ಚಾಮರಾಜನಗರ, ಏ.28- ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬುಧವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಲಾಕ್‍ಡೌನ್ ಸಂದ ರ್ಭದ ಪರಾಮರ್ಶೆ, ಕೋವಿಡ್ ಕೇರ್ ಕೇಂದ್ರಗಳ ಸಿದ್ಧತೆ ಹಾಗೂ ನ್ಯಾಯಬೆಲೆ ಅಂಗಡಿ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ರಸಗೊಬ್ಬರ, ಬಿತ್ತನೆ ಬೀಜ ಅಂಗಡಿಗಳನ್ನು ಪರಿಶೀಲಿಸಿದರು. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಕೇಂದ್ರ ಗಳನ್ನು ಆರಂಭಿಸುವ ಸಂಬಂಧ ತಾಲೂಕಿನ ಮಾದಾಪುರದ ಕಾಲೇಜು ಹಾಸ್ಟೆಲ್ ಹಾಗೂ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿ ಪುರದ ವಸತಿ ಶಾಲೆಗೆ ಭೇಟಿ ನೀಡಿ ಕೂಡಲೇ ಬಾಕಿ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು…
ಕೊರೊನಾ ಕಫ್ರ್ಯೂ: ಜಿಲ್ಲಾದ್ಯಂತ ಉತ್ತಮ ಸ್ಪಂದನೆ
April 29, 2021‘ಚಾಮರಾಜನಗರ, ಏ.28(ಎಸ್‍ಎಸ್)- ಬುಧ ವಾರದಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರದ ನಿಯಮದನ್ವಯ ಕೊರೊನಾ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲ ಅಂಗಡಿ- ಮುಂಗಟ್ಟು ಬಂದ್ ಆಗಿದ್ದವು. ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಸಾವಿನ ಪ್ರಮಾಣವು ಅಧಿಕವಾಗಿದೆ. ಹಾಗಾಗಿ, ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮಂಗಳ ವಾರ ರಾತ್ರಿ 9 ಗಂಟೆಯಿಂದ ಮೇ 12ರವರೆಗೆ ರಾಜ್ಯಾದ್ಯಂತ 14 ದಿನ ಕೊರೊನಾ ಕಫ್ರ್ಯೂ ಜಾರಿ ಗೊಳಿಸಿದ್ದು, ಇದಕ್ಕೆ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು,…
ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಡಾ.ರಾಜ್
April 27, 2021ಚಾಮರಾಜನಗರ,ಏ.26-ಕನ್ನಡದ ಕಣ್ಮಣಿ, ಜಿಲ್ಲೆಯ ಹೆಮ್ಮೆಯ ಪುತ್ರ, ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‍ಕುಮಾರ್ ಅವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ನಗರದ ಜನಾರ್ಧನ ಪ್ರತಿಷ್ಠಾನದ ಆಧ್ಯಕ್ಷ ಅರ್ಚಕ ಅನಂತಪ್ರಸಾದ್ ಹೇಳಿದರು. ಜನಾರ್ಧನ ಪ್ರತಿಷ್ಠಾನದ ವತಿಯಿಂದ ಡಾ.ರಾಜ್ ಅವರ ಹುಟ್ಟೂರು ದೊಡ್ಡಗಾಜನೂರಿನ ಅವರ ತೋಟದ ಮನೆಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರ 93ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್ ಅವರ ಸೋದರಳಿಯ ಗೋಪಾಲ್ ದಂಪತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ಜೀವಿತಾವಧಿಯ ಕೊನೆಯ ವರೆಗೂ ಕನ್ನಡಕ್ಕಾಗಿ, ಕನ್ನಡತನಕ್ಕಾಗಿ ಶ್ರಮಿಸಿದ…
ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇಂದ್ರ ಆರಂಭ
April 27, 2021970 ಹೆಚ್ಚುವರಿ ಹಾಸಿಗೆ ಸೌಲಭ್ಯ 450 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಜಿಲ್ಲೆಯಲ್ಲಿ ಹಾಸಿಗೆ, ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟನೆ ಚಾಮರಾಜನಗರ, ಏ.26- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಲಿದ್ದು, ಇದರಿಂದ ಹೆಚ್ಚುವರಿಯಾಗಿ 970 ಹಾಸಿಗೆ ಗಳ ಸೌಲಭ್ಯ ಲಭ್ಯವಾಗಲಿದೆ ಎಂದು ಜಿಲ್ಲಾ ಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದ ವೈದ್ಯಕೀಯ…
ಕೋವಿಡ್ ನಿಯಮ ಉಲ್ಲಂಘಿಸಿದ ವ್ಯಾಪಾರಿಗಳು-ಗ್ರಾಹಕರು
April 26, 2021ಯಳಂದೂರು,ಏ.25(ವಿ.ನಾಗರಾಜು)-ವಾರಾಂತ್ಯ ಕಫ್ರ್ಯೂ ಎರಡನೇ ದಿನವಾದ ಭಾನುವಾರ ಅಂಗಡಿ-ಮುಂಗಟ್ಟುಗಳ ಮುಂದೆ ಜನಸಂದಣಿ ಏರ್ಪಟ್ಟು, ಕೊರೊನಾ ನಿಯಮ ಗಾಳಿಗೆ ತೋರಿದ ಘಟನೆಗಳು ಪಟ್ಟಣದಲ್ಲಿ ಕಂಡುಬಂತು. ಭಾನುವಾರ ಬೆಳಗ್ಗೆಯಿಂದಲೇ ವ್ಯಾಪಾರಿಗಳು ಗ್ರಾಹಕರ ಜೊತೆಯಲ್ಲಿ ಬ್ಯುಸಿಯಾಗಿದ್ದರು. ನಿತ್ಯ ಬಳಕೆ ವಸ್ತು ಗಳನ್ನು ಖರೀದಿಸಲು ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸಿದ ಜನರು ಅಂಗಡಿಗಳ ಮುಂದೆ ಗುಂಪು ಕಟ್ಟಿ ನಿಂತು ದಿನಸಿ ಪದಾರ್ಥ ಖರೀದಿಸುತ್ತಿದ್ದರೆÉ, ಅಂಗಡಿ ಮಾಲೀಕರು ಸಂಪಾದನೆ ಖುಷಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೊವೀಡ್ ನಿಯಮ ಗಾಳಿಗೆ ತೂರಿದರು. ಪ್ರಜ್ಞಾವಂತ ನಾಗರಿಕರಿಂದ ಆಕ್ಷೇಪ ವ್ಯಕ್ತವಾಯಿತು. ಗಗನಕ್ಕೇರಿದ…
ಎರಡನೇ ದಿನವೂ ಕಫ್ರ್ಯೂಗೆ ಉತ್ತಮ ಸ್ಪಂದನೆ
April 26, 2021ಚಾಮರಾಜನಗರ, ಏ.25(ಎಸ್‍ಎಸ್)- ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ವಾರಾಂತ್ಯದ ಕಫ್ರ್ಯೂಗೆ ಎರಡನೇ ದಿನವಾದ ಭಾನು ವಾರವೂ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ದಿನವಿಡೀ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆ, ಕ್ಲಿನಿಕ್, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಹಾರಗಳು ಬಂದ್ ಆಗಿತ್ತು. ವಾರಾಂತ್ಯದ ಎರಡನೇ ದಿನದ ಕಫ್ರ್ಯೂ ಅಭೂತಪೂರ್ವ ಯಶ ಕಂಡಿತು. ಬೆಳಗ್ಗೆ 6ಗಂಟೆಯಿಂದ 10…
ಗ್ರಾಮೀಣ ಭಾಗÀಗಳಲ್ಲಿ ಕೋವಿಡ್ ಜಾಗೃತಿಗೆ ಡಿಸಿ ಸೂಚನೆ
April 26, 2021ಚಾಮರಾಜನಗರ, ಏ.25-ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿ ಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು. ಗುಂಡ್ಲುಪೇಟೆ ತಾಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕೋವಿಡ್ ನಿರ್ವಹಣೆ ಸಂಬಂಧ ಅನುಷ್ಠಾನ ಕ್ರಮಗಳ ಪರಿಶೀಲಿ ಸಿದರಲ್ಲದೆ, ನಗರದ ಪ್ರವಾಸಿಮಂದಿರದಲ್ಲಿ ಕೋವಿಡ್ ನಿಯಂತ್ರಣ ಕುರಿತು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರಂಭದಲ್ಲಿ ಪಟ್ಟಣ ನಗರ, ಪ್ರದೇಶ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕೋವಿಡ್ ಸೋಂಕು ಪ್ರಕರಣಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿಯೂ…
