ಕೊರೊನಾ ವಿರುದ್ಧ ಕಾರ್ಯನಿರ್ವಹಿಸುವ ಪೊಲೀಸರು, ವೈದ್ಯರಿಗೆ ಅನ್ನ ದಾಸೋಹ
ಕೊಡಗು

ಕೊರೊನಾ ವಿರುದ್ಧ ಕಾರ್ಯನಿರ್ವಹಿಸುವ ಪೊಲೀಸರು, ವೈದ್ಯರಿಗೆ ಅನ್ನ ದಾಸೋಹ

April 6, 2020

ವಿರಾಜಪೇಟೆ, ಏ.5- ಕೊರೊನಾ ವೈರಸ್‍ನಿಂದಾಗಿ ಲಾಕ್ ಡೌನ್ ಆಗಿರುವುದರಿಂದ ವೀರಾಜಪೇಟೆ ಮೀನುಪೇಟೆಯ ಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಹಾಗೂ ಓಣಂ ಹಬ್ಬದ ಆಚರಣಾ ಸಮಿತಿ ವತಿಯಿಂದ ಹಗಲು ರಾತ್ರಿಯನ್ನದೆ ಕರ್ತವ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿ ನೌಕರರು ಮತ್ತು ಪೌರ ಕಾರ್ಮಿಕರುಗಳಿಗೆ, ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಹಾಗೂ ಇತರ ಕಾರ್ಮಿಕರುಗಳಿಗೆ ಅನ್ನ ದಾಸೋಹ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಉಪಾಧ್ಯಕ್ಷ ಟಿ.ಎಸ್.ಗೋವಿಂದನ್, ಕಾರ್ಯದರ್ಶಿ ಸಿ.ಆರ್.ಬಾಬು, ಸಮಿತಿ ಸದಸ್ಯರಾದ ಟಿ.ಕೆ.ರಾಜನ್ ಪುಷ್ಪ, ಸದೇವನ್, ಕೃಷ್ಣಕುಟ್ಟಿ, ಸುಮೇಶ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಜೂನಾ, ಹರ್ಷವಧನ್, ರಜನಿಕಾಂತ್, ಜಲೀಲ್ ಹಾಗೂ ಇತರರು ಹಾಜರಿದ್ದರು.

Translate »