ಮೈಸೂರಲ್ಲಿ ಮುಂಜಾನೆ ವೃದ್ಧ ದಂಪತಿ ಕಟ್ಟಿ ಹಾಕಿ ಮನೆ ದರೋಡೆ ಪ್ರಕರಣ: ಐವರ ಬಂಧನ
ಮೈಸೂರು

ಮೈಸೂರಲ್ಲಿ ಮುಂಜಾನೆ ವೃದ್ಧ ದಂಪತಿ ಕಟ್ಟಿ ಹಾಕಿ ಮನೆ ದರೋಡೆ ಪ್ರಕರಣ: ಐವರ ಬಂಧನ

September 22, 2020

ಮೈಸೂರು, ಸೆ. 21(ಆರ್‍ಕೆ)- ಮೈಸೂರಿನ ವಿವೇಕಾನಂದನಗರದಲ್ಲಿ 20 ದಿನಗಳ ಹಿಂದೆ ವೃದ್ಧ ದಂಪತಿ ಕೈಕಾಲುಗಳನ್ನು ಕಟ್ಟಿಹಾಕಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಐವರು ಖದೀ ಮರ ಬಂಧಿಸುವಲ್ಲಿ ಮೈಸೂರು ದೇವರಾಜ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಬಳಿಯ ಡಾ.ಅಂಬೇಡ್ಕರ್ ನಗರದ ನಿವಾಸಿ ಲೇಟ್ ರೆಹ ಮಾನ್ ಶರೀಫ್ ಮಗ ಜಬಿಉಲ್ಲಾ ಶರೀಫ್ ಅಲಿ ಯಾಸ್ ಜಬಿ(27), ಉದಯಗಿರಿಯ ಮಹಮ್ಮ ದೀಯ ಮಸೀದಿ ರಸ್ತೆ 11ನೇ ಕ್ರಾಸ್ ನಿವಾಸಿ ರಫೀಕ್ ಅಹಮದ್ ಮಗ ಇಬ್ರಾಹಿಂ ಅಹಮದ್ ಅಲಿಯಾಸ್ ಷಜ್ಜಾದ್(24), ಗೌಸಿಯಾನಗರ 3ನೇ ಕ್ರಾಸ್ ನಿವಾಸಿ ಅನ್ವರ್‍ಪಾಷಾ ಮಗ ಖಾಸಿಫ್ (22), ಗಿರಿಯಾಬೋವಿಪಾಳ್ಯ ನಿವಾಸಿಯಾದ ಮೂಲತಃ ಹಾಸನ ನಗರ ತಣ್ಣೀರುಹಳ್ಳ ನಿವಾಸಿ ರಂಗೇಗೌಡನ ಮಗ ಗವಿಗೌಡ ಅಲಿಯಾಸ್ ಸುರೇಶ್ (42) ಹಾಗೂ ವಿವೇಕಾನಂದನಗರ 7ನೇ ಕ್ರಾಸ್ ನಿವಾಸಿ, ಮೂಲತಃ ಹುಣಸೂರು ತಾಲೂಕು ಬಿಳಿಕೆರೆ ನಿವಾಸಿ ಲೇಟ್ ಶಿವನಂಜಪ್ಪ ಮಗ ಬಿ.ಎಸ್.ಗಿರೀಶ್(52) ಬಂಧಿತ ದರೋಡೆಕೋರ ರಾಗಿದ್ದು, ಅವರಿಂದ 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಧÀನ್ವಂತರಿ ರಸ್ತೆಯ ದೇವರಾಜ ಪೊಲೀಸ್ ಠಾಣೆಯಲ್ಲಿ ಇಂದು ಮಧ್ಯಾಹ್ನ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ, ಸೆಪ್ಟೆಂಬರ್ 17ರಂದು ಸಂಜೆ 4 ಗಂಟೆ ವೇಳೆಗೆ ದೇವರಾಜ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಎಸ್.ರಾಜು ಅವರು ಗರುಡಾ ವಾಹನದಲ್ಲಿ ಗಸ್ತು ಕರ್ತವ್ಯ ದಲ್ಲಿದ್ದಾಗ ಈ ಐವರು, ವಿನೋಬಾ ರಸ್ತೆ ಸಮೀಪ ಶಿವಾಯನಮಃ ಮಠದ ರಸ್ತೆಯಲ್ಲಿ ಒಂದು ಚಿನ್ನದ ಸರವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಬಾತ್ಮಿದಾರರ ಮಾಹಿತಿಯ ಮೇಲೆ ಕಾರ್ಯಾ ಚರಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಚಿನ್ನದ ಅಂಗಡಿಯಲ್ಲಿ ಸರ ಮಾರಾಟ ಮಾಡಲು ಯತ್ನಿಸು ತ್ತಿದ್ದು, ಉಳಿದ ಮೂವರು ಆಟೋ ಒಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದದ್ದು ಕಂಡು ಬಂದಿತು. ಈ ವೇಳೆ ಅವರ ಬಳಿ 2 ಎಳೆಯ 1 ಚಿನ್ನದ ಮಾಂಗಲ್ಯ ಸರ ಇದ್ದದ್ದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಅವರು ಮೈಸೂರಿನ ವೃದ್ಧದಂಪತಿಗಳನ್ನು ದೋಚಿದ್ದರೂ ಎಂಬ ಮಾಹಿತಿ ದೃಢಪಟ್ಟಿತು ಎಂದು ತಿಳಿಸಿದರು.

