ಬೆಂಗಳೂರು ಆರು ಖಾಸಗಿ ಶಾಲೆಗಳಿಗೆ ‘ಬಾಂಬ್’ ಬೆದರಿಕೆ
ಮೈಸೂರು

ಬೆಂಗಳೂರು ಆರು ಖಾಸಗಿ ಶಾಲೆಗಳಿಗೆ ‘ಬಾಂಬ್’ ಬೆದರಿಕೆ

April 9, 2022

ಪೊಲೀಸರು, ಬಾಂಬ್ ನಿಷ್ಕಿçಯ ದಳ ಪರಿಶೀಲನೆ: ಹುಸಿ ಕರೆ ಎಂಬುದು ದೃಢ

ಬೆಂಗಳೂರು, ಏ.೮ (ಕೆಎಂಶಿ)- ಬೆಂಗಳೂರು ನಗರ ಹಾಗೂ ಹೊರ ವಲಯದ ೬ ಖಾಸಗಿ ಶಾಲೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಏಕಕಾಲದಲ್ಲಿ ಇ-ಮೇಲ್ ಮುಖಾಂತರ ಬೆದರಿಕೆ ಕರೆ ಬಂದಿತ್ತು. ಈ ಮಾಹಿತಿ ಬೆನ್ನಲ್ಲೇ ಸ್ಥಳೀಯ ಪೊಲೀಸರು ಹಾಗೂ ಬಾಂಬ್ ನಿಷ್ಕಿçಯ ದಳದ ಸಿಬ್ಬಂದಿ ಇಂಚಿAಚೂ ಸ್ಥಳ ಪರಿಶೀಲಿಸಿದರು. ಎಲ್ಲಿಯೂ ಯಾವುದೇ ರೀತಿಯ ಆತಂಕಕಾರಿ ವಸ್ತುಗಳು ಪತ್ತೆ ಯಾಗದ ಕಾರಣ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿದೆ.

ಬಾಂಬ್ ಇಟ್ಟಿರುವ ಬಗ್ಗೆ ಆಯಾ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿದ ಹಿನ್ನೆಲೆ ಯಲ್ಲಿ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗಳತ್ತ ಗಾಬರಿಗೊಂಡು ಧಾವಿಸಿ ದ್ದರು. ಮಕ್ಕಳನ್ನು ತುರ್ತಾಗಿ ಕರೆದುಕೊಂಡು ಹೋಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಪೋಷಕರು ಶಾಲೆಗಳಿಗೆ ದೌಡಾಯಿಸಿ ಮಕ್ಕಳನ್ನು ಕರೆದುಕೊಂಡು ಹೋದರು. ಶಾಲೆಗೆ ಸೈಕಲ್‌ನಲ್ಲಿ ಬರುವ ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಹೋಗುವಂತೆ ಸೂಚಿಸಲಾಗಿತ್ತು. ಇಮೇಲ್‌ನಲ್ಲಿ ಏನಿತ್ತು: ಶಾಲೆಗಳಲ್ಲಿ ಶಕ್ತಿಯುತ ಬಾಂಬ್ ಇಡಲಾಗಿದೆ. ತಮಾಷೆ ಮಾಡುತ್ತಿಲ್ಲ. ಪವರ್‌ಫುಲ್ ಬಾಂಬ್ ಇಡಲಾಗಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ. ನೂರಾರು ಮಕ್ಕಳನ್ನು ಕಾಪಾಡಿ, ಎಲ್ಲವೂ ನಿಮ್ಮ ಕೈಯ್ಯಲ್ಲಿದೆ ಎಂದು ದುಷ್ಕರ್ಮಿಗಳು ಆಯಾ ಶಾಲಾ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದರು.
ಯಾವ್ಯಾವ ಶಾಲೆಗಳಿಗೆ ಬೆದರಿಕೆ: ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ವರ್ತೂರಿನ ಡೆಲ್ಲಿ ಪಬ್ಲಿಕ್ ಶಾಲೆ, ಮಾರತಹಳ್ಳಿಯ ನ್ಯೂ ಅಕಾಡೆಮಿ ಶಾಲೆ, ಹೆಣ್ಣೂರಿನ ಸೆಂಟ್ ವಿನ್ಸೆಂಟ್ ಸ್ಕೂಲ್, ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ಹೆಬ್ಬಗೋಡಿ ಎಬಿನೈಜರ್ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.

ಹುಸಿ ಬಾಂಬ್ ಕರೆ ಸಾಬೀತು: ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಬಾಂಬ್ ನಿಷ್ಕಿçಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಿದರು. ಶಾಲೆಯ ಪ್ರತಿ ಇಂಚಿAಚೂ ಜಾಲಾಡಿದರು. ಅನುಮಾನಾಸ್ಪದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿಕೊಂಡು ವಾಪಸ್ ತೆರಳಿದರು.

ಹುಸಿ ಬಾಂಬ್ ಬೆದರಿಕೆ: ಹಿನ್ನೆಲೆಯಲ್ಲಿ ಪೊಲೀಸರಿಗೆ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಕೇವಲ ಬೆದರಿಸುವ ತಂತ್ರ ರೂಪಿಸಿಕೊಂಡಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದ ಇ-ಮೇಲ್ ಐಡಿ, ಇತರ ಮಾಹಿತಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »