ಮೈಸೂರು: ಬಾಗಿಲು ಚಿಲಕ ಮುರಿದು ಮನೆಯಲ್ಲಿದ್ದ 67 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಗಾಯತ್ರಿಪುರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ 2ನೇ ಹಂತದ ನಿವಾಸಿ ಜೀಯಾ ಉರ್ ರೆಹಮಾನ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಇವರು ಜು.13ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬದೊಂದಿಗೆ ತಮಿಳುನಾಡಿಗೆ ಹೋಗಿದ್ದು, ನಿನ್ನೆ ವಾಪಸ್ ಮನೆಗೆ ಬಂದಾಗ ಮನೆಯ ಮುಂಬಾಗಿಲಿನ ಚಿಲಕವನ್ನು ಮುರಿದಿರುವುದು ಗಮನಕ್ಕೆ ಬಂದಿದೆ. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಖದೀಮರು ಗಾಡ್ರೇಜ್ ಬೀರುವಿನ ಸೀಕ್ರೇಟ್ ಲಾಕರ್ ಅನ್ನು ಆಯುಧದಿಂದ ಮೀಟಿ ಅದರಲ್ಲಿದ್ದ 67 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.