`ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’ ವಿಶೇಷ ಕಾರ್ಯಕ್ರಮ
ಮೈಸೂರು

`ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’ ವಿಶೇಷ ಕಾರ್ಯಕ್ರಮ

November 25, 2022

ಮೈಸೂರು,ನ.24(ಪಿಎಂ)- ಜಿಲ್ಲೆಯ 85 ಸಾವಿರ ಯುವ ಮತದಾರರ ಪೈಕಿ ಕೇವಲ 17 ಸಾವಿರ ಮಂದಿ ಮಾತ್ರವೇ ಕರಡು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಹಾಗಾಗಿ ಎಲ್ಲಾ ಅರ್ಹ ಯುವ ಮತದಾರರನ್ನು ನೋಂದಣಿ ಮಾಡಿಸುವ ಸಲುವಾಗಿ ಗುರುವಾರ ಜಿಲ್ಲೆಯಾದ್ಯಂತ ಎಲ್ಲಾ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ `ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ನಡೆಸಲಾಯಿತು.

ಆ ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯಿತು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾ ವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿಯು ಜನಗಣತಿ ಸರಾಸರಿಗಿಂತ ಕಡಿಮೆ ಇರುವ ಬಗ್ಗೆ ಅವರು ಮಾಹಿತಿ ನೀಡಿದರು.

ಮುಂದುವರೆದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿ ಕಡಿಮೆ ಇರುವ ಅಂಶ ತಿಳಿಯುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದ ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಪದವಿ, ಎಂಜಿ ನಿಯರಿಂಗ್, ನರ್ಸಿಂಗ್, ವೈದ್ಯಕೀಯ ಕಾಲೇಜು ಸೇರಿ ದಂತೆ ಎಲ್ಲಾ ಪಿಯು, ಪದವಿ ಕಾಲೇಜುಗಳಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಇಂದು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದರಷ್ಟೇ ಸಾಲದು. ಮುಂದಿನ ಪ್ರಕ್ರಿಯೆ ಗಳ ಬಗ್ಗೆಯೂ ಗಮನಹರಿಸಬೇಕು ಎಂದು ವಿದ್ಯಾರ್ಥಿ ನಿಯರಿಗೆ ಸಲಹೆ ನೀಡಿದರು.

ಮೊದಲಿದ್ದಂತೆ ಅರ್ಹತಾ ದಿನಾಂಕವಾದ ಜ.1ರವರೆಗೂ ಕಾಯಬೇಕಿಲ್ಲ. ಈಗ 17 ವರ್ಷ ಮೇಲ್ಪಟ್ಟವರು ಮುಂಗಡ ವಾಗಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಪ್ರಸಕ್ತ 2023ರ ವಾರ್ಷಿಕ ಮತÀದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್ 2022ಕ್ಕೆ 18 ವರ್ಷ ತುಂಬುವ ಯುವ ಮತದಾರರು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯ ಸಾಫ್ಟ್‍ವೇರ್ 18 ವರ್ಷ ತುಂಬದವರ ಅರ್ಜಿಗಳನ್ನು ಬಾಕಿ ಉಳಿಸಿ ಕೊಂಡು ಅರ್ಹ ವಯಸ್ಸು ತುಂಬುತ್ತಿದ್ದಂತೆ ಸ್ವಯಂಚಾಲಿತ ವಾಗಿ ಪರಿಷ್ಕರಣೆಗೆ ಒಳಪಡಿಸಲಿದೆ ಎಂದು ಹೇಳಿದರು.

