ಇಂದಿನಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ
ಮೈಸೂರು

ಇಂದಿನಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ

October 2, 2018

ಮೈಸೂರು: ಮೈಸೂರು ರಂಗಾಯಣದ ವತಿಯಿಂದ ಅ.2ರಿಂದ 18 ರವರೆಗೆ ವನರಂಗದಲ್ಲಿ ಬಿ.ವಿ. ಕಾರಂತ ಕಾಲೇಜು ರಂಗೋತ್ಸವ ಏರ್ಪಡಿಸಲಾಗಿದೆ. ವನರಂಗದಲ್ಲಿ ನಾಳೆ ಸಂಜೆ 6 ಗಂಟೆಗೆ ಕವಯತ್ರಿ ಶ್ರೀಮತಿ ಪ್ರತಿಭಾ ನಂದ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅಧ್ಯಕ್ಷತೆ ವಹಿಸು ವರು.

ಅ.2ರಿಂದ 18ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ವನರಂಗದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಅಕ್ಟೋಬರ್ 2 : ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ರೂಪಾಂತರ ನಾಟಕ ಪ್ರದರ್ಶನ. ರಚನೆ : ಜಯಪ್ರಕಾಶ ಮಾವಿನಕುಳಿ, ನಿರ್ದೇಶನ: ರಿಯಾಜ್ ಸಿಹಿಮೊಗೆ
ಅಕ್ಟೋಬರ್ 3: ಮಹಾಜನ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಬಹುಮುಖಿ ನಾಟಕ ಪ್ರದರ್ಶನ. ರಚನೆ : ವಿವೇಕ ಶಾನಬಾಗ್, ನಿರ್ದೇಶನ : ವಿನೋದರಂಗ.
ಅಕ್ಟೋಬರ್ 4: ಶ್ರೀ ಹೊಸಮಠದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಜೋಗತಿ ಕಲ್ಲು ನಾಟಕ ಪ್ರದರ್ಶನ. ರಚನೆ: ಎಸ್.ಎಸ್. ಹಿರೇಮಠ, ನಿರ್ದೇಶನ : ನೂರ್ ಅಹ್ಮದ್ ಶೇಖ್.
ಅಕ್ಟೋಬರ್ 5: ಹುಣಸೂರು ತಾಲೂಕು ಗಾವಡಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಮೇಘ ಮರೆಯ ಚಂದಿರ ನಾಟಕ ಪ್ರದರ್ಶನ. ರಚನೆ: ಬಸವರಾಜ ಹಿರೇಮಠ. ನಿರ್ದೇಶನ : ಶ್ರೀಕಾಂತ ಪಿ. ನವಲಗಿರಿ.
ಅಕ್ಟೋಬರ್ 6: ಕೆಆರ್‍ಎಸ್ ರಸ್ತೆಯಲ್ಲಿರುವ ಜಿಎಸ್‍ಎಸ್‍ಎಸ್ ಕಾಲೇಜು ವಿದ್ಯಾರ್ಥಿಗಳಿಂದ ಮಾರಿಕಾಡು ನಾಟಕ ಪ್ರದರ್ಶನ. ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಕು.ಪಿ.ಚಾಂದಿನಿ.
ಅಕ್ಟೋಬರ್ 7: ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾಸಭಾ ವಿದ್ಯಾರ್ಥಿ ಗಳಿಂದ ಮಲ್ಲಮ್ಮನ ಮನೆ ಹೋಟ್ಲು ನಾಟಕ ಪ್ರದರ್ಶನ. ರಚನೆ : ಹೆಚ್.ಎಸ್. ಶಿವಪ್ರಕಾಶ್, ನಿರ್ದೇಶನ : ವಿ. ರಂಗನಾಥ್.
ಅಕ್ಟೋಬರ್ 8 : ನರಸೀಪುರದ ಬಿಹೆಚ್‍ಎಸ್ ಹೈಯರ್ ಎಜುಕೇಷನ್ ಸೊಸೈಟಿ ವಿದ್ಯಾರ್ಥಿಗಳಿಂದ ಜೋಕುಮಾರಸ್ವಾಮಿ ನಾಟಕ ಪ್ರದರ್ಶನ. ರಚನೆ : ಚಂದ್ರಶೇಖರ ಕಂಬಾರ, ನಿರ್ದೇಶನ : ಕಾರ್ತಿಕ್ ಉಪಮನ್ಯು.
ಅಕ್ಟೋಬರ್ 11: ಮೈಸೂರಿನ ಅಮೃತ ವಿದ್ಯಾಪೀಠಂ ವಿದ್ಯಾರ್ಥಿಗಳಿಂದ ಇದಿತಾಯಿ ನಾಟಕ ಪ್ರದರ್ಶನ. ರಚನೆ: ಮಂಜುನಾಥ ಬೆಳಕೆರೆ, ನಿರ್ದೇಶನ : ಎಸ್. ಕಾರ್ತಿಕ್.
ಅಕ್ಟೋಬರ್ 12: ಎನ್‍ಐಇ ಕಾಲೇಜು ವಿದ್ಯಾರ್ಥಿಗಳಿಂದ ಮಲಾಲ ಅಲ್ಲಾ ನಾಟಕ ಪ್ರದರ್ಶನ. ರಚನೆ : ಬೊಳುವಾರು ಮಹಮದ್ ಕುಂಞ, ನಿರ್ದೇಶನ : ಮೈಮ್ ರಮೇಶ್.
ಅಕ್ಟೋಬರ್ 13: ಮಹಾರಾಜ ಕಾಲೇಜು ವಿದ್ಯಾರ್ಥಿಗಳಿಂದ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ. ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಅಮಿತ್ ಜೆ. ರೆಡ್ಡಿ.
ಅಕ್ಟೋಬರ್ 15: ಮೈಸೂರಿನ ಬದರಿ ಪ್ರಸಾದ್‍ಜಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸೋರುತಿಹುದು ಸಂಬಂಧ ನಾಟಕ ಪ್ರದರ್ಶನ. ರಚನೆ : ಮಹಾಂತೇಶ್ ರಾಮದುರ್ಗ, ನಿರ್ದೇಶನ : ಪ್ರವೀಣ್ ಬೆಳ್ಳಿ.
ಅಕ್ಟೋಬರ್ 17: ಜೆಎಸ್‍ಎಸ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಇಲಿ ಮಡಕೆ ನಾಟಕ ಪ್ರದರ್ಶನ. ರಚನೆ: ಟಿ.ಕೆ.ದಯಾನಂದ್, ನಿರ್ದೇಶನ: ಜೀವನ್‍ಕುಮಾರ್ ಬಿ.ಹೆಗ್ಗೋಡು.

Translate »