ಯಂಗ್ ಅಚೀವರ್ಸ್ ಆಫ್ ದಿ ಇಯರ್ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು

ಯಂಗ್ ಅಚೀವರ್ಸ್ ಆಫ್ ದಿ ಇಯರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

October 27, 2018

ಮೈಸೂರು:  ಮೈಸೂರಿನ ವಿನೂತನ ಸಂಸ್ಥೆಯು 2017ರ ನವೆಂಬರ್‍ನಿಂದ ಈ ವರ್ಷದ ಅಕ್ಟೋಬರ್‍ವರೆಗೆ ಕ್ರೀಡೆ, ಸಾಹಿತ್ಯ, ಸಂಗೀತ, ನೃತ್ಯ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ರಾಷ್ಟ್ರ ಅಥವಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿರುವ 25 ಮಂದಿಗೆ ‘ಯಂಗ್ ಅಚೀವರ್ಸ್ ಆಫ್ ದಿ ಇಯರ್’ ಹಾಗೂ ವರ್ಷದ ಸರ್ವ ಶ್ರೇಷ್ಠ ಯುವಕ, ವರ್ಷದ ಸರ್ವ ಶ್ರೇಷ್ಠ ಯುವತಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ. ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 14 ರಿಂದ 18 ವರ್ಷದೊಳಗಿನ ಅರ್ಹ ವಿದ್ಯಾರ್ಥಿಗಳು ನ.12ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9342241291 ಅನ್ನು ಸಂಪರ್ಕಿಸಬಹುದು.

Translate »