ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಪಾಲಿನ ಮರಣಶಾಸನ: ಬಡಗಲಪುರ ನಾಗೇಂದ್ರ ಕಿಡಿ
ಮೈಸೂರು

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಪಾಲಿನ ಮರಣಶಾಸನ: ಬಡಗಲಪುರ ನಾಗೇಂದ್ರ ಕಿಡಿ

May 16, 2020

ಮೈಸೂರು,ಮೇ 15(ಎಂಟಿವೈ)-ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲಿ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯP್ಷÀ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ದೇಶವೇ ಸಂಕ್ರಮಣ ಸ್ಥಿತಿ ಎದುರಿಸುತ್ತಿರುವಾಗ ಮೂಲ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಕಾಪೆರ್Çರೇಟ್ ಹಿತಾಸಕ್ತಿಗೆ ಮಣಿದು ಕದ್ದುಮುಚ್ಚಿ ಕಾಯ್ದೆ ಜಾರಿಗೆ ಯತ್ನಿಸಿವೆ. ಪ್ರಜಾಪ್ರಭುತ್ವವಾದಿಗಳು ಈ ಕಾಯ್ದೆ ಜಾರಿಯನ್ನು ಒಪ್ಪುವುದಿಲ್ಲ. ಇದೊಂದು ರೈತ ವಿರೋಧಿ ಕಾಯ್ದೆ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿದಿ ದ್ದರೂ, ರಾತ್ರೋ ರಾತ್ರಿ ಅಂಗೀಕಾರಕ್ಕೆ ಮುಂದಾಗಿರುವ ದರ್ದು ಏನಿತ್ತು? ಎಂದು ಬಡಗಲಪುರ ನಾಗೇಂದ್ರ ಪ್ರಶ್ನಿಸಿದರು.

ರೈತರ ಹಿತಕಾಯುವಲ್ಲಿ ವಿಫಲರಾಗಿರುವ ಯಡಿಯೂರಪ್ಪ ಮಣ್ಣಿನ ಮಗನಾಗಿ ಉಳಿದಿಲ್ಲ. ಬೇರೆಯವರಂತೆ ಕೊಚ್ಚಿ ಹೋಗಿ z್ದÁರೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳ, ತೆಲಂಗಾಣ ಸರ್ಕಾರಗಳು ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಪ್ರತಿಭಟಿಸಿವೆ. ರೈತರ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕಾಯ್ದೆಯನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮಿತಿ ಮೇ 27ರಂದು ದೇಶಾ ದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದರು.

ಸದ್ಯ ಚಾಲ್ತಿಯಲ್ಲಿರುವ ಕಾಯಿದೆಯಲ್ಲೂ ಹಲವು ದೋಷಗಳಿವೆ. ಅದನ್ನು ಸರಿಪಡಿಸದೇ ತಿದ್ದುಪಡಿ ತಂದು ಖಾಸಗೀಕರಣಕ್ಕೆ ಒಳಪಡಿಸುತ್ತಿರುವ ಹುನ್ನಾರವೇನು? ಈ ಕಾಯ್ದೆ ಜಾರಿಗೆ ಬಂದರೆ ರೈತರ ಅಸ್ತಿತ್ವಕ್ಕೆ ಧಕ್ಕೆ ಯಾಗಲಿದೆ ಎಂದು ದೂರಿದರು.

ಕೊರೊನಾ ವೈರಸ್‍ನಿಂದಾಗಿ ಸರ್ಕಾರದ ನೀತಿಗಳಿಂದ ಸಾರ್ವಜನಿಕರ ಹಕ್ಕುಗಳು ಮೊಟಕುಗೊಳ್ಳುತ್ತಿವೆ. ವಲಸೆ ಕಾರ್ಮಿಕ ರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ದೇಶ ಉಳಿಸಿ ಕೊಳ್ಳಲು ಸ್ವಾತಂತ್ರ್ಯ ಹೋರಾಟಕ್ಕಿಂತ ದೊಡ್ಡ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಒಂದೆರಡು ದಿನದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಲಾಕ್‍ಡೌನ್‍ನಿಂದಾಗಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿಲ್ಲ. ರೈತರನ್ನು ಒಳಗೊಂಡ ಸಮಿತಿ ರಚಿಸಿ ಸೂಕ್ತ ಪರಿಹಾರ ನೀಡ ಬೇಕು. ರೈತರ ಪೂರ್ಣ ಸಾಲ ಮನ್ನಾ ಮಾಡಬೇಕು. ಕೃಷಿ ಚಟು ವಟಿಕೆಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಕೇಂದ್ರ ಸರ್ಕಾರ ರೈತರಿಗೆ ಘೋಷಿಸಿರುವ ಪ್ಯಾಕೇಜ್ ಭಿಕ್ಷೆ ರೂಪದ್ದಾಗಿದ್ದು, ನಮಗೆ ಪ್ಯಾಕೇಜ್ ಕೊಡಿ ಭಿಕ್ಷೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

Translate »