ಮೈಸೂರಲ್ಲೂ ಬೂಸ್ಟರ್ ಡೋಸ್ ಮೊದಲ ದಿನ ೨೮,೦೦೦ ಮಂದಿಗೆ ಲಸಿಕೆ
ಮೈಸೂರು

ಮೈಸೂರಲ್ಲೂ ಬೂಸ್ಟರ್ ಡೋಸ್ ಮೊದಲ ದಿನ ೨೮,೦೦೦ ಮಂದಿಗೆ ಲಸಿಕೆ

July 17, 2022

ಮೈಸೂರು, ಜು.೧೬(ಆರ್‌ಕೆ)-ರಾಜ್ಯದಾ ದ್ಯಂತ ೧೮ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಅಭಿಯಾನ ಇಂದಿ ನಿಂದ ಆರಂಭವಾಗಿದ್ದು, ಮೊದಲ ದಿನ ಮೈಸೂರು ಜಿಲ್ಲೆಯಲ್ಲಿ ಒಟ್ಟು ೨೮,೦೦೦ ಮಂದಿಗೆ ಲಸಿಕೆ ನೀಡಲಾಯಿತು ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಬೆಂಗ ಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ದೊರೆ ಯುತ್ತಿದ್ದಂತೆಯೇ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾ
ಆಸ್ಪತ್ರೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ಅರ್ಹರಿಗೆ ಬೂಸ್ಟರ್ ಡೋಸ್ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಏಕ ಕಾಲದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಲಸಿಕಾ ಕಾರ್ಯಕ್ರಮ ಆರಂಭಿಸಲಾಯಿತು ಎಂದು ಅವರು ತಿಳಿಸಿದರು. ೬೦ ವರ್ಷ ಮೇಲ್ಪಟ್ಟ ಸಾರ್ವಜನಿಕರು, ಫ್ರಂಟ್‌ಲೈನ್ ವರ್ಕರ್‌ಗಳು ಹಾಗೂ ೧೮ ರಿಂದ ೫೯ ವರ್ಷ ವಯಸ್ಸಿನವರೂ ಸೇರಿದಂತೆ ಒಟ್ಟು ೨೮,೦೦೦ ಮಂದಿಗೆ ಇಂದು ಸಂಜೆವರೆಗೆ ಲಸಿಕೆ ನೀಡಲಾಯಿತು. ಸೋಮವಾರ ಮೈಸೂರಿನ ದಾಸಪ್ಪ ಸರ್ಕಲ್‌ನಲ್ಲಿರುವ ವಾರ್ತಾ ಭವನದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಏರ್ಪಡಿಸಿದೆ ಎಂದು ಡಾ. ಪ್ರಸಾದ್ ತಿಳಿಸಿದ್ದಾರೆ.

Translate »