ಸಮಗ್ರ ಪರಿಹಾರದ ಪ್ಯಾಕೇಜ್‍ಗೆ ಆಗ್ರಹಿಸಿ  ಏಳು ಎಡಪಕ್ಷಗಳಿಂದ ಮನವಿ ಸಲ್ಲಿಕೆ
ಮೈಸೂರು

ಸಮಗ್ರ ಪರಿಹಾರದ ಪ್ಯಾಕೇಜ್‍ಗೆ ಆಗ್ರಹಿಸಿ ಏಳು ಎಡಪಕ್ಷಗಳಿಂದ ಮನವಿ ಸಲ್ಲಿಕೆ

June 16, 2021

ಮೈಸೂರು,ಜೂ.15(ಪಿಎಂ)- ರಾಜ್ಯದ ಕೋಟ್ಯಾಂತರ ಜನತೆ ಕೋವಿಡ್ ಸಂಕಷ್ಟ ದಲ್ಲಿದ್ದರೆ ರಾಜ್ಯ ಸರ್ಕಾರ 5 ಲಕ್ಷ ಜನತೆಗೆ ಅನ್ವಯವಾಗುವಂತೆ ಮಾತ್ರವೇ ಪರಿಹಾರದ ಪ್ಯಾಕೇಜ್ ಘೋಷಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ 7 ಎಡಪಕ್ಷಗಳು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸರ್ಕಾರಗಳ ಮಾದರಿ ಪರಿಹಾರ ನೀಡುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ ವಾದ), ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ಭಾರತ ಕಮ್ಯೂ ನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ, ಲೆನಿನ್‍ವಾದಿ -ಲಿಬರೇಷನ್), ಸ್ವರಾಜ್ ಇಂಡಿಯಾ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐ ಎಫ್‍ಬಿ) ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಜಿಎಸ್‍ಟಿ ಪಾಲನ್ನು ಪಡೆದು ಸೂಕ್ತ ಮತ್ತು ಸಮಗ್ರ ಪರಿಹಾರದ ಪ್ಯಾಕೇಜ್ ನೀಡಬೇಕು. ಕೋವಿಡ್‍ಗೆ ಸಂಬಂಧಿಸಿದಂತೆ ಬೆಡ್, ಲಸಿಕೆ, ಔಷಧ, ಆಕ್ಸಿಜನ್ ಹಗರಣಗಳು, ಜಾತಿ ಹಾಗೂ ರಾಜಕೀಯ ತಾರತಮ್ಯದ ಪ್ರಕ ರಣಗಳ ಕುರಿತಂತೆ ಉನ್ನತ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಆದಾಯ ತೆರಿಗೆ ಪಾವತಿ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ ಸಮಗ್ರ ಆಹಾರ ಧಾನ್ಯ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿ ಗಳನ್ನು ನೀಡಬೇಕು. ಅಲ್ಲದೆ, ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಈ ಕುಟುಂಬ ಗಳಿಗೆ ಕೇಂದ್ರ ಸರ್ಕಾರದ ಸಹಕಾರದೊಂ ದಿಗೆ ಮಾಸಿಕ 10 ಸಾವಿರ ರೂ. ನೆರವು ನೀಡಬೇಕು. ಕೃಷಿ ಭೂಮಿಯಲ್ಲೇ ಕೊಳೆತ ಹೂ, ಹಣ್ಣು, ಆಲೂಗಡ್ಡೆ, ಈರುಳ್ಳಿ ಮೊದ ಲಾದ ಬೆಳೆಗಳಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ನೆರವು ಒದಗಿಸಬೇಕು. ಜೊತೆಗೆ ರಾಜ್ಯದ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬು ದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲಾ ರೀತಿ ಸಾಲಗಳನ್ನು ಕೇರಳ ಸರ್ಕಾರದ `ಋಣ ಮುಕ್ತ ಕಾಯ್ದೆ’ ಮಾದರಿಯಲ್ಲಿ ಮನ್ನಾ ಮಾಡಬೇಕು. ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ಪಾವತಿಗೆ ಮತ್ತು ಉದ್ಯೋಗ ಭದ್ರತೆಗೆ ಸೂಕ್ತ ಆದೇಶ ಹೊರಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸುವ ಜೊತೆಗೆ ಕೆಲಸದ ಅವಧಿಯನ್ನು 200 ದಿನಗಳಿಗೆ ಹೆಚ್ಚಳ ಮಾಡ ಬೇಕು. ಅಲ್ಲದೆ, 424 ರೂ.ಗೆ ಕೂಲಿ ಹೆಚ್ಚಿಸ ಬೇಕು. ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಬೇಕು. ಸ್ಮಶಾನ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಮೊದಲಾದ ಸ್ಥಳ ಗಳಲ್ಲಿನ ಸ್ವಚ್ಛತಾ ಕೆಲಸಗಾರರಿಗೂ ಈ ಸೌಲಭ್ಯಗಳನ್ನು ಕಲ್ಪಿಸಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿ ಕೃಷಿ ಕಾಯ್ದೆ ಗಳು, ಕಾರ್ಮಿಕ ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣಕ್ಕೆ ಕೈ ಹಾಕಬಾರದು. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ ರೈತರಿಗೆ ಎದುರಾಗುವ ಬೆಳೆ ನಷ್ಟಕ್ಕೆ ಪರಿ ಹಾರ ಕಲ್ಪಿಸಲು `ಋಣ ಮುಕ್ತ ಕಾಯ್ದೆ’ ಜಾರಿ ಗೊಳಿಸಬೇಕು ಎಂದು ಮನವಿಯಲ್ಲಿ ಕೋರ ಲಾಗಿದೆ. ಸಿಪಿಐ(ಎಂ)ನ ಜಯರಾಮು, ಸಿಪಿಐನ ಸೋಮರಾಜೇಅರಸ್, ಎನ್.ಕೆ. ದೇವದಾಸ್, ಸ್ವರಾಜ್ ಇಂಡಿಯಾದ ಉಗ್ರನರ ಸಿಂಹೇಗೌಡ, ಸಿಪಿಐಎಂಎಲ್‍ನ ಚೌಡಳ್ಳಿ ಜವರಯ್ಯ, ಎಸ್‍ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯೆ ಉಮಾದೇವಿ ಮನವಿ ಸಲ್ಲಿಸಿದರು.

Translate »