ಕಾಂಗ್ರೆಸ್‍ನ ಮಡಿಕೇರಿ ಚಲೋ ಮುಂದೂಡಿಕೆ
News

ಕಾಂಗ್ರೆಸ್‍ನ ಮಡಿಕೇರಿ ಚಲೋ ಮುಂದೂಡಿಕೆ

August 24, 2022

ಬೆಂಗಳೂರು, ಆ. 23(ಕೆಎಂಶಿ)- ಕಾಂಗ್ರೆಸ್ ವತಿಯಿಂದ ಆಗಸ್ಟ್ 26ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮಡಿಕೇರಿ ಚಲೋವನ್ನು ಮುಂದೂಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿ ಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮುಂದೂ ಡಲಾಗಿದೆ ಎಂದರು. ವಿರೋಧ ಪಕ್ಷದ ನಾಯಕ ನಾಗಿ, ಮಾಜಿ ಮುಖ್ಯಮಂತ್ರಿಯಾಗಿ ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ. ನಮ್ಮ ಪಕ್ಷ ಕಾನೂನು ಮೀರುವುದನ್ನು ಬಯ ಸುವುದಿಲ್ಲ. ಇದು ಪಕ್ಷದ ಕಾರ್ಯಕ್ರಮ. ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿ ಭಟನೆ ಮುಂದೂಡುವ ನಿರ್ಧಾರ ಮಾಡಿದ್ದೇನೆ.

ಮುಂದೆ ಮತ್ತೆ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು 26ರಂದು ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಹಾಗೂ ಶಾಸಕರ ಭ್ರಷ್ಟಾ ಚಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಅದಕ್ಕೆ ಬಿಜೆಪಿ ಯವರು ತಾವೂ ಒಂದು ಜಾಗೃತಿ ಸಮಾ ವೇಶ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಅವರು ಸಮಾವೇಶ ಮಾಡಲು ನಮ್ಮ ತಕರಾರಿಲ್ಲ. ಆದರೆ ನಾವು ಘೋಷಣೆ ಮಾಡಿದ ಮರುದಿನವೇ ನಾವು ಮಾಡು ತ್ತೇವೆ ಎಂದು ಹೇಳಿ ಬಿಜೆಪಿಯವರು ದ್ವೇಷ ದಿಂದ ಸಮಾವೇಶ ಮಾಡಲು ಹೊರಟಿದ್ದು, ಪ್ರತಿಭಟನೆ ನಮ್ಮ ಸಂವಿಧಾನಾತ್ಮಕ ಹಕ್ಕು. ಸರ್ಕಾರ ಅದಕ್ಕೂ ಅವಕಾಶ ನೀಡುತ್ತಿಲ್ಲ.

ಅನಗತ್ಯವಾಗಿ ನನ್ನ ವಿರುದ್ಧ ಮೊಟ್ಟೆ, ಕಲ್ಲು ಎಸೆದು, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಏಕೆ? ಇವು ಯಾವುದಕ್ಕೂ ಸರಿಯಾದ ಕಾರಣಗಳಿಲ್ಲ. ನಮ್ಮ ಪ್ರತಿಭಟನೆ ಯನ್ನು ಜನರಿಗೆ ತಪ್ಪಾಗಿ ಬಿಂಬಿಸಲು ಸರ್ಕಾರ ಕುಟಿಲ ಪ್ರಯತ್ನ ಮಾಡಿದೆ. ಈಗ ಡಿಸಿ ಮತ್ತು ಎಸ್‍ಪಿ ಅವರು ಕೊಡಗಿನಲ್ಲಿ ನಾವು ಅನು ಮತಿ ನೀಡಿಲ್ಲ ಎಂದು 144 ಸೆಕ್ಷನ್ ಹಾಕಿದ್ದಾರೆ.