ಮೈಸೂರಿನ ವಿವೇಕಾನಂದನಗರ 7ನೇ ಕ್ರಾಸ್‍ನಲ್ಲಿ ವಾಸವಿರುವ ವೀರಭದ್ರಯ್ಯ ಮತ್ತು ಪತ್ನಿ ಶ್ರೀಮತಿ ರಂಗಮ್ಮ ವೃದ್ಧ ದಂಪತಿಯ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಗಿರೀಶ್, ವಯಸ್ಸಾದ ದಂಪತಿ ಮಾತ್ರವೇ ಮನೆಯಲ್ಲಿ ವಾಸವಿದ್ದು, ಅವರ ಮಕ್ಕಳು ವಿದೇಶದಲ್ಲಿ ಇರುವುದರಿಂದ ಅವರನ್ನು ದೋಚುವುದು ಸುಲಭ ಎಂದು ಯೋಚಿಸಿ ಅವರ ಚಲನವಲನ ವನ್ನು ಗಮನಿಸಿದ ನಂತರ ಈ ವಿಷಯವನ್ನು ಸ್ನೇಹಿತರಾದ ಜಬಿಉಲ್ಲಾ, ಷಜ್ಜಾದ್‍ಗೆ ತಿಳಿಸಿದ್ದ. ನಂತರ ಸಂಚು ರೂಪಿಸಿ ಸೆ.21ರಂದು ಮುಂಜಾನೆ ಆಟೋ ಒಂದರಲ್ಲಿ ಬಂದಿದ್ದ ಆರೋಪಿಗಳು ಆಟೋವನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿ ವೀರಭದ್ರಯ್ಯ ಅವರ ಮನೆಯ ಹಿಂದಿನ ಕಾಂಪೌಂಡ್ ಹತ್ತಿ ಮೇಲ್ಛಾವಣಿ ಮೇಲೇರಿ, ನಂತರ ಗೋಡೆಗೆ ಹಾರಿದಾಗ ಶಬ್ದ ಕೇಳಿ, ವೀರಭದ್ರಯ್ಯ ಅವರ ಪತ್ನಿ ರಂಗಮ್ಮ ಅವರು ಮನೆಯ ಹಿಂಭಾಗಿಲನ್ನು ತೆಗೆದಿದ್ದಾರೆ. ಆಗ ಆರೋಪಿಗಳು ಮನೆಯೊಳಗೆ ನುಗ್ಗಿ ವೃದ್ಧ ದಂಪತಿಗಳಿಬ್ಬರಿಗೂ ಡ್ರ್ಯಾಗರ್ ತೋರಿಸಿ ಹೆದರಿಸಿದ್ದಾರೆ. ಅಲ್ಲದೇ ಬಟ್ಟೆಯಿಂದ ಅವರ ಬಾಯಿ ಮುಚ್ಚಿ, ಹಗ್ಗದಿಂದ ಅವರ ಕೈಕಾಲು ಕಟ್ಟಿ ಹಾಕಿ, ರಂಗಮ್ಮನವರ ಮೈಮೇಲಿದ್ದ ಚಿನ್ನದ ಒಡವೆ ಮತ್ತು ಬೀರುವಿನಲ್ಲಿದ್ದ 15 ಸಾವಿರ ರೂ.ಗಳನ್ನು ದೋಚಿ ಪರಾರಿಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಠಾಣೆ ಇನ್‍ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಮಹಜರು ಮಾಡಿ ಎದುರು ಮನೆಯ ಸಿಸಿ ಕ್ಯಾಮರಾ ಫುಟೇಜಸ್ ಗಳನ್ನು ಪಡೆದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದರು. ಆದರೆ ಆರೋಪಿಗಳು ದೇವರಾಜ ಪೊಲೀಸರಿಗೆ ಸೆಪ್ಟೆಂಬರ್ 17ರಂದು ಸಿಕ್ಕಿ ಬಿದ್ದಿದ್ದು ಅವರಿಂದ ದಂಪತಿ ಯನ್ನು ದೋಚಿದ್ದ ಆಭರಣಗಳು ಹಾಗೂ 15 ಸಾವಿರ ರೂ. ಹಣದಿಂದ ಖರೀದಿಸಿದ್ದ ಚಿನ್ನವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳÀನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಯಿತು ಎಂದು ಡಾ.ಎ.ಎನ್.ಪ್ರಕಾಶ್‍ಗೌಡರು ಸುದ್ಧಿಗಾರರಿಗೆ ತಿಳಿಸಿದರು.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ನಿರ್ದೇಶನದಂತೆ ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್‍ಗೌಡ, ಎಂ.ಎಸ್.ಗೀತಾ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸಬ್‍ಇನ್‍ಸ್ಪೆಕ್ಟರ್ ಎಸ್.ರಾಜು, ಎ.ಎಸ್.ಐ ಉದಯಕುಮಾರ್, ಸಿಬ್ಬಂದಿಗಳಾದ ಸೋಮಶೆಟ್ಟಿ, ವೇಣುಗೋಪಾಲ್, ನಂದೀಶ್, ಪ್ರದೀಪ್, ಚಂದ್ರು, ವೀರೇಶ್ ಬಾಗೇವಾಡಿ, ನಾಗರಾಜು, ವಸಂತಕುಮಾರ್, ಚಂದ್ರು, ಪ್ರಕಾಶ್ ಹಾಗೂ ಧನಂಜಯ ಪಾಲ್ಗೊಂಡಿದ್ದರು.

