ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇಂದ್ರ ಆರಂಭ
ಚಾಮರಾಜನಗರ

ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇಂದ್ರ ಆರಂಭ

April 27, 2021
  • 970 ಹೆಚ್ಚುವರಿ ಹಾಸಿಗೆ ಸೌಲಭ್ಯ  450 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ
  • ಜಿಲ್ಲೆಯಲ್ಲಿ ಹಾಸಿಗೆ, ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟನೆ

ಚಾಮರಾಜನಗರ, ಏ.26- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಲಿದ್ದು, ಇದರಿಂದ ಹೆಚ್ಚುವರಿಯಾಗಿ 970 ಹಾಸಿಗೆ ಗಳ ಸೌಲಭ್ಯ ಲಭ್ಯವಾಗಲಿದೆ ಎಂದು ಜಿಲ್ಲಾ ಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದ ವೈದ್ಯಕೀಯ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರ ತೆರೆಯಲು ಪರಿಶೀಲಿಸಲಾಗಿದೆ. ಇನ್ನೂ 2 ವಾರಗಳಲ್ಲಿ ಕೋವಿಡ್ ಕೇರ್ ಕೇಂದ್ರ ಕ್ಕಾಗಿ ಎರಡು ಮಹಡಿಗಳನ್ನು ಪೂರ್ಣ ಗೊಳಿಸಿ ಬಿಟ್ಟುಕೊಡಲಾಗುತ್ತದೆ. ಅಲ್ಲಿಯ ವರೆಗೂ ಮೆಡಿಕಲ್ ಕಾಲೇಜಿನಲ್ಲಿರುವ ಆಡಿಟೋರಿಯಂ ಬಳಸಿಕೊಂಡು 150 ಹಾಸಿಗೆವುಳ್ಳ ಕೋವಿಡ್ ಕೇಂದ್ರ ಆರಂಭಿಸಲಿದ್ದೇವೆ ಎಂದರು.

ಅಲ್ಲದೇ ತಾಲೂಕುಗಳ ಲ್ಲಿರುವ ಹಾಸ್ಟೆಲ್, ವಸತಿ ಶಾಲೆಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಬಳಸಿ ಕೊಳ್ಳಲಾಗುತ್ತಿದೆ. ಹನೂರಿ ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಹಾಸಿಗೆ, ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಯಲ್ಲಿ 120 ಹಾಸಿಗೆ, ಗುಂಡ್ಲುಪೇಟೆಯ ವೀರನಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ 100 ಹಾಸಿಗೆ, ಚಾಮರಾಜನಗರ ತಾಲೂಕಿನ ಮಾದಪುರದ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್‍ನಲ್ಲಿ 40 ಹಾಸಿಗೆಗಳ ಸಾಮ ಥ್ರ್ಯದ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಎಲ್ಲಾ 970 ಹಾಸಿಗೆ ಗಳಿಗೆ ಶೇ.50ರಷ್ಟು ಹಾಸಿಗೆ ಗಳಿಗೆ ಅಂದರೆ ಸುಮಾರು 450 ಹಾಸಿಗೆಗಳಿಗೆ ಆಮ್ಲ ಜನಕ ಸೌಲಭ್ಯ ಅಳವಡಿ ಸಲು ತೀರ್ಮಾನಿಸಲಾ ಗಿದೆ. ವಾತಾವರಣದಲ್ಲಿನ ಆಮ್ಲಜನಕ ಬಳಸಿಕೊಂಡು ಸುಮಾರು 40ರಿಂದ 50 ಜಂಬೊ ಸಿಲಿಂಡರ್ ಸಮ ನಾಗಿರುವ ಆಕ್ಸಿಜನ್ ಪೂರೈಸಬಹದು. ಇದಕ್ಕಾಗಿ ಆಕ್ಸಿಜನ್ ಜನರೇಟರ್ ತಯಾರಿ ಮಾಡಲಾಗುತ್ತದೆ. 300 ಆಕ್ಸಿಜನ್ ಕಾನ್ಸ್ ಟ್ರೇಟರ್‍ಗಳನ್ನು ಖರೀದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತೀ ಕಾನ್ಸ್‍ಟ್ರೇಟರ್ 6ರಿಂದ 7 ಲೀಟರ್ ಆಕ್ಸಿಜನ್ ತಯಾರಿಸು ತ್ತದೆ. ಈ ಆಮ್ಲಜನಕವನ್ನು 450 ಹಾಸಿಗೆ ಗಳಿಗೆ ಬಳಸಲು ಉದ್ದೇಶ ಹೊಂದಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಕ್ಸಿಜನ್‍ಗಾಗಲಿ ಹಾಸಿಗೆಗಳ ವ್ಯವಸ್ಥೆಗೆ ಯಾವುದೇ ಕೊರತೆ ಕಂಡು ಬಂದಿಲ್ಲ. ಸೋಂಕಿತರ ಪೈಕಿ ತೀವ್ರತರ ಲಕ್ಷಣವುಳ್ಳ ಶೇ.10ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶೇ.6ರಷ್ಟು ಜನರಿಗೆ ಮಾತ್ರ ಆಕ್ಸಿಜನ್ ಅವಶ್ಯಕತೆ ಇದೆ. ಇವರಿಗೆ ಅಗತ್ಯವಿರುವ ಆಮ್ಲಜನಕ ಲಭ್ಯವಿದೆ. ಹೀಗಾಗಿ ಜಿಲ್ಲೆ ಯಲ್ಲಿ ಆಕ್ಸಿಜನ್‍ಗಾಗಲಿ ಅಥವಾ ಹಾಸಿಗೆ ಗಳಿಗಾಗಲಿ ಕೊರತೆಯಿದೆ ಎಂಬ ವದಂತಿಗೆ ಜನರು ಕಿವಿಗೊಡಬಾರದು ಎಂದರು. ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿಹೆಚ್‍ಓ ಡಾ. ಎಂ.ಸಿ.ರವಿ, ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಮಹೇಶ್ ಹಾಜರಿದ್ದರು.

Translate »