ಚಾಮರಾಜನಗರ

ಕಾರು-ಬೈಕ್ ಡಿಕ್ಕಿ; ಯುವಕ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ; ಯುವಕ ಸಾವು

July 27, 2018

ಚಾಮರಾಜನಗರ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಚಿಕ್ಕನಾಗು ಎಂಬುವರ ಪುತ್ರ ಶಿವು (24) ಮೃತಪಟ್ಟ ಬೈಕ್ ಸವಾರ. ಕಾರ್ಯನಿಮಿತ್ತ ಶಿವು ಬೈಕ್‍ನಲ್ಲಿ ಕೋಡಿ ಮೋಳೆ ಚಂದಕವಾಡಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಚಂದಕವಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿ ಸಿತು. ಇದರಿಂದ…

ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ
ಚಾಮರಾಜನಗರ

ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ

July 27, 2018

ಚಾಮರಾಜನಗರ: – ಯುಜಿಸಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮರು ಮಾನ್ಯತೆ ನೀಡುವಂತೆ ಚಾಮರಾಜನಗರದ ಸಂಸದ ಆರ್.ಧ್ರುವನಾರಾಯಣ್ ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳಂತೆ ಕೆಎಸ್‍ಒಯು ತನ್ನ ವ್ಯಾಪ್ತಿಯ ಹೊರಗಡೆ ಮಾಡಿಕೊಂಡಂತಹ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ಮ್ಯಾನೆಜ್‍ಮೆಂಟ್ ಕೋರ್ಸ್‍ಗಳಿಗೆ ಮಾತ್ರ ಮಾನ್ಯತೆ ನಿರ್ಬಂಧಿಸಬೇಕಿತ್ತು. ಆದರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಎಲ್ಲಾ ಕೋರ್ಸ್‍ಗಳ ಮಾನ್ಯತೆಯನ್ನು ತೆಗೆದು ಹಾಕಿದೆ. 2013-14 ನೇ ಸಾಲಿಗಾಗಿ…

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ
ಚಾಮರಾಜನಗರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

July 27, 2018

ಚಾಮರಾಜನಗರ:  ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ಟಿವಿ9 ಜಿಲ್ಲಾ ವರದಿಗಾರ ಎಂ.ಇ.ಮಂಜು ನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರ ಕೆ.ಬಿ.ದೇವ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಎಲ್ಲಾ 25 ಸ್ಥಾನಗಳಿಗೂ ಅವಿ ರೋಧ ಆಯ್ಕೆ ನಡೆದಿದ್ದು, ಪದಾಧಿ ಕಾರಿಗಳ ವಿವರವನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎಂ.ಬಿ.ಕೃಷ್ಣಮೂರ್ತಿ ಪ್ರಕಟಿಸಿದ್ದಾರೆ. ಪದಾಧಿಕಾರಿಗಳ ವಿವರ ಇಂತಿದೆ. ಎಂ.ಇ.ಮಂಜುನಾಥ್ (ಅಧ್ಯಕ್ಷ), ದೇವ ರಾಜು ಕಪ್ಪಸೋಗೆ (ಪ್ರಧಾನ ಕಾರ್ಯ ದರ್ಶಿ), ಕೆ.ಎಸ್.ಫಾಲಲೋಚನ ಆರಾಧ್ಯ (ನಗರ ಉಪಾಧ್ಯಕ್ಷ), ಎನ್.ನಾಗೇಂದ್ರ, ಎಂ.ಗುರುಸ್ವಾಮಿ (ಗ್ರಾಮೀಣ…

ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ
ಚಾಮರಾಜನಗರ

ಆಗಸ್ಟ್ 18,19 ಭರಚುಕ್ಕಿ ಜಲಪಾತೋತ್ಸವ

July 26, 2018

1.5 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ವೆಸ್ಲಿ ಸೇತುವೆ ದುರಸ್ತಿ ಮಧ್ಯರಂಗ ದೇವಾಲಯ ಜೀಣೋದ್ಧಾರಕ್ಕೆ ಕ್ರಮ ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಭರಚುಕ್ಕಿಯಲ್ಲಿ ಆಗಸ್ಟ್ 18 ಹಾಗೂ 19 ರಂದು ಜಲಪಾತೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಭರಚುಕ್ಕಿಯಲ್ಲಿರುವ ಮಯೂರ ಪ್ರವಾಸಿ ಮಂದಿರದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು. ಭರಚುಕ್ಕಿಯಲ್ಲಿ ಆಯೋಜಿಸಲಾಗುವ ಎರಡು ದಿನಗಳ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿ ಸಲಾಗುವುದು….

ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು
ಚಾಮರಾಜನಗರ

ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು

July 26, 2018

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಂಕಷ್ಟ ನೋಡಿ ಬಹಿರಂಗ ಸಮಾರಂಭದಲ್ಲಿ ಅತ್ತಿದ್ದಾರೆ. ಆದರೆ ಬಿಜೆಪಿಯವರು ಬೇರೆ ಬೇರೆ ಕಾರಣಗಳಿಗಾಗಿ ಬಾಗಿಲು ಹಾಕಿ ಕೊಂಡು ಅಳುತ್ತಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು. ಕೊಳ್ಳೇಗಾಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದವರೆಗೂ ಹೃದಯ ಮತ್ತು ಮನ ಸಾಕ್ಷಿ ಅನ್ನೋದು ಇರುತ್ತದೆ. ನೋವಾದ ಸಂದರ್ಭದಲ್ಲಿ ಕಣ್ಣೀರು ಬಂದಿರುತ್ತದೆ. ಆದರೆ ಇದನ್ನೇ ಟೀಕಿಸುವ ಮಟ್ಟಕ್ಕೆ ಬಿಜೆಪಿ ಮುಖಂಡರು…

ನಾಡು ಕಂಡ ಶ್ರೇಷ್ಠ ಸಂತ ಬಸವಣ್ಣ: ಸುತ್ತೂರು ಶ್ರೀ
ಚಾಮರಾಜನಗರ

ನಾಡು ಕಂಡ ಶ್ರೇಷ್ಠ ಸಂತ ಬಸವಣ್ಣ: ಸುತ್ತೂರು ಶ್ರೀ

July 26, 2018

ಗುಂಡ್ಲುಪೇಟೆ: ನಾಡು ಕಂಡ ಅತ್ಯಂತ ಶ್ರೇಷ್ಠ ಸಂತ ಬಸವಣ್ಣನವರು ಎಂದು ಶ್ರೀಮತ್ಸುತ್ತೂರು ವೀರ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು. ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸೇವಾಸೇನೆ ಮತ್ತು ವಿವಿಧ ವೀರಶೈವ ಸಂಘಟನೆಗಳು ಆಯೋಜಿಸಿದ್ದ ಬಸವ ಜಯಂತಿ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತ, ಸಮಾನತೆಯ ಪರಿ ಕಲ್ಪನೆಯನ್ನು ಬೋಧಿಸಿದ ಬಸವಣ್ಣ ದೂರದೃಷ್ಟಿ ಹೊಂದಿದ್ದ ಮಹಾನ್ ಮಾನವತಾವಾದಿ. ಬಾಲ ಬಸವನಿಂದ ಜಗಜ್ಯೋತಿ ಬಸವೇಶ್ವರ ಆದ ಅವರ ಸಾಧನೆ…

ಕೊಳ್ಳೇಗಾಲ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರ ಭೇಟಿ
ಚಾಮರಾಜನಗರ

ಕೊಳ್ಳೇಗಾಲ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರ ಭೇಟಿ

July 26, 2018

ಚಾಮರಾಜನಗರ:  ರೇಷ್ಮೆ ಬೆಳೆಗಾರರು, ರೈತರು ತರುವ ರೇಷ್ಮೆ ಗೂಡಿಗೆ ಮಧ್ಯವರ್ತಿಗಳ ಪ್ರವೇಶವಿಲ್ಲದೆ ನೇರವಾಗಿ ಬೆಳೆಗಾರರು ರೈತರಿಗೆ ಮಾರಾಟ ಹಣ ತಲುಪುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೊಳ್ಳೇಗಾಲ ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಗೆ ಇಂದು ಭೇಟಿ ನೀಡಿದ ಸಚಿವರು ಅಲ್ಲಿನ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ ಬಳಿಕ ಈ ವಿಷಯ ತಿಳಿಸಿದರು. ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಬೆಳೆಗಾರರಿಗೆ ಯಾವುದೇ ತೊಂದರೆ ಯಾಗಬಾರದು. ಅವರು ಬೆಳೆದ ರೇಷ್ಮೆಗೆ ಸರಿಯಾದ ರೀತಿಯಲ್ಲಿ ಹಣ ಸಿಗುವ ಹಾಗೆ ನೋಡಿಕೊಳ್ಳಬೇಕು….

ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ
ಚಾಮರಾಜನಗರ

ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ

July 26, 2018

ಕೊಳ್ಳೇಗಾಲ: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಾನಸ ಸಂಭ್ರಮ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಸನ್ಮಾನ ಮತ್ತು ಅಭಿನಂದನಾ ಸಮಾ ರಂಭವನ್ನು ನಾಳೆ (ಜು.26) ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ 5ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆ ದಿರುವ ಕು.ಹರ್ಷಿತಾ, ಸಚಿವ ಎನ್.ಮಹೇಶ್, ಗೌರವ ಡಾಕ್ಟರೇಟ್ ಪಡೆದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ…

ಪ್ರತ್ಯೇಕ ಅಪಘಾತ; ಇಬ್ಬರು ಸಾವು
ಚಾಮರಾಜನಗರ

ಪ್ರತ್ಯೇಕ ಅಪಘಾತ; ಇಬ್ಬರು ಸಾವು

July 26, 2018

ಕೊಳ್ಳೇಗಾಲ:  ತಾಲೂಕಿನ ಎರಡು ಕಡೆ ಇಂದು ಪ್ರತ್ಯೇಕ ಅಪಘಾತ ಸಂಭವಿಸಿದ್ದ ಇಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ. ಇಂದು ಬೆಳಗ್ಗೆ ತಾಲೂಕಿನ ಕುಂತೂರು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ. ಕೆ.ಆರ್. ನಗರ ತಾಲೂಕು ಹನಸೋಗೆ ಗ್ರಾಮದ ಯಶೋಧರ (55) ಮೃತಪಟ್ಟ ದುರ್ದೈವಿ ಯಾಗಿದ್ದು, ಪ್ರಜ್ವಲ್ ಗೌಡ ಹಾಗೂ ಮನು ಗಾಯಗೊಂಡಿದ್ದಾರೆ. ಗಾಯಗೊಂಡ ಇವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಪ್ರಸಿದ್ಧ…

ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ: ಈ ಬಾರಿಯೂ ನಡೆಯದ  ಶ್ರೀ ಚಾಮರಾಜೇಶ್ವರ ರಥೋತ್ಸವ
ಚಾಮರಾಜನಗರ

ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ: ಈ ಬಾರಿಯೂ ನಡೆಯದ  ಶ್ರೀ ಚಾಮರಾಜೇಶ್ವರ ರಥೋತ್ಸವ

July 25, 2018

ಚಾಮರಾಜನಗರ:  ಜಿಲ್ಲೆಯ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದಾಗಿ ಚಾಮರಾಜನಗರದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ರಥೋತ್ಸವ ಈ ಬಾರಿಯೂ ನಡೆಯುತ್ತಿಲ್ಲ. ಇದು ವಿಶೇಷವಾಗಿ ನವ ದಂಪತಿಗಳಲ್ಲಿ ಹಾಗೂ ನಗರದ ನಾಗರಿಕರಲ್ಲಿ ಬೇಸರ ಮೂಡಿಸಿದೆ. ನಗರದ ಮಧ್ಯಭಾಗದಲ್ಲಿ ಇರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ರಥೋತ್ಸವ ಕಳೆದ 180 ವರ್ಷಗಳಿಂದಲೂ ನಡೆಯುತ್ತಿತ್ತು. ರಥೋತ್ಸವ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿತ್ತು. ಇದರಿಂದ ಈ ರಥೋತ್ಸವಕ್ಕೆ ಎಲ್ಲಿಲ್ಲದ ಮಹತ್ವ. ಆದರೆ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ದೊಡ್ಡ ರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿ…

1 101 102 103 104 105 141
Translate »