ಯಾಗಿ ಬೋರ್‌ವೆಲ್ ನೀರನ್ನು ಉಪಯೋಗಿಸುತ್ತಿರುವ ಹಾಗೂ ಕೇವಲ ಬೋರ್‌ವೆಲ್ ನೀರು ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾದರಿಯಲ್ಲಿ ವಿಶೇಷ ಒಳಚರಂಡಿ ಶುಲ್ಕ ವಿಧಿಸಲು ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲಾ ರೀತಿಯ ಹೋಟೆಲ್‌ಗಳು, ಲಾಡ್ಜ್, ಬಾರ್ ಅಂಡ್ ರೆಸ್ಟೋರೆಂಟ್, ಶಾಪಿಂಗ್ ಮಾಲ್, ಹಾಸ್ಟೆಲ್, ಮಲ್ಟಿಪ್ಲೆಕ್ಸ್, ಕಲ್ಯಾಣ ಮಂಟಪ ಇನ್ನಿತರ ವಾಣ ಜ್ಯ ಕೇಂದ್ರಗಳಿAದ ವಿಸ್ತೀರ್ಣ ಇನ್ನಿತರ ಮಾನ ದಂಡಗಳ ಆಧಾರದಲ್ಲಿ ಮಾಸಿಕ ೧ ಸಾವಿರದಿಂದ ೨೫ ಸಾವಿರದವರೆಗೂ ಶುಲ್ಕ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

Translate »