ಮೇ ಮಧ್ಯದ ವೇಳೆಗೆ ಭಾರತದಲ್ಲಿನ ಸಕ್ರಿಯ  ಪ್ರಕರಣಗಳ ಸಂಖ್ಯೆ 38ರಿಂದ 48 ಲಕ್ಷಕ್ಕೇರುವ ಸಾಧ್ಯತೆ
News

ಮೇ ಮಧ್ಯದ ವೇಳೆಗೆ ಭಾರತದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 38ರಿಂದ 48 ಲಕ್ಷಕ್ಕೇರುವ ಸಾಧ್ಯತೆ

April 27, 2021

ನವದೆಹಲಿ, ಏ. 26- ಭಾರತದಲ್ಲಿ ಕೊರೊನಾ ವೈರಸ್‍ನ 2ನೇ ಅಬ್ಬರ ಮುಂದುವರೆದಿರುವಂತೆಯೇ ಮೇ ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇ ರುವ ಸಾಧ್ಯತೆ ಇದ್ದು, ಮೇ 15ರ ಹೊತ್ತಿಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 38ರಿಂದ 48 ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಗಳು ಹೇಳಿದ್ದಾರೆ.

ಐಐಟಿ ವಿಜ್ಞಾನಿಗಳು ರೂಪಿಸಿದ ಗಣಿತದ ಮಾದರಿ ಪ್ರಕಾರ ಹಾಲಿ ದೈನಂದಿನ ಹೊಸ ಪ್ರಕರಣಗಳನ್ನು ಲೆಕ್ಕಾಚಾರ ಮಾಡಿದರೆ, ಕಳೆದ ಸೆಪ್ಟೆಂಬರ್ ನಲ್ಲಿ ಸುಮಾರು 10 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ಮೇ ತಿಂಗಳ 14 ರಿಂದ 18ರ ಹೊತ್ತಿಗೆ ಭಾರತದಲ್ಲಿನ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 38-48 ಲಕ್ಷಕ್ಕೇರುವ ಸಾಧ್ಯತೆ ಇದೆ. ಅಂತೆಯೇ ಮೇ ಅಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಕುಸಿಯಬಹುದು ಎಂದು ಕಾನ್ಪುರ ಮತ್ತು ಹೈದರಾಬಾದ್‍ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ 3 ತಿಂಗಳು ನಿರ್ಣಾಯಕ, ಸರ್ಕಾರಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು

ಅದರಲ್ಲೂ ಮುಂದಿನ 3 ತಿಂಗಳು ಭಾರತಕ್ಕೆ ನಿರ್ಣಾಯಕ ವಾಗಿದ್ದು, ಮೇ 11 ರಿಂದ 15ರ ನಡುವೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟ ತಲುಪಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 38ರಿಂದ 48 ಲಕ್ಷ ತಲುಪಲಿದೆ. ಇನ್ನೂ ಮುಂದಿನ ಮೂರು ವಾರಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ಅಂದಾಜಿನ ಪ್ರಕಾರ ಮೇ ಮಧ್ಯಭಾಗದಲ್ಲಿ ಕೊರೊನಾ ಮೊದಲನೇ ಅಲೆಗಿಂತ ಮೂರು ಪಟ್ಟು ಹೆಚ್ಚಿನ ಪ್ರಕರಣ ದಾಖಲಾಗುತ್ತದೆ. ಕಳೆದ ಸೆಪ್ಟೆಂಬರ್ 17ರಂದು ದೇಶದಲ್ಲಿ 10 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ಮುಂದಿನ ಮೂರು ವಾರಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಕೈಮೀರುವ ಎಲ್ಲಾ ಲಕ್ಷಣಗಳಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಲಿದೆ. ಹೀಗಾಗಿ ಈಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧತೆ ಮಾಡಿಕೊಳ್ಳಲೇಬೇಕಿದೆ. ಔಷಧಗಳು, ಆರೋಗ್ಯ ಸಲಕರಣೆಗಳು, ಆಸ್ಪತ್ರೆಗಳು ಈ ಎಲ್ಲಾ ವ್ಯವಸ್ಥೆಗಳನ್ನು ಗರಿಷ್ಠ ಮಟ್ಟದಲ್ಲಿ ರೂಪಿಸಬೇಕಿದೆ.

Translate »