ಮೈಸೂರು,ಡಿ.7-ಕಳೆದ ನ.28 ರಂದು ಅಮೆರಿಕಾದ ಹೋಟೆ ಲೊಂದರಲ್ಲಿ ದುಷ್ಕರ್ಮಿ ಯೊಬ್ಬನಿಂದ ಹತ್ಯೆಗೀ ಡಾಗಿದ್ದ ಮೈಸೂರಿನ ಕುವೆಂಪುನಗರ ನಿವಾಸಿ ಅಭಿಷೇಕ್ ಅವರ ಅಂತ್ಯ ಸಂಸ್ಕಾರ ವನ್ನು ನಿನ್ನೆ ಬಾಬಿಟ್ ಮೆಮೊರಿಯಲ್ ಚಾಪೆಲ್ ನಲ್ಲಿ ನೆರವೇರಿಸಲಾಯಿತು. ಅಂತ್ಯ ಸಂಸ್ಕಾ ರಕ್ಕೂ ಮುನ್ನ ಅಭಿಷೇಕ್ ಪಾರ್ಥಿವ ಶರೀರ ವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಕ್ಯಾಲಿಫೆÇೀರ್ನಿಯಾ ಸ್ಟೇಟ್ ಯುನಿವರ್ಸಿ ಟಿಯ ಅಧ್ಯಕ್ಷರು, ಶಿಕ್ಷಕರು, ಅಪಾರ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು, ಭಾರತೀಯ ಹಾಗೂ ಕನ್ನಡ ಸಂಘಟನೆಗಳ ಸದಸ್ಯರಲ್ಲದೇ ಅಭಿಷೇಕ್ ತಂದೆ ಸುದೇಶ್, ತಾಯಿ ನಂದಿನಿ, ಸೋದರ ಅಭಿಶ್ರೇಷ್ಠ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂ ಡಿದ್ದರು. ಅಸ್ಥಿ ಸಂಚಯ ಹಾಗೂ ಇತರ ಧಾರ್ಮಿಕ ಕ್ರಿಯೆಗಳನ್ನು ಅಮೆರಿಕಾದ ಫೀನಿಕ್ಸ್ ನಲ್ಲಿರುವ ಪುತ್ತಿಗೆ ಮಠದಲ್ಲಿ ನೆರವೇರಿಸ ಲಾಗುವುದೆಂದು ಕುಟುಂಬದ ಮೂಲ ಗಳು ತಿಳಿಸಿವೆ.
ಉನ್ನತ ವ್ಯಾಸಂಗಕ್ಕೆಂದು ತೆರಳಿದ ಮಗನ ಹತ್ಯೆಯ ಘಟನೆಯ ಆಘಾತದಿಂದ ಇನ್ನೂ ಕುಟುಂಬಸ್ಥರು ಚೇತರಿಸಿಕೊಂಡಿಲ್ಲ. ವೀಸಾ ಸಿಗಲು ತಡವಾದ ಕಾರಣ ಕುಟುಂಬದವ ರಿಗೆ ಅಮೆರಿಕಾಗೆ ತೆರಳಲು ತಡವಾಗಿತ್ತು. ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ, ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ವಿದೇಶಾಂಗ ಮಂತ್ರಿಗಳ ಕಾರ್ಯಾಲಯಕ್ಕೆ ಟ್ವಿಟರ್ ಮೂಲಕ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿ ದ್ದರು. ನಂತರ ವೀಸಾ ದೊರೆತಿತ್ತು.