ಬಹುಬಗೆ ಕ್ರೀಡಾ ಸಾಧಕ ಬೋಗಾದಿ ಮಂಜುನಾಥ್
ಮೈಸೂರು

ಬಹುಬಗೆ ಕ್ರೀಡಾ ಸಾಧಕ ಬೋಗಾದಿ ಮಂಜುನಾಥ್

June 2, 2020

ಮೈಸೂರು,ಜೂ.1(ವೈಡಿಎಸ್)- 2020ರ ಫೆ.15ರಿಂದ 18ರವ ರೆಗೆ ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ ಎಟಿಟಿಎಫ್ ಇಂಟರ್‍ನ್ಯಾಷನಲ್ ಪ್ಯಾರಾಗೇಮ್ಸ್‍ನ ಜಾವಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ಮೈಸೂರಿನ ವಿಕಲ ಚೇತನರೊಬ್ಬರು ಕ್ರಮ ವಾಗಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ.

ಮೈಸೂರಿನ ಬೋಗಾದಿ ನಿವಾಸಿ ಮಂಜುನಾಥ್, ಚಿಕ್ಕಂದಿನಲ್ಲೇ ಪೋಲಿಯೋದಿಂದ ಎಡಗಾಲು ಸ್ವಾಧೀನ ಕಳೆದುಕೊಂಡರೂ ಕೈಕಟ್ಟಿಕುಳಿತುಕೊಳ್ಳದೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದಾರೆ.

ಗಾರೆ ಕೆಲಸ, ಮನೆಗಳಿಗೆ ಪೇಪರ್ ಹಾಕುವುದು, ಬಟ್ಟೆ ಇಸ್ತ್ರಿ ಮಾಡುವುದು, ಗ್ಯಾಸ್ ಸಿಲಿಂಡರ್ ಡೆಲಿವರಿ ಕೆಲಸಗಳನ್ನೂ ಮಾಡಿ ದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಅಂಗವಿಕಲರ ಕ್ರೀಡಾ ಕೂಟದ ಬಗ್ಗೆ ತಿಳಿದ ನಂತರ ಮಂಜುನಾಥ್ ಬದುಕೇ ಬದ ಲಾಯಿತು. ಗೆಳೆಯ ರಾಮಚಂದ್ರ ಕ್ರೀಡಾ ತರಬೇತಿ ನೀಡಿ ಮಂಜುನಾಥ್ ಅವರಿಗೆ ನೆರವಾದರು.

1993ರಲ್ಲಿ ಮುಂಬೈನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಮೊದಲ ಬಾರಿಗೆ ಕ್ರೀಡಾಕ್ಷೇತ್ರಕ್ಕೆ ಪಾದಾ ರ್ಪಣೆ ಮಾಡಿದ ಮಂಜುನಾಥ್, ನಂತರ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರಿಕೆಟ್, ಗುಂಡು ಎಸೆತ, ಡಿಸ್ಕಸ್ ಥ್ರೋ, ಈಜು, ಭಾರ ಎತ್ತುವ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಬಹುಮಾನ: 2011ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಅಂಗವಿಕಲರ ಕ್ರೀಡಾಕೂಟದ ಗುಂಡು ಎಸೆತದಲ್ಲಿ ಚಿನ್ನ, ಜಾವಲಿನ್ ಥ್ರೋನಲ್ಲಿ ಬೆಳ್ಳಿ, ಅದೇ ವರ್ಷ ಅಹಮದಾಬಾದ್‍ನಲ್ಲಿ ನಡೆದ ಕ್ರೀಡಾಕೂಟದ ಜಾವಲಿನ್ ಥ್ರೋ ಮತ್ತು ಗುಂಡು ಎಸೆತ ದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ, 2013ರಲ್ಲಿ ಉತ್ತರಪ್ರದೇಶ ದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ ಗುಂಡು ಎಸೆತದಲ್ಲಿ ಪ್ರಥಮ, ಜಾವಲಿನ್ ಥ್ರೋನಲ್ಲಿ ದ್ವಿತೀಯ, 2015ರಲ್ಲಿ ಮಹಾ ರಾಷ್ಟ್ರದಲ್ಲಿ ನಡೆದ ಹಿರಿಯರ ಮತ್ತು ಕಿರಿಯರ ಅಂಗವಿಕಲರ ಕ್ರೀಡಾ ಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ತೃತೀಯ, 2016ರಲ್ಲಿ ಮೈಸೂರಲ್ಲಿ ನಡೆದ ರಾಷ್ಟ್ರಮಟ್ಟದ ಅಂಗವಿಕಲರ ಕ್ರೀಡಾಕೂಟದ ಗುಂಡು ಎಸೆತ ಮತ್ತು ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ತೃತೀಯ, ಮಲೇಷಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ

Translate »