ಶಾಸಕ ರಾಮದಾಸ್‍ರಿಂದ ಛಾಯಾದೇವಿ ಅನಾಥಾಶ್ರಮಕ್ಕೆ ನೆರವು
ಮೈಸೂರು

ಶಾಸಕ ರಾಮದಾಸ್‍ರಿಂದ ಛಾಯಾದೇವಿ ಅನಾಥಾಶ್ರಮಕ್ಕೆ ನೆರವು

April 19, 2020

ಮೈಸೂರು,ಏ.18(ಎಂಟಿವೈ)-ಮೈಸೂರಿನ ಛಾಯಾದೇವಿ ಅನಾಥಾಶ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ, ಅಲ್ಲಿನ ಹಿರಿಯ ನಾಗರಿಕರು, ಮಕ್ಕಳೊಂದಿಗೆ ಸಮಾ ಲೋಚಿಸಿ ದಿನಸಿ ಪದಾರ್ಥ ವಿತರಿಸಿದರು.

ಮೈಸೂರಿನ ಚಿಕ್ಕಹರದನಹಳ್ಳಿಯಲ್ಲಿರುವ ಛಾಯಾದೇವಿ ಅನಾಥಾಶ್ರಮಕ್ಕೆ `ಮೈಸೂರು ಕೋವಿಡ್ ಕೇರ್ ಟೀಂ’ ಸದಸ್ಯರೊಂದಿಗೆ ಶನಿವಾರ ಆಗಮಿಸಿದ ಶಾಸಕ ಎಸ್.ಎ. ರಾಮದಾಸ್, ಲಾಕ್‍ಡೌನ್‍ನಿಂದ ಆಶ್ರಮ ದಿಂದ ಹೊರಬರದೆ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು, ವೃದ್ಧರ ಕುಶಲೋಪರಿ ವಿಚಾರಿಸಿ ದರು. ಈ ವೇಳೆ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಗತ್ಯ ಔಷಧ ಹಾಗೂ ಅಕ್ಕಿ, ತರಕಾರಿ, ಕಾಫಿ ಪುಡಿ, ಟೀ ಪುಡಿ, ಸಕ್ಕರೆ, ಹಣ್ಣು ಹಂಪಲು ಗಳನ್ನು ಆಶ್ರಮಕ್ಕೆ ನೀಡಿದರು.

ಇದೇ ವೇಳೆ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಮಾಡಲಾಗಿದ್ದು, ಇದರಿಂದ ಛಾಯಾದೇವಿ ಆಶ್ರಮದಲ್ಲಿರುವ ಹಿರಿಯ ನಾಗರಿಕರು ಹಾಗೂ ಮಕ್ಕಳು ಕಂಗೆಟ್ಟಿದ್ದರು. ಅವರಿಗೆ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಂದು ಆಶ್ರಮಕ್ಕೆ ಕೋವಿಡ್ ಕೇರ್ ತಂಡದ ಸದಸ್ಯ ರೊಂದಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಗಿದೆ. ಅಲ್ಲದೆ ಕೆಲವರಿಗೆ ಔಷಧಿ ಅಗತ್ಯವಿತ್ತು. ಅಂತಹವರಿಗೆ ವೈದ್ಯರ ಸಲಹೆ ಮೇರೆಗೆ ಔಷಧ ವಿತರಿಸಲಾಗಿದೆ. ಮೈಸೂ ರಿನ ಹಲವಾರು ಆಶ್ರಮಗಳಲ್ಲಿ ಮಕ್ಕಳು ಮತ್ತು ವಯೋವೃದ್ಧರಿದ್ದಾರೆ. ಅವರ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಛಾಯಾ ದೇವಿ ಆಶ್ರಮದ ನಿವಾಸಿಗಳಿಗೆ ಊಟಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದಿನಸಿ, ತರಕಾರಿ ನೀಡಲಾಗಿದೆ ಎಂದರು.

ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ವಿದೆ. ಆಶ್ರಮದ ನಿವಾಸಿಗಳು ಲಾಕ್‍ಡೌನ್ ನಿಯಮದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. 4 ಗೋಡೆಗಳ ನಡುವೆ ಇರುವ ಹಿರಿಯರು ಹಾಗೂ ಮಕ್ಕಳಿಗೆ ಇಂತಹ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ. ಅಲ್ಲದೆ ಸೋಂಕು ಹರಡು ವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಅನುಸರಿಸಬೇಕಾದ ನಿಯಮ, ಸ್ವಚ್ಛತೆ ಕಾಪಾಡುವ ಬಗೆಯನ್ನು ಕೋವಿಡ್ ಕೇರ್ ತಂಡದ ಸದಸ್ಯರಿಂದ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.

Translate »