ಶನಿವಾರವೂ 275 ಸೋಂಕಿತರು ಪತ್ತೆ
ಚಾಮರಾಜನಗರ

ಶನಿವಾರವೂ 275 ಸೋಂಕಿತರು ಪತ್ತೆ

April 25, 2021

ಚಾಮರಾಜನಗರ, ಏ.24- ಜಿಲ್ಲೆಯಲ್ಲಿ ಶನಿವಾರ 275 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಂದು ಸಾವು ಸಂಭವಿಸಿದೆ. 109 ಮಂದಿ ಗುಣಮುಖ ರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,294ಕ್ಕೆ ಏರಿದೆ. ಚಾಮರಾಜನಗರ ತಾಲೂಕಿನ ಬಾನಳ್ಳಿ ಗ್ರಾಮದ 62 ವರ್ಷ ಮಹಿಳೆ 23ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 122ಕ್ಕೆ ಏರಿದೆ. ಜಿಲ್ಲೆಯ ಇದುವರೆಗೆ ಒಟ್ಟು 9,032 ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 7,596ಮಂದಿ ಗುಣಮುಖರಾಗಿದ್ದಾರೆ. ಶನಿವಾರ ಚಾಮರಾಜನಗರ ತಾಲೂಕಿನಲ್ಲಿ 130, ಕೊಳ್ಳೇಗಾಲ ತಾಲೂಕಿನಲ್ಲಿ 51, ಗುಂಡ್ಲುಪೇಟೆಯಲ್ಲಿ 48, ಹನೂರಿನಲ್ಲಿ 30, ಯಳಂದೂರು ತಾಲೂಕಿನಲ್ಲಿ ಮೂರು ಪ್ರಕರಣಗಳು ವರದಿ ಯಾಗಿವೆ. ಹೊರ ಜಿಲ್ಲೆಯ ಮೂರು ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ.

 

Translate »