ಸೆ.28ರಂದು ಶ್ರೇಷ್ಠ ಶಿಕ್ಷಕ ಡಾ. ಬಿ. ಗುರು ಬಸವರಾಜ್ ಅಭಿನಂದನಾ ಸಮಾರಂಭ
ಮೈಸೂರು

ಸೆ.28ರಂದು ಶ್ರೇಷ್ಠ ಶಿಕ್ಷಕ ಡಾ. ಬಿ. ಗುರು ಬಸವರಾಜ್ ಅಭಿನಂದನಾ ಸಮಾರಂಭ

September 22, 2018

ಮೈಸೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಸಾಲಿನ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಮೈಸೂರಿನ ಜೆಎಸ್‍ಎಸ್ ಆಯುರ್ವೇದ ಕಾಲೇಜಿನ ಪ್ರೊ. ಡಾ.ಬಿ.ಗುರು ಬಸವರಾಜ್ ಅವರಿಗೆ ಅಭಿನಂದನಾ ಸಮಾರಂಭವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆಯುರ್ವೇದ ಪ್ರಚಾರ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಸೆ.28ರಂದು ಸಂಜೆ 5 ಗಂಟೆಗೆ ಕಸಾಪ ಸಭಾಂಗಣ ದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಸಚಿವ ಎಂ. ಶಿವಣ್ಣ ಉದ್ಘಾಟಿಸುವರು. ಖ್ಯಾತ ವಿಮರ್ಶಕ ಮಲೆಯೂರು ಗುರುಸ್ವಾಮಿ ಮತ್ತು ಡಾ. ಎಂ.ಜಿ.ಆರ್.ಅರಸ್ ಅವರು ಅಭಿನಂದನಾ ಭಾಷಣ ಮಾಡುವರು. ಮಧುಮೇಹ ಚಿಕಿತ್ಸಾ ತಜ್ಞರಾದ ಡಾ.ವಿ.ಲಕ್ಷ್ಮೀನಾರಾಯಣ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ.ಚಂದ್ರಶೇಖರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಂ.ಜಿ.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸು ವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು.

Translate »