ಬಿಗ್‍ಬಾಸ್: ಸಲ್ಮಾನ್ ಖಾನ್ ಸಂಭಾವನೆ 250 ಕೋಟಿ ರೂ.!
ಮೈಸೂರು

ಬಿಗ್‍ಬಾಸ್: ಸಲ್ಮಾನ್ ಖಾನ್ ಸಂಭಾವನೆ 250 ಕೋಟಿ ರೂ.!

August 30, 2020

ಮುಂಬೈ, ಆ.29- ಕಳೆದ 10 ಸೀಸನ್‍ಗಳಿಂದಲೂ ಹಿಂದಿ ಬಿಗ್ ಬಾಸ್ ನಿರೂ ಪಣೆ ಮಾಡುತ್ತ ಬರುತ್ತಿರುವ ನಟ ಸಲ್ಮಾನ್ ಖಾನ್ ಈ ಬಾರಿಯೂ ಮುಂದುವರಿಯಲಿದ್ದಾರೆ.

ಕೆಲವೇ ದಿನಗಳ ಹಿಂದೆ ಪೆÇ್ರೀಮೋ ಚಿತ್ರೀಕರಣ ಮಾಡಲಾಗಿದೆ. ಈ ಬಾರಿ ಸಲ್ಲು ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನುತ್ತಿವೆ ಮೂಲಗಳು!

ಸಿನಿಮಾ ಮತ್ತು ಜಾಹೀರಾತುಗಳಿಗೆ ಬಹುಕೋಟಿ ರೂ. ಸಂಭಾವನೆ ಪಡೆಯುವ ಸಲ್ಮಾನ್ ಖಾನ್‍ಗೆ ಬಿಗ್ ಬಾಸ್ ಆಯೋಜಕರು ಈ ಬಾರಿ ದೊಡ್ಡ ಮೊತ್ತವನ್ನೇ ಸಂಭಾವನೆಯನ್ನಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಿ ಎಪಿಸೋಡ್‍ಗೆ 10.25 ಕೋಟಿ ರೂ. ಸಲ್ಮಾನ್‍ಗೆ ಸಿಗಲಿದೆ. ವಾರದಲ್ಲಿ ಎರಡು ಎಪಿಸೋಡ್ ಸೇರಿ 20.5 ಕೋಟಿ ರೂ. ಅವರ ಜೇಬು ಸೇರಲಿದೆ. ಅಂದಾಜು 12 ವಾರಗಳ ಕಾಲ ಈ ಶೋ ನಡೆಯಲಿದ್ದು, ಒಟ್ಟು 250 ಕೋಟಿ ರೂ. ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯಲಿದ್ದಾರೆ ಎನ್ನಲಾಗಿದೆ.

ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಬಿಗ್ ಬಾಸ್ ಹೊಸ ಸೀಸನ್‍ಗಳ ಹವಾ ಶುರು ಆಗುತ್ತಿದೆ. ತೆಲುಗಿನಲ್ಲಿ ಸೆ.6ರಿಂದ ಪ್ರಸಾರ ಆರಂಭ ಆಗಲಿದೆ. ಅದರ ಪೆÇ್ರೀಮೋಗಳು ಈಗಾಗಲೇ ಕ್ರೇಜ್ ಸೃಷ್ಟಿಸಿವೆ. ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ ನಿರೂಪಣೆ ಮಾಡಲಿದ್ದಾರೆ. ಕನ್ನಡದ ಬಿಗ್ ಬಾಸ್ ಕೂಡ ಸುದೀಪ್ ಅವರ ನಿರೂಪಣೆಯಲ್ಲಿ ಶುರು ಆಗಲಿದೆ. ಆದರೆ ದಿನಾಂಕ ಇನ್ನೂ ನಿಗದಿ ಆಗಿಲ್ಲ

Translate »