ಹನೂರಲ್ಲೂ ಕಫ್ರ್ಯೂಗೆ ಜನರಿಂದ ಉತ್ತಮ ಬೆಂಬಲ
ಚಾಮರಾಜನಗರ

ಹನೂರಲ್ಲೂ ಕಫ್ರ್ಯೂಗೆ ಜನರಿಂದ ಉತ್ತಮ ಬೆಂಬಲ

April 25, 2021

ಹನೂರು,ಏ.24(ಸೋಮು)- ವಾರಾಂತ್ಯ ಕಫ್ರ್ಯೂಗೆ ಮೊದಲ ದಿನವಾದ ಶನಿವಾರ ಹನೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ತಾಲೂಕು ಕೇಂದ್ರ ಸ್ಥಾನ ಹನೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆಗಳು, ಸೇರಿದಂತೆ ಇನ್ನಿತರೆ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದ್ದವು. ಉಳಿದಂತೆ ವರ್ತಕರು ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿದ್ದರು. ಸಾರ್ವ ಜನಿಕರು ಸಹ ಉತ್ತಮವಾಗಿ ಸ್ಪಂದಿಸಿದ್ದು ಕಂಡು ಬಂದಿತು. ಬೆರಳೆಣಿಕೆಯಷ್ಟು ಕೆಎಸ್ ಆರ್‍ಟಿಸಿ ಬಸ್ ಹಾಗೂ ಅಂತರಾಜ್ಯ ತಮಿಳು ನಾಡಿನ ಬಸ್‍ಗಳು ರಸ್ತೆಗಿಳಿದಿದ್ದು ಕಂಡು ಬಂದಿತು. ಆದರೆ ಪ್ರಯಾಣಿಕರು ಹೆಚ್ಚಾಗಿ ಕಂಡು ಬರಲಿಲ್ಲ. ಖಾಸಗಿ ಬಸ್‍ಗಳು ರಸ್ತೆಗಿಳಿದಿರಲಿಲ್ಲ. ಎಲ್ಲೋ ಬೋರ್ಡ್ ಕಾರುಗಳು ಎಂದಿನಂತೆ ಕಾರ್ಯನಿರ್ವ ಹಿಸಿದ್ದವು. ಹೋಟೆಲ್‍ಗಳು ಮುಚ್ಚಲ್ಪಟ್ಟಿದ್ದವು. ಪೊಲೀಸರು ಇಂದು ಬೆಳಗ್ಗೆ 6 ರಿಂದ 10ಗಂಟೆ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರು. ನಂತರ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲು ಸೂಚಿಸಿದರು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೆಲವು ಗ್ರಾಮಗಳಲ್ಲಿಯೂ ಸಹ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ವಾರಂತ್ಯ ಕಫ್ರ್ಯೂಗೆ ಬೆಂಬಲ ವ್ಯಕ್ತ ಪಡಿಸಿದ್ದು ವಿಶೇಷವಾಗಿತ್ತು.

Translate »