ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ
ಚಾಮರಾಜನಗರ

ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ

July 27, 2018

ಚಾಮರಾಜನಗರ: – ಯುಜಿಸಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮರು ಮಾನ್ಯತೆ ನೀಡುವಂತೆ ಚಾಮರಾಜನಗರದ ಸಂಸದ ಆರ್.ಧ್ರುವನಾರಾಯಣ್ ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು.

ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳಂತೆ ಕೆಎಸ್‍ಒಯು ತನ್ನ ವ್ಯಾಪ್ತಿಯ ಹೊರಗಡೆ ಮಾಡಿಕೊಂಡಂತಹ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ಮ್ಯಾನೆಜ್‍ಮೆಂಟ್ ಕೋರ್ಸ್‍ಗಳಿಗೆ ಮಾತ್ರ ಮಾನ್ಯತೆ ನಿರ್ಬಂಧಿಸಬೇಕಿತ್ತು. ಆದರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಎಲ್ಲಾ ಕೋರ್ಸ್‍ಗಳ ಮಾನ್ಯತೆಯನ್ನು ತೆಗೆದು ಹಾಕಿದೆ.

2013-14 ನೇ ಸಾಲಿಗಾಗಿ 49,675 ವಿದ್ಯಾರ್ಥಿಗಳನ್ನು ಹಾಗೂ 2014-15ನೇ ಸಾಲಿಗಾಗಿ 46178 ವಿದ್ಯಾರ್ಥಿಗಳನ್ನು ಎಲ್ಲಾ ಕೋರ್ಸ್ ಪ್ರವೇಶ ತೆಗುದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿತ್ತು, ಕೆಲ ಸಮಸ್ಯೆಯಿಂದಾಗಿ ತಮ್ಮದಲ್ಲದ ತಪ್ಪಿಗೆ ಸುಮಾರು 2,05,408 ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ನೇರ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ಸರಿಪಡಿಸುವುದಕ್ಕಾಗಿ 2013-14 ಹಾಗೂ 2014-15ನೇ ಶೈಕ್ಷಣಿಕ ವರ್ಷಗಳಿಗಾಗಿ ಅವರ ಪ್ರವೇಶಕ್ಕಾಗಿ ಮಾನ್ಯತೆ ನೀಡುತ್ತಾ ಈ ಸಮಸ್ಯೆಯನ್ನು ಬಗೆಹರಿಸುವ ವಿಷಯದ ಕಡೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲು ಧ್ರುವನಾರಾಯಣ್ ಒತ್ತಾಯಿಸಿದರು.

Translate »