ಮುಕ್ತ ವಿವಿಯ ೨೨ ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ನೀಡುವುದಕ್ಕೆ ಬ್ರೇಕ್
ಮೈಸೂರು

ಮುಕ್ತ ವಿವಿಯ ೨೨ ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ನೀಡುವುದಕ್ಕೆ ಬ್ರೇಕ್

October 2, 2021

ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಯಥಾಸ್ಥಿತಿಗೆ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರನಾಯಕ ನಿರ್ದೇಶನ

ಮೈಸೂರು, ಅ.೧- ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ೨೨ ಖಾಯಂ ಸಿಬ್ಬಂದಿಗೆ ಯುಜಿಸಿ ವೇತನ ನೀಡುವುದು ನ್ಯಾಯಾಂಗ ನಿಂದನೆ ಯಾಗುವ ಕಾರಣ ಯಥಾಸ್ಥಿತಿ ಕಾಪಾಡು ವಂತೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಕುಮಾರನಾಯಕ್ ಅವರು ಮುಕ್ತ ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ ಅವರಿಗೆ ಪತ್ರ ಬರೆದು, ನಿರ್ದೇಶನ ನೀಡಿದ್ದಾರೆ.

ಆ.೧೭ ರಂದು ನಡೆದ ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ವಿಶೇಷ ಸಭೆಯಲ್ಲಿ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ಮುಚ್ಚಳಿಕೆ ಬರೆಸಿಕೊಂಡು ೨೨ ಖಾಯಂ ಸಿಬ್ಬಂದಿಗೆ ಯುಜಿಸಿ ವೇತನ ವಿಸ್ತರಿಸಲು ತೀರ್ಮಾನಿಸಲಾಗಿತ್ತು ಎಂಬು ದರ ಹಿನ್ನೆಲೆಯಲ್ಲಿ ಕುಮಾರನಾಯಕ್ ಅವರು ಸೆ.೯ರಂದು ಈ ಪತ್ರವನ್ನು ಮುಕ್ತ ವಿವಿ ಕುಲಸಚಿವರಿಗೆ ಬರೆದಿದ್ದಾರೆ ಎನ್ನಲಾಗಿದೆ.
೨೦೧೭ರ ನವೆಂಬರ್ ೮ ರಂದು ಖಾಯಂಗೊAಡಿರುವ ೨೨ ಸಿಬ್ಬಂದಿ ಯುಜಿಸಿ ವೇತನ ಪಡೆಯಲು ಅರ್ಹ ರಿರುವುದಿಲ್ಲ. ಆದರೂ ಅವರಿಗೆ ಯುಜಿಸಿ ವೇತನ ವಿಸ್ತರಿಸಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು ೪.೬೯ ಕೋಟಿ ರೂ. ನಷ್ಟವಾಗುತ್ತದೆ ಎಂದು ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಹಿರಿಯ ಅಧಿಕಾರಿಗಳು ಆಡಿಟ್ ವರದಿಯಲ್ಲಿ ಆಕ್ಷೇಪಿಸಿರುವುದರಿಂದ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಅವರು ತಿಳಿಸಿದ್ದಾರೆ.

ಮುಕ್ತ ವಿವಿಯಲ್ಲಿ ತಾತ್ಕಾಲಿಕ ಬೋಧಕ ಸಿಬ್ಬಂದಿಯನ್ನು ಖಾಯಂಗೊಳಿಸಿ ಯುಜಿಸಿ ವೇತನ ನೀಡುವ ಸಂಬAಧ ಹೈಕೋರ್ಟ್ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ಆಧಾರದಲ್ಲಿ ಜಾರಿಯಲ್ಲಿರುವ ತಡೆಯಾಜ್ಞೆ ತೆರವುಗೊಳಿಸದಿರಲು ಇರುವ ಕಾರಣಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರವು ೨೦೨೧ರ ಮಾರ್ಚ್ ೨೨ ಮತ್ತು ಜುಲೈ ೩ ರಂದು ರವಾನಿಸಿದ್ದ ಪತ್ರಗಳಿಗೆ ಸಂಬAಧಿಸಿದAತೆ ಮುಕ್ತ ವಿವಿಗಳಿಂದ ಈವರೆಗೆ ಯಾವುದೇ ಉತ್ತರ ಬಾರದಿರುವ ಬಗ್ಗೆ ಕುಮಾರನಾಯಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಥಾಸ್ಥಿತಿ ಕಾಪಾಡು ವಂತೆ ಈಗಾಗಲೇ ಹೈಕೋರ್ಟ್ ನಿರ್ದೇ ಶನ ನೀಡಿದ್ದು, ಇಂತಹ ಸಂದರ್ಭದಲ್ಲಿ ಈ ಸಿಬ್ಬಂದಿಗೆ ಯುಜಿಸಿ ವೇತನ ಸೌಲಭ್ಯ ನೀಡುವ ತೀರ್ಮಾನ ತೆಗೆದುಕೊಂಡಲ್ಲಿ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದನ್ನು ಕೂಡ ಕುಮಾರನಾಯಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

Translate »