2023ರಲ್ಲಿ ವಿಧಾನಸಭಾ ಚುನಾವಣೆ, 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಬಹಳ ಜನ ಮತದಾರರ ಪಟ್ಟಿಯಲ್ಲಿನ ತಮ್ಮ ನ್ಯೂನತೆ ಸರಿಪಡಿಸಿ ಕೊಳ್ಳಲು ಚುನಾವಣೆ ಸಮೀಪದವರೆಗೂ ಕಾಲದೂಡು ವುದೇ ಹೆಚ್ಚು. ಇದಕ್ಕೆ ಬದಲು ಮುಂಗಡವಾಗಿ ಸರಿಪಡಿಸಿಕೊಳ್ಳಲು ವೋಟರ್ಸ್ ಹೆಲ್ಪ್‍ಲೈನ್ ಮೊಬೈಲ್ ಆಪ್ (ವಿಹೆಚ್‍ಎ) ಬಳಸಿಕೊಳ್ಳಬಹುದು. ಇದು ಸುಲಭ ಸಾಧನ ಎಂದರು. ಮೊಬೈಲ್‍ನಲ್ಲಿ ವೋಟರ್ಸ್ ಹೆಲ್ಪ್‍ಲೈನ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ವಿಳಾಸ ದೃಢೀಕರಣ ಹಾಗೂ ವಯಸ್ಸಿನ ದೃಢೀಕರಣದ ದಾಖಲೆಗಳನ್ನು ಅಪ್‍ಲೋಡ್ ಮಾಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ ಅಪ್ ಲೋಡ್‍ಗೂ ಅವಕಾಶವಿದ್ದು, ಆದರೆ ಇದು ಕಡ್ಡಾಯ ವಲ್ಲ. ಅದಾಗ್ಯೂ ಇದನ್ನು ಅಪ್‍ಲೋಡ್ ಮಾಡಿದರೆ ಪಟ್ಟಿಯಲ್ಲಿ ನಮ್ಮ ದೃಢೀಕರಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಇಂದು ನೀವು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಬಿಎಲ್‍ಓಗಳು (ಮತಗಟ್ಟೆ ಅಧಿಕಾರಿಗಳು) ಪರಿಶೀಲನೆಗಾಗಿ ನಿಮ್ಮ ಮನೆಗಳಿಗೆ ಭೇಟಿ ನೀಡಲಿದ್ದಾರೆ. ನಿಮ್ಮ ವಿಳಾಸ ವ್ಯಾಪ್ತಿಯ ಬಿಎಲ್‍ಓ ಯಾರೆಂದು ತಿಳಿದುಕೊಳ್ಳಬೇಕು. ನಿಮ್ಮ ಮತಗಟ್ಟೆ ಯಾವುದೆಂದು ಈಗಲೇ ತಿಳಿದುಕೊಳ್ಳ ಬೇಕು. ಇದರಿಂದ ಮತದಾನ ದಿನದಂದು ಗೊಂದಲ ಉಂಟಾಗುವುದು ತಪ್ಪಲಿದೆ ಎಂದು ಸಲಹೆ ನೀಡಿದರು.
ಪ್ರತಿದಿನ ಕನಿಷ್ಠ 2 ಗಂಟೆ ಓದಿ: ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಸಂತಸ ವಿಚಾರ. ಕಾರಣ ಯಾವುದೇ ಉನ್ನತ ಬದಲಾವಣೆಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಪರೀಕ್ಷೆ ನಾಳೆ ಇರುವಾಗ ಓದುವುದು ಮುಖ್ಯವಲ್ಲ. ಪ್ರತಿದಿನ ಕನಿಷ್ಠ 2 ಗಂಟೆ ಓದುವುದು ಪರಿಣಾಮಕಾರಿ. ನಾವು ಕಾಲೇಜಿನಲ್ಲಿ ಓದುವಾಗ ಕೇವಲ ಬೇಸಿಕ್ ಮೊಬೈಲ್‍ಗಳಿದ್ದವು. ಆದರೆ ಈಗ ಸಾಮಾಜಿಕ ಜಾಲತಾಣಗಳು ಹೆಚ್ಚಾಗಿದ್ದು, ಮೊಬೈಲ್‍ಗಳಲ್ಲೇ ಲಭ್ಯವಿರುವ ಅವುಗಳಲ್ಲಿಯೇ ಹೆಚ್ಚು ವಿದ್ಯಾರ್ಥಿ ಸಮೂಹ ತಲ್ಲೀನವಾ ಗುವುದು ಜಾಸ್ತಿಯಾಗಿದೆ. ಆದರೆ ಸಾಮಾಜಿಕ ಜಾಲ ತಾಣಗಳನ್ನು ಸದ್ಬಳಕೆಗೆ ಸೀಮಿತಗೊಳಿಸಿ ಓದಿನಲ್ಲಿ ತೊಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Translate »