ಎಸ್.ಎಲ್.ಭೈರಪ್ಪ ಅವರ ‘ಪರ್ವ’ ರಂಗ ಪ್ರದರ್ಶನ
ಮೈಸೂರು

ಎಸ್.ಎಲ್.ಭೈರಪ್ಪ ಅವರ ‘ಪರ್ವ’ ರಂಗ ಪ್ರದರ್ಶನ

February 28, 2021

ಮೈಸೂರು, ಫೆ.27- ರಂಗಾಯಣ ಮೈಸೂರಿನ ಮಹತ್ವಾಕಾಂಕ್ಷೆಯ ರಂಗಭೂಮಿ ಯೋಜನೆಯಾದ ಪದ್ಮಶ್ರೀ ಡಾ. ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ, ಮಹಾನ್ ಕಾದಂಬರಿ ‘ಪರ್ವ’ದ ರಂಗರೂಪ ಮತ್ತು ಪ್ರದ ರ್ಶನ ಮಾರ್ಚ್ 12, 13 ಮತ್ತು 14ರಂದು ಬೆಳಗ್ಗೆ 10 ಗಂಟೆಗೆ ಕಲಾಮಂದಿರದಲ್ಲಿ ಆಯೋಜಿಸ ಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದ್ದಾರೆ.

ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಈ ನಾಟಕ ನಿರ್ದೇಶಿಸಿದ್ದಾರೆ. ಒಟ್ಟು ಆಸನಗಳಲ್ಲಿ 130 ಆಸನಗಳನ್ನು 1000 ರೂ. ನಂತೆ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಾಯೋಜನೆ ಮಾಡಿದೆ. ಉಳಿದ ಆಸನಗಳನ್ನು 500 ರೂ. ಹಾಗೂ 250 ಟಿಕೆಟ್ ದರದಲ್ಲಿ ಸಾರ್ವಜನಿಕರಿಗೆ ಮುಂಗಡವಾಗಿ ಕಾಯ್ದಿರಿಸುವ ಪ್ರಕ್ರಿಯೆ ನಡೆದಿದೆ. ಮಾರ್ಚ್25ರಿಂದ ರಂಗಾಯಣದ ಭೂಮಿಗೀತ ರಂಗಮಂದಿರ ದಲ್ಲಿ ಎಂದಿನಂತೆ ಪರ್ವ ಪ್ರದರ್ಶನ ನಡೆಯಲಿದೆ. ಮಾರ್ಚ್ 23, 26, 27ರಂದು ಈ 3 ದಿನಗಳಂದು ಸಂಚಿಕೆಯಾಗಿ ನಾಟಕ ಪ್ರದರ್ಶನ ನಡೆಯಲಿದೆ. ಈ ಸಂಚಿಕೆಗಳು ತಲಾ 2 ಗಂಟೆ 30 ನಿಮಿಷಗಳಾದ್ದಾಗಿದ್ದು, ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಮಾ.28ರಂದು ಬೆಳಗ್ಗೆ 10 ಗಂಟೆಯಿಂದ ಪೂರ್ಣ ನಾಟಕ ಪ್ರದರ್ಶನವಿದ್ದು, ಪ್ರತಿವಾರವೂ ಪ್ರದರ್ಶನ ನಡೆಯಲಿದೆ. ಪ್ರತಿದಿನದ ಸಂಚಿಕೆ ಪ್ರದರ್ಶನಕ್ಕೆ 100 ರೂ. ಇದ್ದರೆ ಭಾನುವಾರದ ಪೂರ್ಣ ನಾಟಕಕ್ಕೆ 250 ರೂ.ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಪ್ರದರ್ಶನಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು, ಏ.25ರವರೆಗೆ ಭೂಮಿಗೀತದಲ್ಲಿ ಪ್ರದರ್ಶನಗಳು ನಡೆಯಲಿವೆ.

Translate »