ಜು.೨೮ಕ್ಕೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಕೆ ಸಿದ್ದರಾಮೋತ್ಸವಕ್ಕೂ ಮುನ್ನವೇ ಬೊಮ್ಮಾಯಿ ಉತ್ಸವ!
ಮೈಸೂರು

ಜು.೨೮ಕ್ಕೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಕೆ ಸಿದ್ದರಾಮೋತ್ಸವಕ್ಕೂ ಮುನ್ನವೇ ಬೊಮ್ಮಾಯಿ ಉತ್ಸವ!

July 17, 2022

ಸಾಧನೆ, ಸರ್ಕಾರದ ಯೋಜನೆಗಳ ಜನರಿಗೆ ತಲುಪಿಸಲು ದೊಡ್ಡ
ಬಳ್ಳಾಪುರದಲ್ಲಿ ‘ಸಾರ್ಥಕತೆ ಉತ್ಸವ’

ವರಿಷ್ಠ ನಾಯಕರೊಬ್ಬರು ಭಾಗಿ

ಬೆಂಗಳೂರು, ಜು.೧೬(ಕೆಎಂಶಿ)- ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ಸವಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ನಡೆಯಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇದೇ ೨೮ಕ್ಕೆ ಒಂದು ವರ್ಷವನ್ನು ಬಸವರಾಜ ಬೊಮ್ಮಾಯಿ ಪೂರ್ಣಗೊಳಿಸುತ್ತಿದ್ದಾರೆ.

ಇದರ ಅಂಗವಾಗಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ಸಾಧನೆ ಬಿಂಬಿ ಸುವ ಸಲುವಾಗಿ ಜು.೨೮ರಂದು ದೊಡ್ಡಬಳ್ಳಾ ಪುರದಲ್ಲಿ ಒಂದು ವರ್ಷದ ಸಾರ್ಥಕತೆಯ ಉತ್ಸವ ನಡೆಯಲಿದೆ. ಈ ಸಮಾವೇಶ ನಡೆಸು ವಂತೆ ಬಿಜೆಪಿ ನಾಯಕರು ಸಿಎಂಗೆ ಸೂಚಿಸಿ ದ್ದಾರೆ. ಕಳೆದ ಎರಡು ದಿನ ಗಳಿಂದ ನಡೆದ ಪಕ್ಷದ ಚಿಂತಕರ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಅವರ ಆಣತಿಯಂತೆ ಸಮಾ ವೇಶ ನಡೆಯುತ್ತಿದೆ. ಸಮಾವೇಶದ ಪೂರ್ಣ ಹೊಣೆಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ವಹಿಸಿದ್ದು, ಕಳೆದ ಒಂದು ವರ್ಷದ ಸರ್ಕಾರದ ಸಾಧನೆ ಜತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಬಿಂಬಿಸುವುದೇ ಈ ಉತ್ಸವದ ಮೂಲ ಉದ್ದೇಶ. ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಉತ್ಸವಕ್ಕಿಂತ ಈ ಸಮಾವೇಶ ಭಿನ್ನವಾಗಿರಬೇಕು. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವAತಿರಬೇಕೆAದು ರಾಜ್ಯ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು ಸೂಚಿಸಿದ್ದಾರೆ. ಈ ಸಮಾವೇಶ ಮುಂಬರುವ ವಿಧಾನಸಭಾ ಚುನಾವಣೆಗೆ ಮೈಲಿಗಲ್ಲು ಆಗಬೇಕು. ಆ ಭಾಗಕ್ಕೆ ಸೇರಿದ ಮೂರು ನಾಲ್ಕು ಜಿಲ್ಲೆಗಳ ಕಾರ್ಯ ಕರ್ತರಲ್ಲದೆ, ದೊಡ್ಡ ಪ್ರಮಾಣದಲ್ಲಿ ಸಾರ್ವ ಜನಿಕರನ್ನು ಸೇರಿಸುವಂತೆ ಸೂಚಿಸಲಾಗಿದೆ. ಸಮಾವೇಶದಲ್ಲಿ ದೆಹಲಿಯ ಒಬ್ಬ ನಾಯಕರು ಭಾಗವಹಿಸುವಂತೆ ಹೇಳುತ್ತೇವೆ. ನೀವು ಸಮಾ ವೇಶವನ್ನು ಯಶಸ್ವಿಗೊಳಿಸಿ ಎಂದು ಕಿವಿಮಾತು ಹೇಳಿದ್ದಾರೆ. ಈ ಸಂಬAಧ ಸುದ್ದಿಗಾರರೊಂದಿಗೆ ಮಾತ ನಾಡಿದ ಬೊಮ್ಮಾಯಿ ಅವರು, ದೊಡ್ಡ ಬಳ್ಳಾಪುರದಲ್ಲಿ ಇದೇ ೨೮ರಂದು ನಡೆಯುತ್ತಿರುವ ಸಮಾವೇಶ, ಸರ್ಕಾರದ ಕಾರ್ಯಕ್ರಮಗಳನ್ನು ಬಿಂಬಿಸುವ ಸಮಾವೇಶವಾಗಿರುತ್ತದೆ ಎಂದರು.

Translate »