ವಾರಾಂತ್ಯ ಕಫ್ರ್ಯೂ; ಚಾಮರಾಜನಗರ ಜಿಲ್ಲೆ ಸ್ತಬ್ಧ
April 25, 2021ಬೆಳಗ್ಗೆ 10ರ ನಂತರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ ರಸ್ತೆಗಿಳಿಯದ ಖಾಸಗಿ ಬಸ್, ಪ್ರಯಾಣಿಕರಿಲ್ಲದೆ ಸಂಚರಿಸಿದ ಬೆರಳೆಣಿಕೆಯ ಸಾರಿಗೆ ಬಸ್ ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್ ಎಂದಿನಂತೆ ಕಾರ್ಯ ಬಿಕೋ ಎನ್ನುತ್ತಿದ್ದ ಪ್ರಮುಖ ರಸ್ತೆ, ವೃತ್ತಗಳು ಗ್ರಾಮೀಣ ಪ್ರದೇಶದಲ್ಲೂ ಕಫ್ರ್ಯೂಗೆ ಬೆಂಬಲ ಚಾಮರಾಜನಗರ, ಏ.24(ಎಸ್‍ಎಸ್) -ಕೋವಿಡ್-19 ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕಫ್ರ್ಯೂಗೆ ಶನಿವಾರ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಫ್ರ್ಯೂ ಹಿನ್ನೆಲೆ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ಏ.23ರ ಶುಕ್ರವಾರ ರಾತ್ರಿ 9 ಗಂಟೆ…
ಕೊಳ್ಳೇಗಾಲದಲ್ಲೂ ಕೊರೊನಾ ಕಫ್ರ್ಯೂ ಯಶಸ್ವಿ
April 25, 2021ಕೊಳ್ಳೇಗಾಲ, ಏ.24(ನಾಗೇಂದ್ರ)- ತಾಲೂಕಿನ ಕೊಳ್ಳೇಗಾಲದಲ್ಲಿ ಶನಿವಾರದ ವಾರಾಂತ್ಯದ ಕಫ್ರ್ಯೂ ಬಹುತೇಕ ಯಶಸ್ವಿಯಾಗಿದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಫ್ರ್ಯೂಗೆ ಬಹುತೇಕ ನಾಗರಿಕರಿಂದ ಬೆಂಬಲ ವ್ಯಕ್ತವಾಗಿದೆ. ಶನಿವಾರ ಹಾಗೂ ಭಾನುವಾರ ದಿನಸಿ, ತರಕಾರಿ, ಹಾಲಿನ ಅಂಗಡಿ, ಮಾಂಸದ ಅಂಗಡಿ, ಮೆಡಿಕಲ್ ಶಾಪ್‍ಗಳಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುವ ಅವಕಾಶವಿದ್ದು, ಜನರಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಕೊಳ್ಳೇಗಾಲ ದಲ್ಲಿ ಶನಿವಾರ ಬೆಳಗ್ಗೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಪ್ರಸಂಗ ಕಂಡು ಬಂತು. ಅಗತ್ಯ…
ಶನಿವಾರವೂ 275 ಸೋಂಕಿತರು ಪತ್ತೆ
April 25, 2021ಚಾಮರಾಜನಗರ, ಏ.24- ಜಿಲ್ಲೆಯಲ್ಲಿ ಶನಿವಾರ 275 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಂದು ಸಾವು ಸಂಭವಿಸಿದೆ. 109 ಮಂದಿ ಗುಣಮುಖ ರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,294ಕ್ಕೆ ಏರಿದೆ. ಚಾಮರಾಜನಗರ ತಾಲೂಕಿನ ಬಾನಳ್ಳಿ ಗ್ರಾಮದ 62 ವರ್ಷ ಮಹಿಳೆ 23ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 122ಕ್ಕೆ ಏರಿದೆ. ಜಿಲ್ಲೆಯ ಇದುವರೆಗೆ ಒಟ್ಟು 9,032 ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 7,596ಮಂದಿ ಗುಣಮುಖರಾಗಿದ್ದಾರೆ. ಶನಿವಾರ…