ಜನಜಾಗೃತಿಗಾಗಿ ಅಶೋಕಪುರಂ ಠಾಣೆ ಪೊಲೀಸರ ಸೈಕಲ್ ರ್ಯಾಲಿ
ಮೈಸೂರು

ಜನಜಾಗೃತಿಗಾಗಿ ಅಶೋಕಪುರಂ ಠಾಣೆ ಪೊಲೀಸರ ಸೈಕಲ್ ರ್ಯಾಲಿ

December 13, 2020

ಮೈಸೂರು, ಡಿ.12(ಎಸ್‍ಪಿಎನ್)- ಅಪ ರಾಧ ಮಾಸಾಚರಣೆ ಅಂಗವಾಗಿ ಮೈಸೂ ರಿನ ಅಶೋಕಪುರಂ ಠಾಣೆ ಪೊಲೀಸರು ಸೈಕಲ್ ರ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಕಾನೂನು-ಸುವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರು. ಮೈಸೂರು ನಗರ ಪಾಲಿಕೆಯ ಜಯನಗರ ವಲಯ ಕಚೇರಿ-2ರ ಆವರಣದಲ್ಲಿ ಕೆ.ಆರ್.ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಅವರು ಸೈಕಲ್ ರ್ಯಾಲಿಗೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು.

ನಂತರ ಮಾಧ್ಯಮಗಳ ಜತೆ ಮಾತ ನಾಡಿ, ಸಾರ್ವಜನಿಕರು ತಮ್ಮ ಸುತ್ತ ನಡೆ ಯುವ ಅಪರಾಧ ಚಟುವಟಿಕೆಗಳ ಬಗ್ಗೆ ಬೀಟ್ ಪೊಲೀಸರಿಗೆ ತಿಳಿಸಬೇಕು. ಇದರಿಂದ ಮುಂದಾಗುವ ಅನಾಹುತ ತಪ್ಪಿಸಲು ಸಾಧ್ಯ. ಪಕ್ಕದ ಮನೆ ಅಥವಾ ತಮ್ಮ ಬಡಾವಣೆ ಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಅಪರಿಚಿತರಿಗೆ ಮನೆಗೆ ಬಾಡಿಗೆ ಕೊಡುವಾಗ, ಕುಟುಂಬ ಸಮೇತ ಬೇರೆ ಊರಿಗೆ ಹೋಗುವಾಗ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಿಳಿಸಿ. ಗೃಹಿಣಿಯರು ಹೊರಗೆ ಹೋಗುವಾಗ ಮೈ ಮೇಲೆ ಚಿನ್ನದ ಆಭರಣಗಳನ್ನು ಪ್ರದರ್ಶಿಸದಿರುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಸೈಕಲ್ ರ್ಯಾಲಿ ನ್ಯೂ ಕಾಂತರಾಜೇ ಅರಸ್ ರಸ್ತೆ, ಎ.ಸಿ.ಗಿರಿ ರಸ್ತೆ, ಅರವಿಂದ ನಗರ, ಶ್ರೀರಾಂಪುರ ಸೇರಿದಂತೆ ಕುವೆಂಪು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಈ ವೇಳೆ ಅಪರಾಧ ತಡೆ ಘೋಷವಾಕ್ಯ ಗಳನ್ನು ಪ್ರದರ್ಶಿಸಲಾಯತು. ಪೊಲೀಸ್ ಇನ್‍ಸ್ಪೆಕ್ಟರ್ ಪಿ.ಎಸ್.ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

 

 

Translate »