ಕೆ.ಕೋಡಿಹಳ್ಳಿ ಗ್ರಾಮದ ಬಳಿ ಆನೆ ಹಿಂಡು ಪ್ರತ್ಯಕ್ಷ: ಆತಂಕ
ಮಂಡ್ಯ

ಕೆ.ಕೋಡಿಹಳ್ಳಿ ಗ್ರಾಮದ ಬಳಿ ಆನೆ ಹಿಂಡು ಪ್ರತ್ಯಕ್ಷ: ಆತಂಕ

November 8, 2018

ಮದ್ದೂರು: ಆನೆಗಳ ಗುಂಪೆÇಂದು ಆಹಾರ ಹುಡುಕುತ್ತ ಸಮೀಪದ ಕೆ.ಕೋಡಿಹಳ್ಳಿ ಗ್ರಾಮದ ಬಳಿ ಶಿಂಷಾ ನದಿಯಲ್ಲಿ ಬೀಡು ಬಿಟ್ಟಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಮಂಗಳವಾರ ರಾತ್ರಿ ಮುತ್ತತ್ತಿ ಅರಣ್ಯದಿಂದ ಮರಿಯಾನೆಯೊಂದಿಗೆ 3 ಆನೆಗಳು ಬಂದಿದ್ದು, ಸಮೀಪ ಜಮೀನಿಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ಶಿಂಷಾ ನದಿ ಸಮೀಪದಲ್ಲಿ ಬೀಡು ಬಿಟ್ಟಿದೆ.

ವಿಷಯ ತಿಳಿದ ಸುತ್ತಲಿನ ಗ್ರಾಮಗಳ ಜನರು ಗುಂಪು ಗುಂಪಾಗಿ ಬಂದು ಆನೆಗಳನ್ನು ವೀಕ್ಷಿಸುತ್ತಿದ್ದಾರೆ. ಸ್ಥಳಕ್ಕೆ ಪೆÇಲೀಸರು ಹಾಗೂ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಕುರಿತು ಮಾತನಾಡಿದ ವಲಯ ಅರಣ್ಯಾಧಿಕಾರಿ ಡಾ.ಶಶಿಧರ್ ಅವರು, ಮುತ್ತತ್ತಿ ಅರಣ್ಯ ವ್ಯಾಪ್ತಿಯಿಂದ ಆಹಾರ ಅರಸಿ ಆನೆಗಳು ಬಂದಿವೆ. ಸಂಜೆ ವೇಳೆಗೆ ಕಾಡಿಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನರು ಸಂಯಮದಿಂದ ಇರಬೇಕು ಎಂದು ಮನವಿ ಮಾಡಿದರು.

ಆನೆಗಳ ಗುಂಪು ರೈತರ ಬೆಳೆಗಳನ್ನು ನಾಶ ಪಡಿಸಿದ್ದು, ಈ ಕೂಡಲೇ ಅಧಿಕಾರಿಗಳು ನಷ್ಟವನ್ನು ಅಂದಾಜಿಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »