ದೇವಾಲಯ, ಚರ್ಚ್, ಮಸೀದಿ ತೆರೆಯಲು ಮನವಿ ಮಾಡಲಾಗಿದೆ
ಮೈಸೂರು

ದೇವಾಲಯ, ಚರ್ಚ್, ಮಸೀದಿ ತೆರೆಯಲು ಮನವಿ ಮಾಡಲಾಗಿದೆ

May 31, 2020

ಮೈಸೂರು, ಮೇ 30 (ಆರ್‍ಕೆ)- ರಾಜ್ಯದ ಎಲ್ಲಾ ದೇವಾಲಯ, ಚರ್ಚ್ ಹಾಗೂ ಮಸೀದಿ ಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ ಆವ ರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್-19 ಲಾಕ್‍ಡೌನ್‍ನಿಂದ ಬಂದ್ ಆಗಿರುವ ದೇವಾಲಯಗಳು, ಚರ್ಚ್, ಮಸೀದಿ ಗಳನ್ನು ತೆರೆದು ಜೂನ್ 1ರಿಂದ ಪೂಜಾ ಕೈಂಕರ್ಯ ಹಾಗೂ ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡ ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡ ಲಾಗಿದ್ದು, ಇಂದು ಸಂಜೆ ಅಥವಾ ಭಾನುವಾರ ದೊಳಗೆ ಗ್ರೀನ್ ಸಿಗ್ನಲ್ ಬರಬಹುದೆಂಬ ನಿರೀಕ್ಷೆ ಇದೆ ಎಂದರು. ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರದ ಪೂಜೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದ ಅವರು, ಒಂದು ವೇಳೆ ಆಷಾಢ ಶುಕ್ರವಾರಕ್ಕೆ ಅವಕಾಶ ನೀಡುವುದಾ ದರೆ ಭಕ್ತರ ದಟ್ಟಣೆ ತಪ್ಪಿಸಲು ಯಾವ ರೀತಿಯ ಮುಂಜಾ ಗ್ರತೆ ಕ್ರಮ ವಹಿಸಬೇಕು ಎಂಬುದರ ಕುರಿತಂತೆ ಅಭಿ ಪ್ರಾಯ ಕ್ರೋಢೀಕರಿಸಬೇಕಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಾಮುಂಡೇಶ್ವರಿ ದೇವಸ್ಥಾನವನ್ನು ಒಮ್ಮೆ ತೆರೆದರೆ ಪ್ರತಿ ದಿನವೂ ತೆರೆಯಲೇಬೇಕು. ಆದರೆ ಮೊದಲಿನಂತೆ ಹೆಚ್ಚು ಭಕ್ತಾದಿಗಳು ಸೇರಬಾರದು. ನಾವು ಯಾವುದೇ ನಿರ್ಬಂಧ, ನಿಯಮ ಮಾಡಿದರೂ ಜನ ಅರ್ಥ ಮಾಡಿಕೊಂಡು ಪಾಲಿಸಬೇಕು ಎಂದು ಸಚಿವರು ನುಡಿದರು.

ಇನ್ನೂ ಹಲವು ತಿಂಗಳ ಕಾಲ ಕೊರೊನಾ ಸೋಂಕು ಇದ್ದೇ ಇರುತ್ತದೆ. ಮಾಸ್ಕ್ ಬಳಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Translate »