ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ
ಚಾಮರಾಜನಗರ

ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ

July 26, 2018

ಕೊಳ್ಳೇಗಾಲ: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಾನಸ ಸಂಭ್ರಮ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಸನ್ಮಾನ ಮತ್ತು ಅಭಿನಂದನಾ ಸಮಾ ರಂಭವನ್ನು ನಾಳೆ (ಜು.26) ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ 5ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆ ದಿರುವ ಕು.ಹರ್ಷಿತಾ, ಸಚಿವ ಎನ್.ಮಹೇಶ್, ಗೌರವ ಡಾಕ್ಟರೇಟ್ ಪಡೆದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ಶ್ರೀಮತಿ ಫೌಜಿಯಾ ತರನಮ್, ಮೈಸೂರು ವಿವಿ ಕುಲ ಸಚಿವ ಡಾ.ಜೆ.ಸೋಮಶೇಖರ್, ಡಿಡಿಪಿಐ ಶ್ರೀಮತಿ ವಿ.ಆರ್. ಶ್ಯಾಮಲ, ನಗರಸಭಾಧ್ಯಕ್ಷ ಎಸ್.ರಮೇಶ್, ಉಪಾಧ್ಯಕ್ಷ ಎಂ.ಶಿವಾನಂದ, ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ನಾಗರಾಜು ಉಪಸ್ಥಿತರಿರುವರು.

Translate »