ಬ್ರಿಟನ್ ರಾಣಿ 2ನೇ ಎಲಿಜಬೆತ್ ಇನ್ನಿಲ್ಲ
News

ಬ್ರಿಟನ್ ರಾಣಿ 2ನೇ ಎಲಿಜಬೆತ್ ಇನ್ನಿಲ್ಲ

September 9, 2022

ಲಂಡನ್: ಬ್ರಿಟನ್‍ನ ರಾಣಿ 2ನೇ ಎಲಿಜಬೆತ್ (96) ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್ ಇತಿಹಾಸ ದಲ್ಲಿಯೇ 70 ವರ್ಷಗಳ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಇವರದು. ಬಂಕಿಂಗ್‍ಹ್ಯಾಮ್ ಅರಮನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ರಾಣಿಯ ಗೌರವಾರ್ಥ ಬ್ರಿಟನ್‍ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಲಾಗಿದೆ. ರಾಣಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ದೀರ್ಘಾ ವಧಿಯ ಬದುಕು ಮತ್ತು ಆಡಳಿತ ಕುರಿತು ಸಂತಾಪದ ಮಾತುಗಳು ಹೊರ ಬರುತ್ತಿವೆ. ರಾಣಿಯ ಪಾರ್ಥಿವ ಶರೀರವನ್ನು ಬಾಲ್‍ಮೊರಲ್ ಎಸ್ಟೇಟ್‍ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‍ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆ ತಿಳಿಸಿದೆ. ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್‍ನ ರಾಜಕುಮಾರ, 73 ವರ್ಷದ ಚಾಲ್ರ್ಸ್ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಪ್ರಕಟಿಸಲಾಗಿದೆ. ಗುರುವಾರ ಸಂಜೆ ರಾಣಿಯ
ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರು. ರಾಣಿಯ ಮಕ್ಕಳಾದ ಚಾಲ್ರ್ಸ್, ರಾಜಕುಮಾರಿ 72 ವರ್ಷದ ಆ್ಯನೆ, ರಾಜಕುಮಾರರಾದ 62 ವರ್ಷದ ಆಂಡ್ರ್ಯೂ ಮತ್ತು 58 ವರ್ಷದ ಎಡ್ವರ್ಡ್ ಅವರು ಬಾಲ್‍ಮೊರಲ್‍ನಲ್ಲಿರುವ ರಾಣಿಯ ಎಸ್ಟೇಟ್‍ಗೆ ಧಾವಿಸಿದರು. ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‍ನ 15ನೇ ಪ್ರಧಾನಿಯಾಗಿ ಲಿಜ್ ಟ್ರಸ್ ಅವರನ್ನು ನೇಮಕ ಮಾಡಿದ್ದರು. 2ನೇ ಎಲಿಜಬೆತ್ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸಂತಾಪ ಸೂಚಿಸಿದ್ದು, ಅವರು ಧೀಮಂತ ಮಹಿಳೆ. ಬ್ರಿಟನ್ ಜನತೆಗೆ ಸ್ಫೂರ್ತಿದಾಯಕ ನಾಯಕತ್ವ ಕಲ್ಪಿಸಿದ್ದರು ಎಂದು ಬಣ್ಣಿಸಿದ್ದಾರೆ.

Translate »