ಸಂಪುಟ ಭವಿಷ್ಯ ಹೈಕಮಾಂಡ್ ನಿರ್ಧಾರ
ಮೈಸೂರು

ಸಂಪುಟ ಭವಿಷ್ಯ ಹೈಕಮಾಂಡ್ ನಿರ್ಧಾರ

May 5, 2022

ಬೆಂಗಳೂರು, ಮೇ ೪-ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದು, ಹೋಗಿ ಆಗಿದೆ. ಈಗ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದ್ದು, ನಾಯಕತ್ವ ಬದಲಾವಣೆ ಮಾಡುತ್ತಾ ರೆಯೇ, ಸಂಪುಟ ಪುರ‍್ರಚನೆಯೇ, ಸಂಪುಟ ವಿಸ್ತರಣೆಯೇ ಎಂಬ ಚರ್ಚೆ ಈಗ ಆರಂಭವಾಗಿದೆ.

ಇಂದು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ವಿಸ್ತ ರಣೆ ಅಥವಾ ಪುರ‍್ರಚನೆ ವಿಚಾರ ವನ್ನು ಅಮಿತ್ ಶಾ ದೆಹಲಿಗೆ ಹೋದ ಬಳಿಕ ಮಾತನಾಡುತ್ತೇವೆ ಎಂದಿದ್ದಾರೆ. ಅಮಿತ್ ಶಾ ನಿರ್ಧಾರ ಹೊರಬಂದ ನಂತರ ಎಲ್ಲವೂ ತೀರ್ಮಾನವಾಗಲಿದೆ. ಮುಂದಿನ ವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಪ್ರತ್ಯೇಕ ಸಭೆಯಿದೆ. ವಿವಿಧ ಇಲಾಖೆಗಳ ಅಭಿವೃದ್ಧಿ, ಅನುಷ್ಠಾನದ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಏನೇ ಬದಲಾವಣೆ ಮಾಡುವುದಿದ್ದರೂ ಹೈಕ ಮಾಂಡ್ ಅಳೆದು ತೂಗಿ ಮಾಡಲಿದೆ. ಅಸಮಾಧಾನ ಸ್ಫೋಟ ವಾಗದಂತೆ ನೋಡಿಕೊಳ್ಳಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಪ್ರಧಾನಿ ಮೋದಿಯವರು ಯುರೋಪ್ ದೇಶಗಳ ಪ್ರವಾಸ ಮುಗಿಸಿ ದೆಹಲಿಗೆ ಗುರುವಾರ ವಾಪಸ್ಸಾಗಲಿದ್ದಾರೆ. ಅದರ ನಂತರವೇ ರಾಜ್ಯ ಸಚಿವ ಸಂಪುಟದ ಬಗ್ಗೆ ನಿರ್ಧಾರವಾಗಲಿದೆ.

ಅಭಿವೃದ್ಧಿಯೇ ನನ್ನ ಮಂತ್ರ: ತಮ್ಮ ಸರ್ಕಾರದ ವಿರುದ್ಧದ ಆರೋಪಗಳು ಮತ್ತು ನಾಯಕತ್ವ ಬದಲಾವಣೆಯ ಊಹಾಪೋಹ ಗಳ ನಡುವೆಯೇ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಬಜೆಟ್‌ನಲ್ಲಿ ಘೋಷಿಸಲಾದ ಶೇಕಡಾ ೮೦ಕ್ಕೂ ಹೆಚ್ಚು ಕಾರ್ಯ ಕ್ರಮಗಳ ಅನುಷ್ಠಾನಕ್ಕೆ ಸರ್ಕಾರ ಆದೇಶಗಳನ್ನು (ಜಿಒ) ಹೊರಡಿ ಸಿದ್ದು, ಉಳಿದ ಯೋಜನೆಗಳ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. ವ್ಯವಹಾರ ಮತ್ತು ಅಭಿವೃದ್ಧಿ ಕಾರ್ಯಗಳು ಶ್ರದ್ಧೆಯಿಂದ ಪ್ರಾರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜನರ ಮನೆ ಬಾಗಿಲಿಗೆ ಸೇವೆಗಳನ್ನು ತಲು ಪಿಸುವತ್ತ ಗಮನ ಹರಿಸಲಾಗುತ್ತಿದೆ. ಸರ್ಕಾರ ಆದೇಶ ಹೊರಡಿ ಸಿದ ಬಳಿಕ, ಸಂಬAಧಿಸಿದ ಇಲಾಖೆಗಳು ಅನುಷ್ಠಾನಕ್ಕೆ ಮುಂದಾಗ ಬೇಕು. ಈ ನಿಟ್ಟಿನಲ್ಲಿ ಯೋಜನೆಗಳು ವಿಳಂಬವಾದರೆ ಸರಕಾರ ಇಲಾಖೆಗಳನ್ನು ಪ್ರಶ್ನಿಸಬಹುದಾಗಿದೆ. ಯೋಜನೆಗಳಿಗೆ ಆದ್ಯತೆ ನೀಡುವ ಸರ್ಕಾರದ ಉದ್ದೇಶದ ಬಗ್ಗೆ ತಿಳಿಸಲು ಮುಂದಿನ ವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದರು.

