ಮೈಸೂರಿಂದ ನಿರ್ಗಮಿಸಿದ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು
ಮೈಸೂರು

ಮೈಸೂರಿಂದ ನಿರ್ಗಮಿಸಿದ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು

April 27, 2021

ಮೈಸೂರು, ಏ.26(ಎಂಕೆ)- ರಾಜ್ಯ ದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮಂಗಳವಾರ (ಏ.27) ರಾತ್ರಿಯಿಂದ 14 ದಿನಗಳ ಕಠಿಣ ಕೊರೊನಾ ಕಫ್ರ್ಯೂ ಘೋಷಣೆ ಮಾಡುತ್ತಿದ್ದಂತೆ ವಿದ್ಯಾರ್ಥಿ ಗಳು, ವಲಸೆ ಕಾರ್ಮಿಕರು ಸೋಮವಾರ ಸಂಜೆಯಿಂದಲೇ ತಮ್ಮ ತಮ್ಮ ಊರಿನತ್ತ ತೆರಳಲು ಮುಂದಾದರು.

ಮೈಸೂರು ನಗರದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವ ರೆಗೆ ವಿರಳವಾಗಿದ್ದ ಪ್ರಯಾಣಿಕರ ಸಂಖ್ಯೆ ಸಂಜೆಯಾಗುತ್ತಿದ್ದಂತೆ ಹೆಚ್ಚಾಯಿತು. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಕಡಿ ವಾಣ ಹಾಕಲು ರಾಜ್ಯ ಸರ್ಕಾರ ಏ.27ರ ರಾತ್ರಿ 9 ಗಂಟೆಯಿಂದ ಮುಂದಿನ 14 ದಿನ ಗಳವರೆಗೆ ಲಾಕ್‍ಡೌನ್ ಘೋಷಣೆ ಮಾಡು ತ್ತಿದ್ದಂತೆ ಮೈಸೂರಿನಲ್ಲಿ ನೆಲೆಸಿರುವ ರಾಜ್ಯ ದವರೂ ಸೇರಿ ಬೇರೆ ಬೇರೆ ರಾಜ್ಯಗಳ ಜನರು ಕೂಡ ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.

ಮೈಸೂರಿನಿಂದ ಬೆಂಗಳೂರು, ಮಂಗ ಳೂರು, ಮಡಿಕೇರಿ, ಚಾ.ನಗರ, ಹಾಸನ, ಬಿಜಾಪುರ, ಶಿವಮೊಗ್ಗ ಇನ್ನಿತರೆ ಕಡೆ ಗಳಿಗೆ ಹೋಗುವವರ ಸಂಖ್ಯೆಯ ಜೊತೆಗೆ ಬೆಂಗಳೂರಿನಿಂದ ಮೈಸೂರಿನತ್ತ ಬರುವ ವರ ಸಂಖ್ಯೆಯೂ ಹೆಚ್ಚಾಗಿತ್ತು.

14 ದಿನಗಳು ಕಠಿಣ ಕಫ್ರ್ಯೂ ಸಮಯ ದಲ್ಲಿ ಹಾಸ್ಟೆಲ್‍ನಲ್ಲಿ ಇದ್ದು ಏನು ಮಾಡು ವುದು. ಅಲ್ಲದೆ ಹಾಸ್ಟೆಲ್ ವಾರ್ಡನ್ ಕೂಡ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ತಿಳಿಸಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ರುವ ನಮ್ಮ ಮನೆಗೆ ಹೋಗುತ್ತಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂ.ಎಸ್‍ಸಿ ಓದುತ್ತಿರುವ ವಿದ್ಯಾರ್ಥಿನಿಯರಾದ ಸ್ನೇಹ ಮತ್ತು ರಶ್ಮಿ ‘ಮೈಸೂರು ಮಿತ್ರ’ ನಿಗೆ ತಿಳಿಸಿದರು.
ಅದರಂತೆ ಮೈಸೂರಿನ ಸೆಂಟ್ ಫಿಲೋ ಮಿನಾ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಅಭಿನಂದನ್, ಕಫ್ರ್ಯೂ ಹಿನ್ನೆಲೆ ಬಿಜಾ ಪುರದಲ್ಲಿರುವ ಮನೆಗೆ ತೆರಳುತ್ತಿದ್ದೇನೆ. ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಬರುತ್ತೇನೆ ಎಂದರು. ಅದರಂತೆ ಉತ್ತರ ಪ್ರದೇಶದ ಮೂಲದ ಐವರು ವಲಸೆ ಕಾರ್ಮಿಕರು ನಂಜನಗೂಡಿನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಉಳಿದುಕೊಳ್ಳಲು ವಸತಿ ನೀಡಿ ದ್ದಾರೆ. ಆದ್ದರಿಂದ ಅಲ್ಲಿಗೆ ಹೋಗು ತ್ತಿದ್ದೇವೆ ಎಂದು ತಿಳಿಸಿದರು.

260 ಸಾರಿಗೆ ಬಸ್ ಸಂಚಾರ: ಮೈಸೂರು ಗ್ರಾಮಾಂತರ ವಿಭಾಗದಿಂದ 260 ಬಸ್ ಗಳು ಮೈಸೂರಿನಿಂದ ವಿವಿಧೆಡೆ ಸಂಚ ರಿಸಿವೆ. ಸಂಜೆ ವೇಳೆಗೆ ಬೆಂಗಳೂರಿನಿಂದ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಅದ ರಂತೆ ಹೆಚ್ಚಿನ ಬಸ್‍ಗಳು ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸಿದವು. ಸಾರಿಗೆ ನೌಕರರು ಮುಷ್ಕರದಿಂದ ವಾಪಸ್ ಬಂದಿರುವುದರಿಂದ ಯಾವುದೇ ಸಮಸ್ಯೆ ಗಳು ಉಂಟಾಗಿಲ್ಲ ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್. ಶ್ರೀನಿವಾಸ್ `ಮೈಸೂರುಮಿತ್ರ’ನಿಗೆ ಮಾಹಿತಿ ನೀಡಿದರು.

Translate »