 

ನ್ಯಾಯಮೂರ್ತಿ ಶಿವಪ್ಪ ದಂಪತಿ ದೋಚಿದ್ದ ಪ್ರಕರಣಕ್ಕೆ ಲಿಂಕ್
ಮೈಸೂರು,ಸೆ.21(ಆರ್‍ಕೆ)-ಮೈಸೂರಿನ ವೃದ್ಧದಂಪತಿಯನ್ನು ದೋಚಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿ ಗಳ ಪೈಕಿ ಗವಿಗೌಡ ಅಲಿಯಾಸ್ ಸುರೇಶ್ ಎಂಬಾತ ಕಳೆದ 4 ವರ್ಷಗಳ ಹಿಂದೆ ಪಾಂಡವಪುರ ತಾಲೂಕು ಪಟ್ಟಸೋಮನ ಹಳ್ಳಿ ಬಳಿಯ ಫಾರಂಹೌಸ್‍ನಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಶಿವಪ್ಪ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದಂಪತಿ ದೋಚಿದ್ದ ಪ್ರಕರಣದಲ್ಲಿ ಭಾಗಿಯಾಗಿರುವುದು ಬಯಲಾಗಿದೆ.

ಮೈಸೂರಿನ ವಿವೇಕಾನಂದನಗರ ಏಳನೇ ಕ್ರಾಸ್‍ನಲ್ಲಿರುವ ವೀರಭದ್ರಯ್ಯ ಮತ್ತು ರಂಗಮ್ಮ ವೃದ್ಧ ದಂಪತಿ ಕೈಕಾಲು ಕಟ್ಟಿ ಹಾಕಿ ಆಗಸ್ಟ್ 29ರಂದು ಬೆಳಿಗ್ಗೆ 15 ಸಾವಿರ ರೂ. ನಗದು ಸೇರಿ ದಂತೆ ಸುಮಾರು 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವನ್ನು ದೋಚಿ ಪರಾರಿಯಾಗಿದ್ದ ಜಬಿಉಲ್ಲಾ ಶರೀಫ್, ಇಬ್ರಾಹಿಂ ಅಹಮದ್, ಖಾಸೀಫ್, ಗವಿಗೌಡ ಅಲಿಯಾಸ್ ಸುರೇಶ ಹಾಗೂ ಬಿ.ಎಸ್.