ಕೆಆರ್‍ಎಸ್ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ವಿರುದ್ಧ  ಸ್ಥಳೀಯರೇ ಹೋರಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿ
ಮೈಸೂರು

ಕೆಆರ್‍ಎಸ್ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ವಿರುದ್ಧ ಸ್ಥಳೀಯರೇ ಹೋರಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿ

July 18, 2021

ಮೈಸೂರು, ಜು.17(ಎಂಟಿವೈ)- ಅಣೆಕಟ್ಟೆಯ ಸುರ ಕ್ಷತೆಗಾಗಿ ಕೆಆರ್‍ಎಸ್ ಸುತ್ತಮುತ್ತ ಅಕ್ರಮವಾಗಿ ನಡೆ ಯುತ್ತಿರುವ ಗಣಿಗಾರಿಕೆ ವಿರುದ್ಧ ಸ್ಥಳೀಯರೇ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸಮಾಜ ಪರಿ ವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್.ಆರ್. ಹೀರೆಮಠ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಳ್ಳಾರಿಯಲ್ಲಿ ಅನಿಯಮಿತವಾಗಿ ನಡೆದ ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸದೇ ಇದ್ದುದರಿಂದ ಭೂಮಿಯ ಒಡಲನ್ನು ಬಗೆದು ಸಂಪತ್ತನ್ನು ಲೂಟಿ ಮಾಡಲಾಗಿತ್ತು. ಲಕ್ಷಾಂತರ ಕೋಟಿ ರೂ. ಮೌಲ್ಯದ ಸಂಪತ್ತನ್ನು ಕೆಲವೇ ಕೆಲವರು ಕಬಳಿಸಿ ದರು. ಇದರಿಂದ ಪ್ರಸ್ತುತ ಸಂದರ್ಭದಲ್ಲಿ ಬಳ್ಳಾರಿ ಸುತ್ತ ಮುತ್ತಲಿನ ವಾತಾವರಣ ಇಂದಿಗೂ ಶೋಚನೀಯ ಸ್ಥಿತಿ ಯಲ್ಲಿದೆ. ಬಳ್ಳಾರಿಯಲ್ಲಿ ಕಂಡು ಬಂದಿರುವ ಕಲುಷಿತ ಹಾಗೂ ಭಯಾನಕ ವಾತಾವರಣ ಮಂಡ್ಯ ಜಿಲ್ಲೆಯಲ್ಲೂ ಪುನರಾ ವರ್ತನೆಗೊಳ್ಳದಂತೆ ತಡೆಗಟ್ಟುವ ಅವಶ್ಯಕತೆ ಇದೆ. ಈ ಜವಾಬ್ದಾರಿ ಮಂಡ್ಯ ಜಿಲ್ಲೆಯ ಜನತೆ ಅದರಲ್ಲೂ ಕೆಆರ್‍ಎಸ್ ಡ್ಯಾಂ ಸುತ್ತಮುತ್ತಲಿನ ಗ್ರಾಮಗಳ ಜನರ ಹೆಗಲ ಮೇಲಿದೆ ಎಂದರು.

ಕೆಆರ್‍ಎಸ್ ಅಣೆಕಟ್ಟೆಯ ಸುತ್ತ ಮುತ್ತ ನಡೆಯುತ್ತಿರುವ ಈ ಹಿಂದೆ ಬಳ್ಳಾರಿಯ ಗಣಿಗಾರಿಕೆ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿಯೇ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧವೂ ಹೋರಾಟ ನಡೆಸ ಬೇಕಾಗಿದೆ. ಗಣಿಗಾರಿಕೆಯಿಂದ ಎಲ್ಲ ರಾಜಕಾರಣಿಗಳಿಗೆ ಹಫ್ತಾ ಹೋಗುತ್ತಿದೆ. ಈ ಅಕ್ರಮ ಗಣಿಗಾರಿಕೆ ವಿರುದ್ಧ ಇನ್ನಾ ದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ. ಇದರ ವಿರುದ್ಧ ಸ್ಥಳೀ ಯರು ಸಂಘಟಿತ ಹೋರಾಟ ನಡೆಸಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದರು
ಎನ್‍ಟಿಎಂ ಶಾಲೆ ಉಳಿವಿಗೆ ನ್ಯಾಯಾಲಯದ ಮೊರೆ: ಮೈಸೂರಿನ ಐತಿಹಾಸಿಕ ಎನ್‍ಟಿಎಂ ಶಾಲೆ ಉಳಿಸುವ ನಿಟ್ಟಿ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಸ್ವಾಮಿ ವಿವೇಕಾನಂದರು ಬದುಕಿದ್ದರೆ ಸ್ಮಾರಕಕ್ಕಿಂತ ಶಾಲೆಯ ಉಳಿಯಲಿ ಎನ್ನುತ್ತಿದ್ದರು. ಹೀಗಾಗಿ ಶಾಲೆಯನ್ನು ಉಳಿಸಿ ಕೊಳ್ಳಲೇಬೇಕು. ಇದಕ್ಕಾಗಿ ನಾವು ಕಾನೂನು ಹೋರಾಟ ನಡೆಸಲು ಸಿದ್ಧ, ಈಗಾಗಲೇ ವಕೀಲ ಪ್ರಶಾಂತ ಭೂಷಣ್ ಅವರಿಗೆ ಶಾಲೆಗೆ ಸಂಬಂಧಪಟ್ಟ ದಾಖಲೆಗಳನ್ನು ರವಾನಿಸಿ ದ್ದೇವೆ. ಸ್ಥಳೀಯವಾಗಿ ನಡೆಯುತ್ತಿರುವ ಹೋರಾಟಕ್ಕೆ ಜಯ ದೊರೆಯದಿದ್ದರೆ, ನ್ಯಾಯಾಂಗ ಹೋರಾಟದ ಮೂಲಕ ಶಾಲೆ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕ್ರಮ ಕೈಗೊಳ್ಳಲಿ: ಚಿತ್ರನಟ ದರ್ಶನ್ ನೀಡುತ್ತಿರುವ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಎಲ್ಲರೂ ಸಮಾನರು. ನಟ ದರ್ಶನ್ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸ್ವರಾಜ್ ಇಂಡಿಯಾ ಜಿಲ್ಲಾಧ್ಯಕ್ಷ ಉಗ್ರ ನರಸಿಂಹೇಗೌಡ ಇದ್ದರು.

Translate »