ಮೈಸೂರು ದಸರೆಗೆ ಸಂಭ್ರಮದ ಸಿದ್ಧತೆ ಅರಮನೆಯಲ್ಲಿ ಸಿಂಹಾಸನ ಜೋಡಣೆ
ಮೈಸೂರು

ಮೈಸೂರು ದಸರೆಗೆ ಸಂಭ್ರಮದ ಸಿದ್ಧತೆ ಅರಮನೆಯಲ್ಲಿ ಸಿಂಹಾಸನ ಜೋಡಣೆ

October 2, 2021

ಮೈಸೂರು, ಅ.೧(ಎಂಟಿವೈ)-ದಸರಾ ವೇಳೆ ರಾಜವಂಶಸ್ಥರು ನಡೆಸಲಿರುವ ಪ್ರಮುಖ ಧಾರ್ಮಿಕ ಆಚರಣೆ ಖಾಸಗಿ ದರ್ಬಾರ್‌ಗಾಗಿ ಶುಕ್ರವಾರ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಬಿಗಿ ಭದ್ರತೆ ನಡುವೆ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು.

ಇಂದು ಬೆಳಗ್ಗೆ ೭.೨೦ಕ್ಕೆ ರಾಜ ಪುರೋಹಿತರ ಸಮ್ಮುಖದಲ್ಲಿ ನವಗ್ರಹ, ಶಾಂತಿ ಹೋಮ ಸೇರಿದಂತೆ ಕೆಲವು ಪೂಜಾ ಕೈಂಕರ್ಯಗಳನ್ನು ನಡೆಸಿದ ನಂತರ ಅರಮನೆಯ ೧೪ ಮಂದಿ ಸಿಬ್ಬಂದಿ ಬೆಳಗ್ಗೆ ೯.೩೦ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್ ಹಾಲ್‌ನಲ್ಲಿ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ ಭದ್ರಾಸನ ಜೋಡಣೆ ಮಾಡಿದರು. ಇದಕ್ಕೂ ಮುನ್ನ ಸ್ಟಾçಂಗ್ ರೂಂನಿAದ ದರ್ಬಾರ್ ಹಾಲ್‌ಗೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ನಲ್ಲಿದ್ದ ಎಲ್ಲಾ ಸಿಸಿ ಕ್ಯಾಮರಾಗಳಿಗೆ ಪರದೆ ಎಳೆದು ಸಿಂಹಾಸನದ ೮ ಭಾಗಗಳನ್ನು ಶಸ್ತçಸಜ್ಜಿತ ಭದ್ರತಾ ಸಿಬ್ಬಂದಿಯೊAದಿಗೆ ದರ್ಬಾರ್ ಹಾಲ್‌ಗೆ ತರಲಾಯಿತು. ಈ ಬಾರಿ ದಸರಾ ಮಹೋತ್ಸವ ಅ.೭ ರಿಂದ ೧೫ರವರೆಗೆ
ನಡೆಯಲಿದ್ದು, ಅರಮನೆಯಲ್ಲಿ ಅಕ್ಟೋಬರ್ ೭ರಂದು ಖಾಸಗಿ ದರ್ಬಾರ್ ನಡೆಯಲಿದೆ. ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಚಿನ್ನದ ಸಿಂಹಾಸನ ದರ್ಶನ ಸಾರ್ವಜನಿಕರಿಗೆ ಲಭ್ಯವಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವಿಲ್ಲ. ಇಂದು ನಡೆದ ಸಿಂಹಾಸನ ಜೋಡಣೆ ವೇಳೆ ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ರಾಜ ವಂಶಸ್ಥರ ಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಮಾಧ್ಯಮದವರಿಗೂ ಪ್ರವೇಶವಿರಲಿಲ್ಲ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Translate »