ಆಸ್ತಿ ತೆರಿಗೆ ವಸೂಲಿಗೆ ಮೈಸೂರು ಪಾಲಿಕೆಯಿಂದ ಬ್ಯಾನರ್ ಚಳವಳಿ
ಮೈಸೂರು

ಆಸ್ತಿ ತೆರಿಗೆ ವಸೂಲಿಗೆ ಮೈಸೂರು ಪಾಲಿಕೆಯಿಂದ ಬ್ಯಾನರ್ ಚಳವಳಿ

November 10, 2021

ಮೈಸೂರು, ನ. 9(ಆರ್‍ಕೆ)- ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಬ್ಯಾನರ್ ಚಳವಳಿ ಆರಂಭಿಸಿದೆ.

ವಾಸದ ಮನೆ, ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪ, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳ ಆಸ್ತಿ ತೆರಿಗೆ ವಸೂಲಿ ಅಭಿಯಾನ ತೀವ್ರ ಗೊಳಿಸಿರುವ ಪಾಲಿಕೆ ಕಂದಾಯ ವಿಭಾ ಗದ ಅಧಿಕಾರಿಗಳು, 10-15 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವವರ ಕಟ್ಟಡದ ಮುಂದೆ ನೋಟಿಸ್ ಬ್ಯಾನರ್ ಅಳವಡಿ ಸುವ ಹೊಸ ಚಳವಳಿ ಆರಂಭಿಸಿದ್ದಾರೆ.

‘ಸದರಿ ಸ್ವತ್ತಿನ ಆಸ್ತಿ ತೆರಿಗೆಯು 2021-22ನೇ ಸಾಲಿನವರೆಗೆ ಬಾಕಿ ಇದ್ದು, ಸ್ವತ್ತಿನ ಮಾಲೀಕರು ಪಾವತಿಸಿರುವುದಿಲ್ಲ. ಕರ್ನಾ ಟಕ ಪೌರ ನಿಗಮಗಳ ಅಧಿನಿಯಮ 1976ರ ಅನುಸಾರ ಆಸ್ತಿ ತೆರಿಗೆಯನ್ನು ಜಪ್ತಿ ಮೂಲಕ ವಸೂಲಿ ಮಾಡಲು ಕ್ರಮ ವಹಿಸಲಾಗುವು ದೆಂದು ಈ ಮೂಲಕ ನೋಟಿಸ್ ನೀಡಿದೆ’ ಎಂದು ಬ್ಯಾನರ್‍ನಲ್ಲಿ ಬರೆಯಲಾಗಿದೆ.

ಮೈಸೂರು ಪಾಲಿಕೆಯ ಎಲ್ಲಾ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ವಿನೂತನ ಕಾರ್ಯಾಚರಣೆ ಆರಂಭಿಸಿದ್ದು, ಮನೆಯ ಗೇಟ್, ಅಂಗಡಿ, ವಾಣಿಜ್ಯ ಕಟ್ಟಡಗಳ ಮುಂದೆ ಮುದ್ರಿತ ನೋಟಿಸ್ ಬ್ಯಾನರ್‍ಗಳನ್ನು ಕಟ್ಟಿ ಫೋಟೋ ತೆಗೆದುಕೊಂಡು ಬರುತ್ತಿದ್ದಾರೆ.
ಇಂದು ವಲಯ ಕಚೇರಿ-1ರ ವಲಯಾ ಧಿಕಾರಿ ಬಸವರಾಜಪ್ಪ ಕಲೆಶೆಟ್ಟಿ, ಕಂದಾ ಯಾಧಿಕಾರಿ ಅರಸುಕುಮಾರಿ ನೇತೃತ್ವದಲ್ಲಿ ವಿವೇಕಾನಂದ ಸರ್ಕಲ್ ಸುತ್ತಮುತ್ತಲಿನ ಬಾರ್ ಅಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪ, ಕಮರ್ಷಿಯಲ್ ಕಾಂಪ್ಲೆಕ್ಸ್‍ಗಳಿಗೆ ನೋಟಿಸ್ ಬ್ಯಾನರ್ ಹಾಕಿ, 3 ದಿನದೊಳ ಗಾಗಿ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಸ ದಿದ್ದಲ್ಲಿ ಯುಜಿಡಿ ಸಂಪರ್ಕ ಕಡಿತ ಗೊಳಿಸಿ, ನಂತರ ಬಾಗಿಲು ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕೆಲವರು 10 ವರ್ಷ, 15 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ. ಆಸ್ತಿ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ವ್ಯಾಜ್ಯವಿರುವುದ ರಿಂದ ಕೆಲವರು ಆಸ್ತಿ ತೆರಿಗೆ ಪಾವತಿಸಿ ಲ್ಲದಿರುವುದು ಕಾರ್ಯಾಚರಣೆ ವೇಳೆ ತಿಳಿದು ಬಂದಿತು. ಇನ್ನು ಕೆಲವರು, ನಮಗೆ ರಿಯಾ ಯಿತಿ ಕೊಡಿ ಎಂದು ವಾದಿಸುತ್ತಿದ್ದರು. ಸರ್ಕಾರ ಆ ಬಗ್ಗೆ ತೀರ್ಮಾನಿಸಬೇಕು, ಹಣಕಾಸು ವರ್ಷದ ಆರಂಭದಲ್ಲಿ ನೀವು ಒತ್ತಾಯಿಸಬೇಕೇ ಹೊರತು, ಈಗ ತೆರಿಗೆ ಪಾವತಿಸಲೇಬೇಕು ಎಂದು ಅಧಿಕಾರಿಗಳು ಸ್ವತ್ತಿನ ಮಾಲೀಕರಿಗೆ ತಿಳಿಸುತ್ತಿದ್ದಾರೆ.

ತೆರಿಗೆ ಪಾವತಿಸುವ ಮೂಲಕ ಮೈಸೂರು ನಗರದಲ್ಲಿ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಲು ಆಸ್ತಿ ಮಾಲೀಕರು ಹಾಗೂ ನಾಗ ರಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು, ತಪ್ಪಿದಲ್ಲಿ ನಿಯಮಾನುಸಾರ ಕ್ರಮ ವಹಿಸುವುದು ಅನಿವಾರ್ಯವಾಗು ತ್ತದೆ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

Translate »