ಮೈಸೂರು, ಜು.5(ಪಿಎಂ)- ರಕ್ತದಾನ ಮಹಾದಾನ ಗೋಭಕ್ತ ಸಂಘದವರು ನಗರ ದಲ್ಲಿ ಭಾನುವಾರ ರಕ್ತದಾನ ಮೂಲಕ ಗುರು ಪೂರ್ಣಿಮೆ ಆಚರಿಸಿದರು.
ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಜೈನ ಧರ್ಮಗುರು ಶ್ರೀ ಪುರಂದಾಸ್ ಜೀ ಮಹಾ ರಾಜ್ ಮತ್ತು ಶ್ರೀ ರೋಹಿತದಾಸ್ ಜೀ ಮಹಾರಾಜ್ ಚಿತ್ರಪಟಗಳಿಗೆ ಪೂಜೆ ಸಲ್ಲಿಸಿ ಬಳಿಕ ಸಂಘದ 30ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು.
ಸಂಘದ ಅಧ್ಯಕ್ಷ ಪ್ರಕಾಶ್ ನಿಖಂ ಮಾತ ನಾಡಿ, ಗುರು ಪರಂಪರೆಗೆ ಹಿಂದಿನಿಂ ದಲೂ ವಿಶಿಷ್ಟ ಹಾಗೂ ಗೌರವಯುತ ಸ್ಥಾನ ವಿದೆ. ಗುರು ಸ್ಥಾನದಲ್ಲಿರುವವರು ಶಿಷ್ಯರಿಗೆ ಜ್ಞಾನಧಾರೆ ಎರೆದು ಗುರು ಪರಂಪರೆ ಉಳಿಸಿ ಬೆಳೆಸಬೇಕು. ಉನ್ನತ ವರ್ಗಕ್ಕೆ ಸೀಮಿತ ವಾಗಿದ್ದ ಗುರು-ಶಿಷ್ಯ ಪರಂಪರೆಯನ್ನು ಬುದ್ಧ, ಬಸವ, ಸರ್ವಜ್ಞ ಮೊದಲಾದವರು ತಳವರ್ಗಕ್ಕೂ ದಕ್ಕುವಂತೆ ಮಾಡಿ, ಕಾಯಕ-ಸಾಮರಸ್ಯ ಮಹತ್ವ ಸಾರಿದರು. ನಮ್ಮ ಸಂಘದಿಂದ ಪ್ರತಿವರ್ಷವೂ ರಕ್ತದಾನ ಮಾಡಿ ಗುರುಗಳನ್ನು ಸ್ಮರಿಸಲಾಗುತ್ತದೆ ಎಂದರು. ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಲಾಕ್ ಡೌನ್ ವೇಳೆ ರಕ್ತದಾನಿಗಳ ಸಂಖ್ಯೆ ತಗ್ಗಿದೆ. ಇಂಥ ಸಂದರ್ಭ ಯುವ ಸಮೂಹ ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘ ನೀಯ ಎಂದು ಹೇಳಿದರು.
ಡಾ.ಮಮತಾ, ಡಾ.ಕಿರಣ್, ಮುಖಂಡ ರಾದ ದೇವೇಂದ್ರ, ಪಹರಿಯಾ, ವಿಕಾಸ್ ರಾಥೋಡ್, ಪ್ರಕಾಶ್ ರಾಥೋಡ್, ದಾನಾರಾಮ್ ಪರಿಹಾರ್, ಗೂಡಾ ರಾಮ್, ಆನಂದ್ ಮಂದೋಟ್, ಚಿರಂ ಜೀಲಾಲ್ ಕುಮವತ್, ರಮೇಶ್ ಚೋಯಲ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು