ನಾಡು ಕಂಡ ಶ್ರೇಷ್ಠ ಸಂತ ಬಸವಣ್ಣ: ಸುತ್ತೂರು ಶ್ರೀ
ಚಾಮರಾಜನಗರ

ನಾಡು ಕಂಡ ಶ್ರೇಷ್ಠ ಸಂತ ಬಸವಣ್ಣ: ಸುತ್ತೂರು ಶ್ರೀ

July 26, 2018

ಗುಂಡ್ಲುಪೇಟೆ: ನಾಡು ಕಂಡ ಅತ್ಯಂತ ಶ್ರೇಷ್ಠ ಸಂತ ಬಸವಣ್ಣನವರು ಎಂದು ಶ್ರೀಮತ್ಸುತ್ತೂರು ವೀರ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.

ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸೇವಾಸೇನೆ ಮತ್ತು ವಿವಿಧ ವೀರಶೈವ ಸಂಘಟನೆಗಳು ಆಯೋಜಿಸಿದ್ದ ಬಸವ ಜಯಂತಿ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತ, ಸಮಾನತೆಯ ಪರಿ ಕಲ್ಪನೆಯನ್ನು ಬೋಧಿಸಿದ ಬಸವಣ್ಣ ದೂರದೃಷ್ಟಿ ಹೊಂದಿದ್ದ ಮಹಾನ್ ಮಾನವತಾವಾದಿ. ಬಾಲ ಬಸವನಿಂದ ಜಗಜ್ಯೋತಿ ಬಸವೇಶ್ವರ ಆದ ಅವರ ಸಾಧನೆ ಮತ್ತು ಸಮಾನತೆಯ ಮಂತ್ರ ಸರ್ವಕಾಲಿಕವಾದುದು ಎಂದರು.

ಜಾತಿಬೇಧ, ಲಿಂಗಬೇಧ ಮುಂತಾದ ಸಾಮಾಜಿಕ ಅಸಮತೋಲನಗಳ ನಿವಾರಣೆಗೆ ತಮ್ಮ ಸರಳವಾದ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಲ್ಲದೆ, ಅದನ್ನು ಪಾಲಿಸಿದ ಮಹಾನ್ ವ್ಯಕ್ತಿಗಳಾಗಿ ದ್ದರು. ಕೇವಲ ಬಾಯಿ ಮಾತಿನಲ್ಲಿ ಅವರ ಜಯಂತಿಯನ್ನು ಆಚರಿಸು ವುದು ಬಿಟ್ಟು ನಿಜವಾಗಿಯೂ ಅವರ ತತ್ವಗಳನ್ನು ಪಾಲಿಸಬೇಕು. ಇಂತಹ ಸುದಿನದಂದು ಉತ್ತಮ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಉತ್ತಮ ದಾರಿಯಲ್ಲಿ ನಡೆ ಯುವ ಸಂಕಲ್ಪವನ್ನು ಮಾಡುವಂತೆ ಯುವ ಜನತೆಗೆ ಕರೆ ನೀಡಿದರು.

ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಎಲ್ಲಾ ಸಮುದಾಯದ ವರನ್ನು ಸಮಾನವಾಗಿ ಕಂಡು ಶಿಕ್ಷಣ, ಸಾಮಾಜಿಕ ಚಿಂತನೆಗಳ ಬಗ್ಗೆ 12ನೇ ಶತ ಮಾನದಲ್ಲಿಯೇ ಧ್ವನಿ ಎತ್ತಿದ ಮಹಾ ಪುರುಷ. ಅಂತಹ ಮಹಾನ್ ವ್ಯಕ್ತಿಗಳ ಸಿದ್ದಾಂ ತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸಮಾಜದ ಶ್ರೇಷ್ಠ ಉದ್ದೇಶಕ್ಕಾಗಿ ಹಾಗೂ ಶ್ರೇಷ್ಠ ಪರಂಪರೆಗಾಗಿ ಗುರು ಗಳನ್ನು ಅರಸಿ ಬಾಲ್ಯದಲ್ಲಿಯೇ ಮನೆ ಬಿಟ್ಟು ಹೋದ ಕಾರಣ ಇಂದು ಬಸವಣ್ಣ ವಿಶ್ವ ವಿಖ್ಯಾತಿಯಾಗಿದ್ದಾರೆ. ಬಸವಣ್ಣನವರು ತನ್ನ 12ನೇ ವಯಸ್ಸಿಗೆ ಮನೆ ಬಿಟ್ಟು ಸಮಾಜದ ಸುಧಾರಣೆಗೆ ಪಣ ತೊಟ್ಟ ಮಹಾಪುರುಷ. 12ನೇ ಶತಮಾನ ದಲ್ಲಿಯೇ ಸಂಸತ್ತಿನ ರೂಪುರೇಷೆಯನ್ನು ತಂದವರು ಬಸವಣ್ಣ. ವಿಶ್ವ ಮಟ್ಟದಲ್ಲಿ ಇಂದು ಬಸವಣ್ಣ ಅಜರಾಮರವಾಗಿ ದ್ದಾರೆ ಎಂದರೆ ಅವರು ಸಾಮಾಜಿಕ ಕ್ಷೇತ್ರ ದಲ್ಲಿ ನೀಡಿದ ಕೊಡುಗೆಗಳೇ ಕಾರಣ. ಅಂತವರ ಆದರ್ಶಗಳನ್ನು ಪ್ರತಿಯೊ ಬ್ಬರೂ ಪಾಲಿಸಬೇಕು ಎಂದರು.

ಜಯಂತ್ಯೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದ ಪಡುಗೂರು ಅಡವಿ ಮಠಾಧ್ಯಕ್ಷರಾದ ಶ್ರೀ ಶಿವಲಿಂಗೇಂದ್ರಸ್ವಾಮಿಗಳು ಮಾತನಾಡಿ, ಜಗತ್ತು ಕಂಡ ವಿಶೇಷ ಹಾಗೂ ವಿಶಿಷ್ಠ ವ್ಯಕ್ತಿ ಭಕ್ತಿ ಬಂಡಾರಿ ಬಸವಣ್ಣನವರು. ಅವರ ಒಂದು ವಚನದ ಆದ ರ್ಶವನ್ನಾದರೂ ನಮ್ಮ ಜೀವನದಲ್ಲಿ ಮೈಗೂಡಿ ಸಿಕೊಂಡು ನಮ್ಮಲ್ಲಿರುವ ದುಷ್ಟ ಗುಣ ಗಳನ್ನು ತೊರೆದು ಶಿವನನ್ನು ನಮ್ಮ ದೇಹ ದೊಳಗೆ ಬರಮಾಡಿಕೊಳ್ಳೋಣ ಎಂದರು.

ವಿಶೇಷ ಆಹ್ವಾನಿತರಾಗಿ ಶಾಸಕ ನಿರಂ ಜನ್‍ಕುಮಾರ್, ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಚಿಕ್ಕತುಪ್ಪೂರು ಶಿವಪೂಜಾ ಮಠಾಧ್ಯಕ್ಷ ಶ್ರೀಚನ್ನವೀರಸ್ವಾಮಿಗಳು, ದೇವನೂರು ಮಠದ ಶ್ರೀಮಹಾಂತಸ್ವಾಮಿ ಗಳು, ಮಾದಾಪಟ್ಟಣ ಮಠದ ಶ್ರೀಮಹಾಂತ ಸ್ವಾಮಿಗಳು, ಸೋಮಹಳ್ಳಿಯ ಶ್ರೀಸಿದ್ದಮಲ್ಲ ಸ್ವಾಮಿಗಳು, ಮೂಡುಗೂರು ಶ್ರೀ ಉದ್ದಾ ನೇಶ್ವರ ವಿರಕ್ತಮಠಾಧ್ಯಕ್ಷ ಶ್ರೀ ಇಮ್ಮಡಿ ಉದ್ದಾನಸ್ವಾಮಿ, ಶ್ರೀಹಂಗಳ ಜಡೇಸ್ವಾಮಿ ಗಳು ಸೇರಿದಂತೆ ತಾಲೂಕಿನ ಮಠಾಧೀಶರು ಗಳು, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಕೊಡಸೋಗೆ ಶಿವಬಸಪ್ಪ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಸೇರಿದಂತೆ ತಾಲೂ ಕಿನ ಗಣ್ಯರು, ಜನಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರು, ಯುವಕರು ಭಾಗವಹಿಸಿದ್ದರು.

ವಿಜೃಂಭಣೆಯ ಉತ್ಸವ: ಬಸವ ಜಯಂತ್ಯೋತ್ಸವದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಕಳೆಕಟ್ಟಿತ್ತು. ವಿಶೇಷವಾದ ತೆರೆದ ವಾಹನದಲ್ಲಿ ವಿರಾಜಮಾನರಾಗಿದ್ದ ಬಸವೇಶ್ವರರ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ವೀರಗಾಸೆ, ಕಂಸಾಳೆ, ಗಾಡಿಗೊಂಬೆ, ಛತ್ರಿ ಚಾಮರ, ಗೊರವರ ಕುಣಿತ, ಶಿವಭಜನೆ, ಬ್ಯಾಂಡ್ ಸೆಟ್ ಮುಂತಾದ ಕಲಾ ತಂಡ ಗಳೊಂದಿಗೆ ವಿಜೃಂಭಣೆಯಿಂದ ಮೆರ ವಣಿಗೆ ಮಾಡಲಾಯಿತು.

Translate »