ಗಿರೀಶ್‍ನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ 4ನೇ ಆರೋಪಿ ಮೈಸೂರಿನ ಗಿರಿಯಾಬೋವಿ ಪಾಳ್ಯ ನಿವಾಸಿ ಮೂಲತಃ ಹಾಸನ ನಗರ ತಣ್ಣೀರುಹಳ್ಳದ ಗುಡನಹಳ್ಳಿಕೊಪ್ಪಲಿನ ಬಳಿಯ ಗ್ರಾಮದವ ನಾದ ರಂಗೇಗೌಡನ ಮಗ ಗವಿಗೌಡ ಅಲಿಯಾಸ್ ಸುರೇಶ್ ಎಂಬಾತ 2015ರ ಅಕ್ಟೋಬರ್ 26ರಂದು ನಡೆದಿದ್ದ ಪಾಂಡವ ಪುರ ತಾಲೂಕು ಪಟ್ಟ ಸೋಮನಹಳ್ಳಿ ಬಳಿಯ ಶಿವಪ್ಪ ದಂಪತಿ ದೋಚಿದ್ದ ಪ್ರಕರಣದ ಆರೋಪಿ, ಈ ವೇಳೆ ನ್ಯಾಯಮೂರ್ತಿ ದಂಪತಿ ಕಟ್ಟಿಹಾಕಿ 1.4 ಲಕ್ಷ ರೂ. ನಗದು ಹಾಗೂ 177 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದ ಎಂಬುದು ತನಿಖಾ ವೇಳೆ ತಿಳಿದುಬಂದಿತು ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ತಿಳಿಸಿದರು. ಈ ಐವರು ಆರೋಪಿಗಳು ವೃದ್ಧ ದಂಪತಿ ಮಾತ್ರ ಮನೆಯಲ್ಲಿ ವಾಸಮಾಡುತ್ತಿರು ವವರನ್ನೇ ಟಾರ್ಗೆಟ್ ಮಾಡಿ 3-4 ದಿನಗಳ ಕಾಲ ಹೊಂಚು ಹಾಕಿ, ಅವರ ಚಲನವಲನಗಳ ಬಗ್ಗೆ ತಿಳಿದುಕೊಂಡು ಯಾರೂ ಅವರ ಮನೆಗೆ ಬರುವುದಿಲ್ಲ ಎಂಬುದನ್ನು ಖಚಿತ ಪಡಿಸಿ ಕೊಂಡ ನಂತರ ಕಾರ್ಯಾಚರಣೆ ನಡೆಸಿ ನಗದು ಹಣವನ್ನು ದೋಚುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಟೋ ಡ್ರೈವರ್, ಬಟ್ಟೆ ವ್ಯಾಪಾರ ಹಾಗೂ ಮನೆ ಬ್ರೋಕರ್ ಕೆಲಸ ಮಾಡಿಕೊಂಡಿದ್ದ ಈ ಐವರು ಐಷಾರಾಮಿ ಜೀವನಕ್ಕಾಗಿ ದರೋಡೆ ಕೃತ್ಯವನ್ನು ಎಸಗುತ್ತಿದ್ದರು ಎಂಬ ವಿಷಯವನ್ನು ಡಿಸಿಪಿ ಅವರು ತಿಳಿಸಿದ್ದಾರೆ.

Translate »