ಅಭಿವೃದ್ಧಿಯನ್ನು ವಿವಾದಗಳತ್ತ ತಿರುಗಿಸುವುದು ಪ್ರತಿಪಕ್ಷಗಳ ಆಟವಾಗಿದೆ. ಜನರಿಗೆ ಅಭಿವೃದ್ಧಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಸೂಚಿಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ತಂತ್ರಗಳನ್ನು ನಾನು ಸಾಕಷ್ಟು ನೋಡಿದ್ದೇನೆಂದು ಸಿಎಂ ಬೊಮ್ಮಾಯಿ ಹೇಳಿದರು.

ಸರ್ಕಾರದ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿದೆ. ಪ್ರತಿಪಕ್ಷಗಳು ಬಹಳಷ್ಟು ಅನು ತ್ಪಾದಕ ವಿಚಾರಗಳನ್ನು ಎತ್ತಲು ಪ್ರಯತ್ನಿಸುತ್ತಿವೆ. ಜನರ ಸಮಸ್ಯೆ ಗಳು ಅಥವಾ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಳ್ಳುವಲ್ಲಿ ಪ್ರತಿಪಕ್ಷ ಗಳು ವಿಫಲವಾಗಿವೆ. ಆದರೆ, ನನ್ನ
ಕರ್ತವ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಒಂದು ವರ್ಷದಲ್ಲಿ, ಸಮಗ್ರ ಬೆಳವಣ ಗೆಯೊಂದಿಗೆ ನವ ಕರ್ನಾಟಕಕ್ಕೆ ನಾವು ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ. ನಾವು ಅಭಿವೃದ್ಧಿ ಕಾರ್ಯಗಳ ಮಾಡುತ್ತೇವೆ. ಈ ಅಭಿವೃದ್ಧಿಗಳ ರಿಪೋರ್ಟ್ ಕಾರ್ಡ್ ಗಳೊಂದಿಗೆ ಮತ ಕೇಳಲು ಜನರ ಬಳಿಹೋಗುತ್ತೇನೆಂದು ಹೇಳಿದ್ದಾರೆ.

ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿನ ಅಕ್ರಮಗಳು ಮತ್ತು ಅನುದಾನ ಬಿಡುಗಡೆ ಮಾಡಲು “ಶೇ ೪೦ ಕಮಿಷನ್” ಎಂಬ ಗುತ್ತಿಗೆದಾರರ ಸಂಘದ ಆರೋಪಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಬೊಮ್ಮಾಯಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದತ್ತ ಗಮನ ಹರಿಸುವಂತೆ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಘೋಷಿಸಲಾದ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಲು ಸಿಎಂ ಬೊಮ್ಮಾಯಿಯವರು ರಾಜ್ಯದಾದ್ಯಂತ ಪ್ರವಾಸ ಆರಂಭಿಸಿದ್ದಾರೆAದು ತಿಳಿದುಬಂದಿದೆ.
ಸೂಚನೆಯAತೆಯೇ ಈಗಾಗಲೇ ಕಾರ್ಯವನ್ನು ಮುಖ್ಯಮಂತ್ರಿಗಳು ಆರಂಭಿಸಿದ್ದು, ಏಪ್ರಿಲ್‌ನಲ್ಲಿ ಮುಖ್ಯಮಂತ್ರಿಗಳು ೨೩,೫೮೭ ಕಿ.ಮೀ ಪ್ರಯಾಣ ಸಿದ್ದಾರೆ. ಏಪ್ರಿಲ್ ಮೊದಲ ಮತ್ತು ಕೊನೆಯ ವಾರದಲ್ಲಿ ನವದೆಹಲಿಗೂ ಭೇಟಿ ನೀಡಿದ್ದರು.

