ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು

ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

March 1, 2021

ಮೈಸೂರು,ಫೆ.28-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಹಲವರು ಪ್ರಾಣಿ-ಪಕ್ಷಿಗಳನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಬೆಂಗಳೂರಿನ ಸಿ.ಪುಟ್ಟಯ್ಯ ರೂ. 15,000 ಪಾವತಿಸಿ ತವ್ನಿ ಈಗಲ್, ಹಾಸನದ ಗೋಪಿ ಹೆಚ್.ಕೆ ರೂ. 5000 ಪಾವತಿಸಿ ಹಿಮಾಲಯನ್ ಗೋರಲ್, ಮೈಸೂರಿನ ಅನೂಪ್ ಹೆಚ್. ರೂ. 2000 ಪಾವತಿಸಿ ನಾಗರಹಾವು, ಮೈಸೂರಿನ ಶರಣ್ಯ ಜೆ. 1,000 ರೂ. ಪಾವತಿಸಿ ಕಾಕಟೈಲ್ ಹಾಗೂ ಹಾಸನದ ಸೀಮಾ ಎಸ್.ಕೆ. ರೂ.5,000 ಪಾವತಿಸಿ ನಾಲ್ಕು ಕೊಂಬಿನ ಜಿಂಕೆಯನ್ನು ದತ್ತು ಪಡೆದಿದ್ದಾರೆ.

 

Translate »