ಇದನ್ನು ಮೀರಿಯೂ ನಾವು ಪ್ರತಿಭಟನೆ ಮಾಡಬಹುದು. ಆದರೆ ಇಷ್ಟೆಲ್ಲಾ ಘಟನೆ ಗಳು ನಡೆದ ನಂತರ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸರ್ಕಾರದ ನಡೆಯನ್ನು ಖಂಡಿಸಿ ಎಲ್ಲ ಕಡೆ ಪ್ರತಿಭಟನೆ ಮಾಡಿದ್ದಾರೆ. ಕೆಲವೆಡೆ ಕಪ್ಪು ಬಾವುಟ ತೋರಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿ ಕುಳಿತು ಕಾನೂನು ಉಲ್ಲಂಘಿಸಿ, ಹೋರಾಟ ಮಾಡು ವುದು ಸರಿಯಲ್ಲ ಎಂಬ ನಿಲುವು ತೆಗೆದು ಕೊಂಡು ತಾತ್ಕಾಲಿಕವಾಗಿ ಕೊಡಗು ಚಲೋ ಕೈಬಿಟ್ಟಿದ್ದೇವೆ ಎಂದರು.
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ವೀಕ್ಷಿಸಲು ಆಗಸ್ಟ್ 18ರಂದು ಭೇಟಿ ನೀಡಿದ್ದೆ. ಅದಕ್ಕೂ ಮೊದಲು ನಿರಂತರ ಮಳೆ ಬೀಳುತ್ತಾ ಇದ್ದುದ್ದರಿಂದ ಭೇಟಿ ನೀಡಲು ಆಗಿರಲಿಲ್ಲ. ಈ ವರ್ಷ ಅನೇಕ ಕಡೆಗಳಲ್ಲಿ ಜೂನ್ ತಿಂಗಳಿಂದ ಆಗಸ್ಟ್ ತಿಂಗಳಿನವರೆಗೆ ವಾಡಿಕೆಗಿಂತ ಎರಡು, ಮೂರು ಪಟ್ಟು ಹೆಚ್ಚು ಮಳೆಯಾಗಿದೆ.

ಹೀಗಾಗಿ ಕೊಡಗಿನಲ್ಲಿ ಅನೇಕ ಕಡೆಗಳಲ್ಲಿ ಭೂಮಿ ಕುಸಿದಿದೆ. ಮನೆಗಳ ಮೇಲೆ ಮಣ್ಣು ಕುಸಿದಿರುವುದರಿಂದ ಜನ ತಮ್ಮ ಮನೆಗಳನ್ನು ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದಾರೆ, ರಸ್ತೆಗಳ ಮೇಲೆ ಮಣ್ಣು ಬಿದ್ದು ರಸ್ತೆಗಳು ಮುಚ್ಚಿಹೋಗಿ ಸಾರಿಗೆ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಸಮಸ್ಯೆಗಳನ್ನು ನೋಡಲು ಹೊರಟಾಗ ತಿತಿಮತಿಯಲ್ಲಿ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರು, ಪೆÇಲೀಸರು ಅಲ್ಲಿ ನಿಷ್ಕ್ರಿಯರಾಗಿ ನಿಂತಿದ್ದರು, ಯಾರೋ ಒಬ್ಬ ವ್ಯಕ್ತಿ ಬಂದು ನನ್ನ ಕಾರಿನೊಳಗೆ ಕರಪತ್ರ ಹಾಕಿದ, ಆಗಲೂ ಪೆÇಲೀಸರು ಅವರನ್ನು ತಡೆಯುವ ಅಥವಾ ಬಂಧಿಸುವ ಕೆಲಸ ಮಾಡಿಲ್ಲ. ಅತಿವೃಷ್ಟಿಯಾದ ಸಂದರ್ಭದಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ. ಆದರೆ ಎಲ್ಲಾ ಕಾಮಗಾರಿಗಳು ಕಳಪೆಯಿಂದ ಕೂಡಿರುವುದರಿಂದಲೇ ಭೂ ಕುಸಿತ ಮತ್ತಿತರ ಹಾನಿಗಳು ಸಂಭವಿಸಿವೆ ಎಂದರು. ಇದನ್ನು ನೋಡಲು ತಾವು ಹೋಗುತ್ತೇವೆ ಎಂಬುದನ್ನು ಮನಗಂಡ ಸ್ಥಳೀಯ ಶಾಸಕರು, ನನ್ನ ವಿರುದ್ಧ ಉದ್ದೇಶಪೂರಕವಾಗಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

Translate »