ಬೆಂಗಳೂರು: ನಾಳೆ ನಡೆಯಬೇಕಿದ್ದ ಸಂಪುಟ ಸಭೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಠಾತ್ ಮುಂದೂಡಿದ್ದಾರೆ. ವರಿಷ್ಠರ ಸಲಹೆಯಂತೆ ಒಂದು ವಾರ ಕಾಲ ಮುಂದೂಡಿರುವುದು ಹಲವು ಊಹಾಪೋಹಗಳಿಗೆ ಆಸ್ಪದ ನೀಡಿದೆ. ಉದ್ದೇಶಿತ ಸಂಪುಟ ಸಭೆಯಲ್ಲಿ ಕೆಲವು ಮಹ ತ್ವದ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ನಿರ್ಧರಿಸಿದ್ದರು. ಆದರೆ, ಇದಕ್ಕೆ ವರಿಷ್ಠರು ತಾತ್ಕಾ ಲಿಕ ಬ್ರೇಕ್ ಹಾಕಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಪ್ರವಾಸ ಕೈಗೊಂಡು ಹಿಂದಿರುಗುತ್ತಿದ್ದAತೆ ಈ ಸಭೆ ರದ್ದಾಗಿದೆ. ಗೃಹ ಸಚಿವರ ರಾಜ್ಯ ಭೇಟಿ ಸಂದರ್ಭದಲ್ಲಿ ರಾಜ ಕೀಯವಾಗಿ ಕೆಲವು ತೀರ್ಮಾನ ತೆಗೆದು ಕೊಳ್ಳುತ್ತಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿದ್ದವು. ಆದರೆ, ಅಮಿತ್ ಶಾ ಕರೆದಿದ್ದ ಪಕ್ಷದ ಮುಖಂಡರ ಸಭೆ ಮತ್ತು ಕೋರ್ ಕಮಿಟಿ ಸಭೆ ರದ್ದು ಮಾಡಿದ್ದಲ್ಲದೆ, ಯಾವುದೇ ರಾಜಕೀಯ ತೀರ್ಮಾನ ಕೈಗೊ ಳ್ಳದೇ ಹಿಂದಿರುಗಿದರು. ಆದರೆ, ಸರ್ಕಾರದ ಬೆಳವಣ ಗೆಗಳು ಕೇಂದ್ರ ಗೃಹ ಸಚಿವರಿಗೆ ಬೇಸರ ತಂದು ಯಾವುದೇ ರಾಜಕೀಯ ಸಭೆ ನಡೆಸದೇ ಹಿಂದಿರುಗಿದರು. ವಾಪಸ್ಸು ಹೋಗುವ ಮುನ್ನ ಕೆಲವು ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಕರ್ನಾ ಟಕದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ಸಂದರ್ಭದಲ್ಲಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತ್ರ ಸಮಯಾವಕಾಶ ನೋಡಿ ಮುಖ್ಯಮಂತ್ರಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸಂಪುಟ ಪುನಾರಚನೆ ಇಲ್ಲವೆ ವಿಸ್ತರಣೆಗೆ ಅನುಮತಿ ಕೋರಿದ್ದಾರೆ. ಪುನಾರಚನೆ ಸಾಧ್ಯವಾಗದಿದ್ದರೆ, ಖಾತೆಗಳ ಮರು ಹಂಚಿಕೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಪರವಾಗಿ ಮನವಿ ಮಾಡಿಕೊಂಡರು. ಇದಕ್ಕೂ ಪ್ರಧಾನಿ ಪ್ರವಾಸದಿಂದ ಹಿಂದಿರುಗಿದ ನಂತರ ಚರ್ಚಿಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಸಂಪುಟ ವಿಸ್ತರಣೆ ಇಲ್ಲವೆ, ಪುನಾರಚನೆಗೆ ಗೃಹ ಸಚಿವರ ಬಳಿ ಪ್ರಸ್ತಾಪ ಮಾಡಿದ್ದೆ. ಅವರು, ದೆಹಲಿಗೆ ತೆರಳಿದ ನಂತರ ನಿಮಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದರು.

Translate »