ಆಗಸ್ಟ್‍ನಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ
ಮೈಸೂರು

ಆಗಸ್ಟ್‍ನಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ

July 20, 2020

ಉಡುಪಿ, ಜು. 19- ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ಮುಹೂರ್ತ ನಿಗದಿಯಾಗಿದ್ದು ಅಂದೇ ನಿರ್ಮಾಣ ಕಾರ್ಯ ಸಹ ಆರಂಭಗೊಳ್ಳಲಿದೆ. ರಾಮ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟಿ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಉಡುಪಿ ಪೇಜಾ ವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ನಂತರ ಉಡುಪಿ ಯಲ್ಲಿ ಮಾಧ್ಯಮಗಳ ಜೊತೆ ಮಾತ ನಾಡಿದ ಅವರು, ಮಂದಿರ ನಿರ್ಮಾಣ ಮೊತ್ತದ ಕ್ರೋಢೀಕರಣದ ಬಗ್ಗೆ ಚರ್ಚೆಯಾಯಿತು. ಇನ್ನು ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಇದೇ ವೇಳೆ ಇನ್ನುಳಿದ 70 ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅವಶ್ಯಕತೆ ಇದೆ ಎಂದರು. ಎಲ್ ಅಂಡ್ ಟಿ ಕಂಪನಿಯ ಮೂಲಕ ಮಂದಿರದ ನಿರ್ಮಾಣ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಸಿಎಸ್‍ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡಲಾಗು ವುದು. ಪ್ರತೀ ವ್ಯಕ್ತಿಯ ಮೂಲಕ ಹತ್ತು ರೂಪಾಯಿ ಅಂತೆ ಒಂದು ಮನೆಯಿಂದ ನೂರು ರೂಪಾಯಿ ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ನವೆಂಬರ್ 25ರಿಂದ ಡಿಸೆಂಬರ್ 25ರವರೆಗೆ ವ್ಯಾಪಕ ಆಂದೋಲನ ನಡೆಯಲಿದೆ ಎಂದರು

Translate »